e-ಸುದ್ದಿ, ಮಸ್ಕಿ
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಲ್ಲಂ ವೀರಭದ್ರಪ್ಪ ಪಟ್ಟಣದ ವಿವಿಧ ವಾರ್ಡಗಳಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪರ ಶುಕ್ರವಾರ ಪ್ರಚಾರ ಮಾಡಿದರು.
ಮಸ್ಕಿ ಕ್ಷೇತ್ರ ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿ ಗೆದ್ದಿದ್ದಾರೆ. ಆದರೆ ಈ ಭಾರಿ ಪ್ರತಾಪಗೌಡ ಪಾಟೀಲ ಆಮಿಷಕ್ಕೆ ಬಲಿಯಾಗಿ ಪಕ್ಷ ಬಿಟ್ಟು ಹೋಗಿದ್ದಾರೆ. ಅವರಿಗೆ ತಕ್ಕಪಾಠ ಕಲಿಸಬೇಕಾದರೆ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವೀಹಾಳ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಅಲ್ಲಂ ವೀರಭದ್ರಪ್ಪ ಪ್ರತಿ ಮನೆ ಮುಂದೆ ಕೈ ಮುಗಿದು ತನ್ನ ಪರಿಚಯ ಹೇಳಿಕೊಂಡು ಮತದಾರರ ಪರಿಚಯ ಮಾಡಿಕೊಂಡು ಯೋಗ ಕ್ಷೇಮ ವಿಚಾರಿಸುತ್ತ ಮತಯಾಚನೆ ಮಾಡುತ್ತತಿರುವದು ಕಂಡು ಬಂದಿತು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಸ್ಕಿ ಕ್ಷೇತ್ರಕ್ಕೆ 2 ಸಾವಿರ ಕೋಟಿ ರೂ ನೀಡಿ ಅಭಿವೃದ್ದಿಗೆ ಸಹಕರಿಸಿದ್ದರು. ಅದನ್ನು ಮರೆತ ಪ್ರತಾಪಗೌಡ ಪಾಟೀಲ ಬಿಜೆಪಿಗೆ ಜಿಗಿದಿದ್ದಾರೆ ಇದು ಯಾವ ನ್ಯಾಯ ನೀವೇ ಯೋಚಿಸಿ ಎಂದು ಮತದಾರರಿಗೆ ಕೇಳುತ್ತಿರುವ ದೃಶ್ಯ ಕಂಡು ಬಂದಿತು.
ಜಿ.ಪಂ. ಮಾಜಿ ಅಧ್ಯಕ್ಷ ಶ್ರೀಶೈಲಪ್ಪ ಬ್ಯಾಳಿ, ಕೃಷ್ಣ ಚಿಗರಿ ಹಾಗೂ ಇತರರು ಅಲ್ಲಂ ವೀರಭದ್ರಪ್ಪನವರ ಜತೆಗಿದ್ದರು.