ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯ ಮಸ್ಕಿ ಕ್ಷೇತ್ರಕ್ಕೆ ಆಗಮನ

e-ಸುದ್ದಿ, ಮಸ್ಕಿ
ಏಪ್ರಿಲ್ 5 ಹಾಗೂ 6 ರಂದು ಮಸ್ಕಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಚಾರ ನಡೆಸಲಿದ್ದಾರೆ ಎಂದು ಕ್ಷೇತ್ರದ ಉಸ್ತುವಾರಿ ಹಾಗೂ ಮಾಜಿ ಸಂಸದ ಧೃವನಾರಾಯಣ ತಿಳಿಸಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈಗಾಗಲೇ ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಪ್ರಚಾರ ಕಾರ್ಯ ನಡೆಸಿದ್ದಾರೆ. ಜತೆಗೆ ಪಕ್ಷದ ಮುಖಂಡರು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏ.5 ರಂದು ಬೆಂಗಳೂರಿನಿಂದ ತಾವರಗೇರಾಗೆ ಆಗಮಿಸಿ ಮಸ್ಕಿ ಕ್ಷೇತ್ರದ ಉಮಲೂಟಿ, ಕಲಮಂಗಿ ಗ್ರಾಮಗಳಲ್ಲಿ ಪ್ರಚಾರ ನಡೆಸಿ ತುರುವಿಹಾಳ ಪಟ್ಟಣದಲ್ಲಿ ಸಾರ್ವಜನಿಕ ಸಭೆ ಕಾರ್ಯಕ್ರಮದಲ್ಲಿ ಭಾಗವಹಿಸುವವರು. ನಂತರ ಗುಂಜಳ್ಳಿ, ವಿರಾಪಾಪೂರ, ಅರಳಹಳ್ಳಿ, ಗೌಡನಭಾವಿ, ಬಳಗಾನೂರು ಗ್ರಾಮಗಳಿಗೆ ತೆರಳಿ ಪ್ರಚಾರ ನಡೆಸಿ ಸಿಂಧನೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿಸಿದರು.
ಏ.6 ರಂದು ಕ್ಷೇತ್ರದ ಪಾಮನಕೆಲ್ಲೂರು, ಅಮೀನಗಡ, ಮಲ್ಲದಗುಡ್ಡ, ಹಿರೇದಿನ್ನಿ, ತೋರಣದಿನ್ನಿ, ಹಾಲಾಪೂರ, ಸಂತೆಕೆಲ್ಲೂರು ಹಾಗೂ ಮೆದಿಕಿನಾಳ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವರು ಎಂದರು.
ಮಾಜಿ ಎಮ್ಮೆಲ್ಸಿ ಶರಣಪ್ಪ ಮಟ್ಟೂರು, ಬಿ.ವಿ.ನಾಯಕ, ಎಚ್.ಬಿ.ಮುರಾರಿ, ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಇದ್ದರು.

Don`t copy text!