ರೈತರ ಹಿತಕ್ಕಾಗಿ ಕೃಷಿ ಕಾಯ್ದಿಗೆ ತಿದ್ದುಪಡಿ – ಸಿದ್ದನಗೌಡ ಪಾಟೀಲ್

ಮಸ್ಕಿ: ರೈತರನ್ನು ಮದ್ಯವರ್ತಿಗಳ ಹಾವಾಳಿಯಿಂದ ಪಾರು ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗೆ ತಿದ್ದುಪಡಿ ತಂದಿದೆ ಎಂದು ಬಿಜೆಪಿ ರೈತ ಮೊರ್ಚದ ಜಿಲ್ಲಾ ಘಟಕದ  ಅಧ್ಯಕ್ಷ ಸಿದ್ದನಗೌಡ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ರೈತ ಮೊರ್ಚ ಸೇರಿದಂತೆ ವಿವಿಧ ಮೊರ್ಚಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಅವರು ‘ಕೇಂದ್ರ ಸರ್ಕಾರ ರೈತರ ಹಿತ ಕಾಪಾಡುವ ಸಂಬಂಧ ತಂದ ಹೊಸ ಕಾಯ್ದೆಯನ್ನು ವಿರೋಧಿಸುವವರು ರೈತರ ಬಗ್ಗೆ ಸ್ವಲ್ಪವೂ ಯೋಚಿಸಲಿ ಎಂದರು.

ಉತ್ತಮ ಶಿಕ್ಷಣಕ್ಕಾಗಿ ಶ್ರೀಉಮಾಮಹೇಶ್ವರಿ ಕಾಲೇಜಿಗೆ ಸೇರಿರಿ
ಪ್ರಧಾನಿ ನರೇಂದ್ರ  ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಹಿಂದುಳಿದ. ಅಲ್ಪಸಂಖ್ಯಾತ ಹಾಗೂ ದಲಿತರ ಹಿತ ಕಾಪಾಡಿಕೊಂಡು ಬರುತ್ತಿದೆ ಎಂದರು. ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ರಾಜ್ಯದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರೇ ನಮ್ಮ ಮುಂದಿನ ನಾಯಕರು ಎಂದರು,
ಶೀಘ್ರದಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು ಪ್ರತಾಪಗೌಡ ಪಾಟೀಲ್ ಅವರನ್ನು ಹೆಚ್ಚಿನ ಮತಗಳಿಂದ ಚುನಾಯಿಸಬೇಕು ಎಂದು ಕರೆ ನೀಡಿದರು.

ವಧು ವರರ ಮಾಹಿತಿಗಾಗಿ ಸಂಪರ್ಕಿಸಿ
ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ರೆಡ್ಡಿ, ಬಿಜೆಪಿ ಯುವ ಮೊರ್ಚ ರಾಜ್ಯ ಘಟಕದ ಕಾರ್ಯದರ್ಶಿ ಅಮರೇಶ, ಪ್ರಸನ್ನ  ಪಾಟೀಲ್, ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ,  ,  ನೀಲಕಂಠಗೌಡ ಸೇರಿದಂತೆ ವಿವಿಧ ಮೊರ್ಚಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ರೈತ ಮೊರ್ಚ ಸೇರಿದಂತೆ ವಿವಿಧ ಮೊರ್ಚಗಳ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಯಿತು.

Don`t copy text!