ಶರಣರ ಅಷ್ಟಾವರಣದಲ್ಲಿ ಮಂತ್ರ
ಬಸವ ಧರ್ಮಿಗಳಿಗೆ ಅಷ್ಟಾವರಣವೆ ಅಂಗ , ಪಂಚಾಚಾರವೇ ಪ್ರಾಣ ಮತ್ತು ಷಟಸ್ಥಲವೆ ಆತ್ಮ ಎಂದು ಬಲವಾಗಿ ನಂಬಿದ ಶರಣ ತತ್ವ ಮತ್ತು ಸಿದ್ಧಾಂಥಗಳು.
ಅಷ್ಟಾವರಣ( Eight Aids ) ಇವು ಧಾರ್ಮಿಕ ಕವಚಗಳು .ಇವುಗಲ್ಲಿ ಗುರು ಲಿಂಗ ಜಂಗಮ -ಒಂದು ಪರಿಶುದ್ಧ ಭಾವವಾಗಿ ಜೀವಾತ್ಮನ ಪ್ರತೀಕಗಳು.
ವಿಭೂತಿ – ಇದು ಶರಣರ ಗಟ್ಟಿಮುಟ್ಟಾದ ಸಂಶೋಧಿತ ಸಂಕೇತವು . ರುದ್ರಾಕ್ಷಿ -ಇದು ಭಾರತೀಯ ಪರಂಪರೆಯಲ್ಲಿ ಮಹತ್ವ ಪಡೆದ ಒಂದು ಔಷಧಿಯುಕ್ತ ಸಸ್ಯದ ಫಲ .
ಶಿವಯೋಗ ಸಾಧನೆಗೆ ಬಸವಣ್ಣನವರು -ಇಂತಹ ಆವರಣಗಳ ಅಗತ್ಯವನ್ನು ಸಮರ್ಥಿಸಿಕೊಂಡು ತನ್ಮೂಲಕ ಹೊಸ ದಾರಿ ತೋರಿದ ಮಂತ್ರ ಪುರುಷ .
ಓಂ ನಮ: ಶಿವಾಯ ಇದು ಷಡಕ್ಷರಿ ಮಂತ್ರ.
ಇದನ್ನು ಯತಾವತ್ತಾಗಿ ಅಪ್ಪ ಬಸವಣ್ಣನವರು ಬಳೆಸಿ ಕೊಂಡರೂ ಸಹಿತ .ಮಹಾಮಾನವ ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮದಲ್ಲಿ ಅದು ತನ್ನ ಸ್ಥಾನವನ್ನು ವಿಭಿನ್ನ ಅರ್ಥದಲ್ಲಿ ನಮಗೆ ತೋರುತ್ತದೆ. .ಮ೦ತ್ರದಲ್ಲಿ ತನ್ನ ಸಮಕಾಲೀನ ಶರಣರು ಬಸವಾಕ್ಷರವನ್ನು ಸೇರಿಸಿ ಸ್ತುತಿಸಿದ್ದಾರೆ.
ಬಸವಣ್ಣನೇ ಮಂತ್ರ
ಸೀಮೆಸಂಬಂಧಗಳ ಮೀರಿಪ್ಪ ಮಂತ್ರ
ರಾಜಮಂತ್ರನು ತಾನು ಪಂಚಾಕ್ಷರಿ
ಪಂಚಾಕ್ಷರಿ
ಪಂಚಾಕ್ಷರಿಯ ಗುಣದ
ಬಸವಾಕ್ಷ ತ್ರಯದ
ದ್ಯಾನ ಮೌನದ ಗುಣದ ಸತ್ಯವಿಡಿದು,
ಆನಂದ ತ್ರಲಿಂಗ ಮೂಲಮಂತ್ರಕ್ಕೀಗ
ಬಸವಾಕ್ಷರವು ಮಾತೆ
ಕಪಿಲಸಿದ್ದಮಲ್ಲಿರ್ಜುನಾ
ಅದೇ ರೀತಿ –
ಪ್ರಥಮ ನಾಮಕ್ಕಿಗ ಬಸವಾಕ್ಷರವೆ ಬೀಜ
ಗುರುನಾಮ ಮೂಲಕ್ಕೆ ಅಕ್ಷರಾOಕ
ಬಸವಣ್ಣ ಬಸವಣ್ಣ ಬಸವಣ್ಣ
ಎಂದೀಗದೆಸೆಗೆಟ್ಟೆ ನೈ ಗುರುವೆ
ಕಪಿಲಸಿದ್ದಮಲ್ಲಿಕಾರ್ಜುನಾ
ಎಂದು ಅತ್ಯಂತ ಮುಕ್ತವಾಗಿ ಸಿದ್ಧರಾಮ ಶರಣರು ಬಸವಾಕ್ಷರಗಳ ಸೇರ್ಪಡೆಯ ಅಗತ್ಯ ಹೇಳಿದ್ದಾರೆ..
ಮಹಾಯೋಗಿ ಅಲ್ಲಮರು
“ಬ”ಎಂಬಲ್ಲಿ ಎನ್ನಭವಹರಿಯಿತ್ತು
“ಸ”ಎಂಬಲ್ಲಿ ಸರ್ವಜ್ಞನಾದೇನು
“ವ”ಎಂಬಲ್ಲಿ ವಚಿಸುವಡೆ
ಚೈತನ್ಯಾತ್ಮಕನಾದೆನು
ಇಂತಿ ಬಸವಾಕ್ಷರತ್ರಯವೆನ್ನ
ಸರ್ವಂಗದಲ್ಲಿ
ತೊಳಗಿಬೆಳಗುವ ಭೇದವನರಿದು
ಆನೂ ನೀನೂ ಬಸವಾ ಬಸವಾ ಬಸವಾ ಏನುತಿರ್ದನಯ್ಯ
ಗುಹೇಶ್ವೇರಾ.
ಧರ್ಮವು ಸಾರ್ವತ್ರಿಕಗೊಳಿಸಿದ ಬಸವಣ್ಣ ಮಂತ್ರ ಪರುಷ .
ಮಂತ್ರವು ಅಧ್ಯಾತ್ಮಕ ಸಾಧನೆಯಲ್ಲಿ ಮಹತ್ತರ ಪಾತ್ರವಹಿಸಿದೆ . ಪ್ರಾರ್ಥನೆ ಬಹಿರಂಗವಾದರೆ ಮಂತ್ರವು ಅಂತರಂಗದ ಅಜಪ ಜಪ . ನಿತ್ಯ ಉಸಿರಿನಲ್ಲಿ ಮಂತ್ರವು ಸ್ಥಾಪಿತಗೊಂಡಾಗ ಆ ಉಸಿರೇ ಜಪ ತಪ ಮಂತ್ರವಾಗುತ್ತದೆ. ಮಂತ್ರವು ಅಂಗ ಲಿಂಗ ಸಂಗಗಳ ಕೊಂಡಿ .ಶರೀರ ಮನಸ್ಸು ಆತ್ಮಗಳ ಸಮಾಗಮಕ್ಕೆ ಮಂತ್ರ ಅತ್ಯಗತ್ಯ . ಮೌನವಾಗಿ ಮಂತ್ರವನ್ನು ಆರೋಹಣ ಮತ್ತು ಅವರೋಹಣವಾಗಿ ಉಸಿರಿಸುವಡೆ ಮಂತ್ರವು ಶಿವಯೋಗ ಸಿದ್ಧಿಗೆ ಶಕ್ತಿಗೆ ಸಾಧಕ .
ಇತ್ತಿಚೀನ ಅನೇಕ ಮಹಾ ಪುರುಷರಾದ ಅಥಣಿಯ ಶ್ರೀ ಮುರುಗೆಂದ್ರ ಶಿವಯೋಗಿಗಳು ಮುರುಗೋಡದ ಶ್ರೀ ಮಹಾಂತ ಶಿವಯೋಗಿಗಳು .ಕಲ್ಲೆಮಠದ ಶ್ರೀಗಳು ಓಂ ನಮ: ಶಿವಾಯದ ಜೊತೆಗೆ ಬಸವ ಅಕ್ಷರಗಳನ್ನು ಬಳಸಿದ್ದಾರೆ.
ಸ್ರಷ್ಟಿ ಸ್ಥಿತಿ ಲಯದ ನಿತ್ಯ ಅರಿವಿನ ಯಂತ್ರವು ಮಂತ್ರವಾಗುತ್ತದೆ. ತ್ರಿಕರ್ಣಗಳ ಶುದ್ಧಿಗೆ ಮಂತ್ರ ಅತ್ಯಗತ್ಯ .ಮಂತ್ರ ಬಾಹ್ಯ ಉಚ್ಚರಿಸುವ ಶಬ್ದಗಳಲ್ಲ ಅಂತರಂಗದಲ್ಲಿ ಬಳಕೆಯಾಗುವ ವಿಕಾಸದ ನಿರಂತರ ಮಂತ್ರ ಶಕ್ತಿ .
ಕಾರಣ *”ಬಸವ ಓಂ ನಮ:ಶಿವಾಯ” ಅಥವಾ “ಓಂ ನಮ:ಶಿವಾಯ ಬಸವ” ಅಂತಾ ಮಂತ್ರ ಬಳಸುವುದು ಸೂಕ್ತ* ಅಂತಾ ನನ್ನ ವ್ಯಕ್ತಿಗತ ಅಭಿಮತ .ಹೊಸ ದಾರಿ ತೋರಿದ ಮಹಾ ಮಹಿಮ ಬಸವಣ್ಣನ ಅಕ್ಷರಗಳು ಮಂತ್ರದಲ್ಲಿ ಕೂಡಿದರೆ ಅದು ಚೈತನ್ಯದ ಪ್ರತೀಕವಾಗುವುದು.ಮಂತ್ರಗಳು ಗೌಪ್ಯವಾಗಿ ಪರಿಶುದ್ಧ ಮನದಿಂದ ಲಿಂಗ ಯೋಗದ ಸಮಯದಲ್ಲಿ ಮಂತ್ರ ಪಠಿಸಿದಲ್ಲಿ ಮೆದುಳಿನ ಆಜ್ಞಾ ಚಕ್ರ ಗ್ರಂಥಿ (Pineal Gland ) ಜಾಗೃತಗೊಂಡು ಶಕ್ತಿ ಸಂಚಯನಗೊಳ್ಳುತ್ತದೆ .
ಇದು ಪುನರ್ವಿಮರ್ಶೆಗೆ ಒಳಪಡಿಸುವ ಸೂಕ್ಷ್ಮ ಹಾಗು ಆಧ್ಯಾತ್ಮಿಕ ಚಿಂತನೆಯಾಗಿದೆ.
–ಡಾ .ಶಶಿಕಾಂತ.ಪಟ್ಟಣ.ಪೂನಾ