ಶಿರಾ ಮತ್ತು ಕೆ.ಆರ್.ಪೇಟೆಯಂತೆ ಮಸ್ಕಿ ಕ್ಷೇತ್ರದಲ್ಲಿ ಕಮಲ ಅರಳುವದು ಗ್ಯಾರಂಟಿ-ವಿಜಯೇಂದ್ರ


e-ಸುದ್ದಿ, ಮಸ್ಕಿ
ಶಿರಾ ಮತ್ತು ಕೆ.ಆರ್.ಪೇಟೆಯಲ್ಲಿ ಬಿಜೆಪಿಯ ಕಮಲ ಅರಳಿದಂತೆ ಮಸ್ಕಿ ಕ್ಷೇತ್ರದಲ್ಲಿ ಏ.17 ರಂದು ಬಿಜೆಪಿ ಪಕ್ಷದ ಕಮಲ ಅರಳುವದು ಸೂರ್ಯ ಚಂದ್ರರಷ್ಟೆ ಗ್ಯಾರಂಟಿ. ಪ್ರತಾಪಗೌಡ ಪಾಟೀಲ ಗೆಲವು ಶತಃಸಿದ್ಧ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ಈ ಚುನಾವಣೆಯ ನಂತರ ಗಂಟು ಮೂಟೆ ಕಟ್ಟಿಕೊಂಡು ಅಸ್ಥಿತ್ವವ ಕಳೆದುಕೊಳ್ಳಲಿದೆ. ಪ್ರತಾಪಗೌಡ ಪಾಟೀಲರು 20 ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಇಂದಿನ ದಿನದಲ್ಲಿ ಗ್ರಾ.ಪಂ.ಸದಸ್ಯರು ಗೆದ್ದು ಬಂದವರು ರಾಜಿನಾಮೆ ನೀಡಿ ಎಂದರೆ ನೀಡುವುದಿಲ್ಲ. ಆದರೆ ಪ್ರತಾಪಗೌಡ ಪಾಟೀಲ ಗೆದ್ದ 48 ಗಂಟೆಯಲ್ಲಿ ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿ ಎಂದು ರಾಜಿನಾಮೆ ನೀಡಲು ಮುಂದಾಗಿದ್ದರು. ಸಮಿಶ್ರ ಸರ್ಕಾರದಲ್ಲಿ ದುರಾಡಳಿತ, ಸ್ವಜನ ಪಕ್ಷಪಾತ, ಕ್ಷೇತ್ರಗಳ ಅಭಿವೃದ್ದಿಗೆ ಹಿನ್ನಡೆಯಿಂದಾಗಿ ರಾಜ್ಯದಲ್ಲಿ 17 ಜನ ರಾಜಿನಾಮೆ ನೀಡಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ ಪ್ರತಾಪಗೌಡ ಪಾಟೀಲ ರಾಜ್ಯದ ಅಭಿವೃದ್ದಿಗೆ ಮುನ್ನುಡಿ ಬರೆದಿದ್ದಾರೆ ವಿಜಯೇಂದ್ರ ಎಂದು ಹಾಡಿ ಹೊಗಳಿದರು.
ಕೆ.ಆರ್.ಪೇಟೆಯಲ್ಲಿ ನೀರು ಕೊಡುವುದಾಗಿ ಮಾತು ಕೊಟ್ಟ ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ತಾಕ್ಕತ್ತು ಉಳ್ಳವರು ಅದರಂತೆ ಮಸ್ಕಿ ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾರೆ ಎಂದು ವಿಜೆಂದ್ರ ಭರವಸೆ ನೀಡಿದರು.
ಕಾಂಗ್ರೆಸ್‍ನವರ ಟೀಕೆ ಟಿಪ್ಪಣಿಗೆ ನಾನು ಮಾತಿನ ಮೂಲಕ ಉತ್ತರ ಕೊಡಲಾರೆ. ನಮ್ಮ ಬಿಜೆಪಿ ಕಾರ್ಯಕರ್ತರು ಪ್ರತಾಪಗೌಡ ಪಾಟೀಲರನ್ನು ಗೆಲ್ಲಿಸುವ ಮೂಲಕ ಉತ್ತರ ಕೊಡಲಿದ್ದಾರೆ ಎಂದರು..
ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಮಾತನಾಡಿ ಪ್ರತಾಪಗೌಡ ಪಾಟೀಲರ ಗೆಲುವಿಗಾಗಿ ಎಲ್ಲಾ ಮುಖಂಡರು ಉಪಚುನಾವಣೆಯಲ್ಲಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.
ಬೂತ್ ಅಧ್ಯಕ್ಷರಿಗೆ ಇದೇ ಮೊದಲ ಬಾರಿಗೆ ನೇಮಬೊರ್ಡ ಕೊಡುವ ಮೂಲಕ ಅಧ್ಯಕ್ಷರಿಗೆ ಗೌರವ ಕೊಡುವ ಕೆಲಸ ಬಿಜೆಪಿ ಮಾಡುತ್ತಿದೆ. ಕಾರ್ಯಕರ್ತರುನ್ನು ಬಿಜೆಪಿ ಗೌರವದಿಂದ ನೊಡಿಕೊಳ್ಳುತ್ತದೆ ಎಂದು ರಾಮುಲು ಹೇಳಿದರು.
ಕಾಂಗ್ರೆಸ್‍ನವರದು ಎಲುಬಿಲ್ಲದ ನಾಲಿಗೆ ಬಿ.ವೈ.ವಿಜಯೇಂದ್ರ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಅದು ಸರಿಯಲ್ಲ. ಮುಖ್ಯಮಂತ್ರಿಯ ಮಗನಾಗಿ ತಂದೆಯ ಸರ್ಕಾರ ಚನ್ನಾಗಿ ನಡೆಯಲಿ ಎಂಬ ಕಾರಣಕ್ಕೆ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ನಾನು ಮಂತ್ರಿಯಾಗಿದ್ದೇನೆ. ನನಗೆ ಜನರು ಗೌರವಕೊಡುತ್ತಿದ್ದಾರೆ. ಅದರಂತೆ ಬಿ.ವೈ.ವಿಜೇಂದ್ರ ಮುಖ್ಯಮಂತ್ರಿ ಮಗ ಎಂಬ ಕಾರಣಕ್ಕೆ ಹೆಚ್ಚು ಗೌರವ ಕೊಡುತ್ತಾರೆ ಇದರಲ್ಲಿ ತಪ್ಪೇನು ಎಂದು ರಾಮುಲು ಕಾಂಗ್ರಸ್ನನವರನ್ನು ಪ್ರಶ್ನಿಸಿದರು.
ಕಾಂಗ್ರೆಸ್ ಈಗಾಗಲೇ ಮಣ್ಣು ಮುಕ್ಕಿದೆ. ಅದೇ ರೀತಿ ಮಸ್ಕಿ ಕ್ಷೇತ್ರದಲ್ಲಿ ಮುಣ್ಣು ಮುಕ್ಕುತ್ತಿದೆ ಎಂದು ಭವಿಷ್ಯ ನುಡಿದರು.
ಮಾಜಿ ಶಾಸಕ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಮಾತನಾಡಿ ನನ್ನ ಗೆಲವು ನನಗಷ್ಟೆ ಗೆಲುವಾಗಲಾರದು ಬಿಜೆಪಿ ಮತ್ತು ಪಕ್ಷದ ಶಸ್ತಿನ ಸಿಪಾಯಿಗಳ ಕಾರ್ಯಕರ್ತರ ಗೆಲುವಾಗಲಿದೆ. ಬರುವ 15 ದಿನಗಳನ್ನು ಕಾರ್ಯಕರ್ತರು ತಪ್ಪಸ್ಸು ಮಾಡಿದಂತೆ ಮತದಾರರ ಮನೊಲಿಸಿ ಮತಗಟ್ಟೆಗೆ ಕರೆತಂದು ಮಾತದಾನ ಮಾಡಿಸುವ ಮೂಲಕ ಬಿಜೆಪಿಗೆ ಗೆಲವು ನೀಡಿ ಜನರ ಸೇವೆ ಮಾಡುವ ಅವಕಾಶ ಕಲ್ಪಿಸಿರಿ ಎಂದು ಮನವಿ ಮಾಡಿದರು.
ಶಾಸಕ ರಾಜುಗೌಡ ಮಾತನಾಡಿ ನಾವು ಬೇಡರು ಭೇಟೆ ಆಡುವುದು ನಮ್ಮ ಕುಲಕಸುಬು. ಆದರೆ ನಾವು ಮನುಷ್ಯರ ಭೇಟೆ ಆಡುವುದಿಲ್ಲ ಮತ ಬೇಟೆ ಆಡುತ್ತೇವೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಿರಿಯ ರಾಜಕಾರಣಿ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರವಾಗಿ ಮಾತನಾಡುವದನ್ನು ನಿಲ್ಲಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ಯುವ ಶಾಸಕರಾದ ನಾವು ನಿಮ್ಮನ್ನು ನೋಡಿ ಕಲಿಯುತ್ತೇವೆ. ಆದರೆ ನೀವು ನಿಮಗಿಂತ ಮೊದಲ ಮುಖ್ಯಮಂತ್ರಿಯಾದ ಯಡಿಯೂರಪ್ಪನವರನ್ನು ಗೇಲಿ ಮಾಡುವುದು ನಿಮ್ಮ ಹಿರಿತನಕ್ಕೆ ಶೋಭೆ ತರುವುದಿಲ್ಲ ಎಂದು ರಾಜುಗೌಡ ಟೀಕಿಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಬೂತ್ ಅಧ್ಯಕ್ಷರುಗಳಿಗೆ ನಾಮಫಲಕ ವಿತರಿಸಿದರು. ಸಂಸದ ಕರಡಿ ಸಂಗಣ್ಣ, ಅಮರೇಶ್ವರ ನಾಯಕ್. ಸಿದ್ದೇಶ ಬಳ್ಳಾರಿ ಮಾತನಾಡಿದರು.
ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಎ.ಎಸ್.ನಡಹಳ್ಳಿ, ಹಾಲಪ್ಪ ಆಚಾರ, ಭಾರತಿ ಶಟ್ಟಿ, ತಮ್ಮೇಶಗೌಡ, ಹನುಮನಗೌಡ ಬೆಳಗುರ್ಕಿ, ಚಜಿ.ಪಂ.ಅಧ್ಯಕ್ಷೆ ಹಾದಿಮನಿ ವೀರಲಕ್ಷ್ಮೀ ಮಾಜಿ ಶಾಸಕ ನೇಮಿರಾಜ ನಾಯಕ್, ಬಿಜೆಪಿ ಜಿಲ್ಲಾ ಅಧ್ಯಕ್ಷ ರಮಾನಂದ ಯಾದವ್, ಮಂಡಲ್ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಇದ್ದರು.

Don`t copy text!