ಮಸ್ಕಿ ಕ್ಷೇತ್ರದಲ್ಲಿ ಹೊಸ ಅಲೆ ಆರಂಭವಾಗಿದೆ- ಅಲ್ಲಂ ವೀರಭದ್ರಪ್ಪ

e-ಸುದ್ದಿ, ಮಸ್ಕಿ
ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಹೊಸ ಅಲೆ ಶುರುವಾಗಿದೆ. ಇತ್ತೀಚಿನ ದಿನಗಳಲ್ಲಿ ಅಭ್ಯರ್ಥಿಗಳು ಮತದಾರರಿಗೆ ಹಣ ಕೊಡುವದು ವಾಡಿಕೆ. ಆದರೆ ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅವರಿಗೆ ಗ್ರಾಮಸ್ಥರು ಹಣ, ಕುರಿ ದಾನ ಮಾಡುವ ಮೂಲಕ ಶಕ್ತಿ ತುಂಬುತ್ತಿರುವದು ಹೊಸ ಅಲೆಗೆ ಕಾರಣವಾಗಿದೆ ಎಂದು ಕಾಂಗ್ರೆಸ್‍ನ ಹಿರಿಯ ಮುಖಂಡ ಅಲ್ಲಂ ವೀರಭದ್ರಪ್ಪ ಹೇಳಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿರುವ ಕಾಂಗ್ರೆಸ್ ಕಾಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್ ಇಲ್ಲ. ಪ್ರತಾಪಗೌಡ ಪಾಟೀಲ ವರ್ಸಸ್ ಮತದಾರರು ನಡುವೆ ಚುನಾವಣೆ ನಡೆದಿದೆ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್ ಪಕ್ಷ ಎಲ್ಲಾ ಸಮುದಾಯದವರ ಪಕ್ಷ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಹಾಲು ಮತದವರು ಸೇರಿಸಿದಂತೆ ಎಲ್ಲಾ ಸಮುದಾಯದವರು ಕಾಂಗ್ರೆಸ್ ಜತೆಗಿದ್ದಾರೆ. ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಕಾಂಗ್ರೆಸ್‍ನ ರಾಜ್ಯ ರಾಜಕಾರಣದಲ್ಲಿ ದಿಕ್ಸೂಚಿಯಾಗಲಿದೆ ಎಂದು ಅಲ್ಲಂ ಹೇಳಿದರು.
ಬಿಜೆಪಿಯಲ್ಲಿ ಆತಂರಿಕ ಕಚ್ಚಾಟ ಶುರುವಾಗಿದೆ. ಈಶ್ವರಪ್ಪ ಬುದ್ದಿವಂತರು ತಮ್ಮ ಪಕ್ಷದಲ್ಲಿ ನಡೆದಿರುವ ದುರಾಡಳಿತದ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆದಿರುವುದೇ ಸಾಕ್ಷಿ ಎಂದರು.
ಈ ಬಾರಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೆ ಗೆಲ್ಲುತ್ತದೆ. ಅನುಕಂಪದ ಅಲೆ ಅಂತರಗಾಮಿಯಾಗಿ ಸುಳಿದಾಡುತ್ತಿದೆ ಎಂದರು.
ಮಾಜಿ ಎಂಎಲ್ಸಿ ಶರಣಪ್ಪ ಮಟ್ಟೂರು ಮಾತನಾಡಿ ಈ ಸಲದ ಮಸ್ಕಿ ಉಪಚುನಾವಣೆ ಹಣ ಮತ್ತು ಜನ ಬಲದ ಚುನಾವಣೆಯಾಗಿ ಮಾರ್ಪಟ್ಟಿದೆ. ಬಿಜೆಪಿಯವರು ಹಣದಿಂದ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಆದರೆ ಜನ ಕಾಂಗ್ರೆಸ್ ಪರವಾಗಿದ್ದಾರೆ ಎಂದರು.
ಮಸ್ಕಿ ಕ್ಷೇತ್ರದ ಉಸ್ತುವಾರಿ ಮಾಜಿ ಸಂಸದ ಧೃವನಾರಯಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ, ಶಿವರಾಜ ಚುಕ್ಕಿ, ಶ್ರೀಶೈಲಪ್ಪ ಬ್ಯಾಳಿ, ರಾಘವೇಂದ್ರ ನಾಯಕ ಹಾಗೂ ಇತರರು ಇದ್ದರು.

Don`t copy text!