ಮುಗ್ದ ನಗು
ಮಲ್ಲಿಗೆ ನಗುವಂತಾ
ಮುದ್ದಾದ ಚೆಲುವೆನೀ
ಮೆಲ್ಲಗೆ ನಗುತ ಮನಸೆಳೆದೆ
ಮನದಲ್ಲಿ ನೀನು ನೆಲೆನಿಂತೆ |
ಕಾಯ ಕರ್ರನೆ ಕಂದಿದಡೆನು
ಕಾಯಕದಿ ಕಲ್ಯಾಣ
ಕಂಡವರು ನೀವೆಲ್ಲಾ
ಕಾಯಕಕೆ ಮರ್ಯಾದೆ ತಂದವರು||
ದಣಿವರಿಯದ ಜೀವ ನೀವು
ದುಡಿಮೆಯಲಿ ದಡ ಸೇರಿದವರು
ಹೊಟ್ಟೆಪಾಡು ಬಟ್ಟೆಗಾಗಿ
ದುಡಿದು ಜೀವ ತೇದವರು ||
ಮೈಗೆ ಅಂಟಿದ ಮಣ್ಣು ನಿಮಗೆ
ಪರಿಮಳದ ಪೌಡರು
ಮುತ್ತಿನಂತ ಬೆವರ ಹನಿಯು
ಮುತ್ತಿನ ಕಿವಿಯೋಲೆಯು ||
ಸ್ವಾಭಿಮಾನದ ಸೆಲೆಯು ನೀವು
ಅಹಂಕಾರ ಅರಿಯರು
ಮುಗ್ದ ಸ್ನಿಗ್ದ ನಗುವು ನಿಮದು
ಬಸವ ಭಾವ ನಿಮ್ಮದು.||
–ಸವಿತಾ ಮಾಟೂರು, ಇಲಕಲ್ಲ