ಕಪ್ಪು ನೆಲ

ಕಪ್ಪು ನೆಲ

ಕಪ್ಪು ನೆಲದಲ್ಲಿ
ಬಿಳಿ ಮುತ್ತುಗಳ ಹಂದರ
ಕಷ್ಟಗಳ ನೂಕಾಚೆ
ನಗು ಒಂದೇ ಸುಂದರ

ದುಡಿದ ದೇಹ
ದಣಿದ ಮನಸು
ಮುಖಾರವಿಂದಕ್ಕೆ
ಜೀವಜಲದ ಸಿಂಚನ

ಹದಿಹರೆಯದ ಹಂಗಾಮ
ಕಣ್ತುಂಬ ಕನಸುಗಳು
ನೊಡುವ ನೊಟದಲ್ಲಿ
ನೂರಾರು ಆಸೆಗಳು

ಕಪ್ಪು ದೇಹಕೆ
ಮೈತುಂಬ ಮಣ್ಣು
ಮಣ್ಣಿನಲ್ಲಿ ಅನ್ನ
ಮಣ್ಣಿನಲ್ಲಿ ಚಿನ್ನ

ನಿರಾಡಂಬರ ಸುಂದರಿ
ನಿನಗಿಲ್ಲ ಘಮ್ಮೆನ್ನುವ ಪೌಡರು
ನೀ ಸೂಸುತಿ ಮಣ್ಣು
ಬೆವರಿನ ಸುಗಂಧ ವಾಸನೆ

ಕಾದ ನೆಲಕ್ಕೆ ಮೊದಲ
ಮಳೆಯ ಹನಿ ಅಮೃತ

ಘಮ್ಮನ್ನುವ ಸುಹಾಸನೆ

ಸೌಗಂಧಿಕ ಪರಿಮಳ

ಕಪ್ಪು ನೆಲದಲ್ಲಿ
ಬಿಳಿ ಮುತ್ತುಗಳ ಹಂದರ …….

ಸೌವೀ. ಮಸ್ಕಿ

Don`t copy text!