ಡಿಕೆಶಿ, ಸಿದ್ಧರಾಮಯ್ಯ ಪ್ರಚಾರ ಮಾಡಿದರು ಕಾಂಗ್ರೆಸ್ ಗೆಲುವು ಸಾಧ್ಯವಿಲ್ಲ-ಬಿ.ವೈ.ವಿಜಯೇಂದ್ರ

e-ಸುದ್ದಿ, ಮಸ್ಕಿ
ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ದಿಗ್ಗಜ ನಾಯಕರಾದ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಏನೇ ಪ್ರಚಾರ ಮಾಡಿದರು ಬಿಜೆಪಿಯನ್ನು ಸೋಲಿಸುವುದು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಸ್ಥಿತಿ ನೋಡಿದರೇ ಅಯ್ಯೋ ಎನಿಸುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಮಸ್ಕಿ ತಾಲೂಕಿನ ಕೋಳಬಾಳ ಗ್ರಾಮದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಪರವಾಗಿ ಮತಯಾಚನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್‍ನವರು ಮತದಾರರನ್ನು ಮೂರ್ಖರು ಅಂದುಕೊಂಡಿದ್ದಾರೆ. ಜನ ಜಾಗೃತರಾಗಿದ್ದಾರೆ. ಯಾವ ಪಕ್ಷಕ್ಕೆ ಮತ ಹಾಕಿದರೆ ಅಭಿವೃದ್ಧಿ ಸಾಧ್ಯ ಎಂಬುದನ್ನು ಗಮನಿಸಿ ರಾಜ್ಯದ ಅಭಿವೃದ್ದಿಗಾಗಿ ಹಗಲಿರುಳು ದುಡಿಯುತ್ತಿರುವ ಬಿ.ಎಸ್.ಯಡಿಯೂರಪ್ಪ ಸರ್ಕಾರವನ್ನು ಬೆಂಬಲಿಸಲು ಮತದಾದರರು ನಿರ್ಧರಿಸಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.
ಕಾಂಗ್ರೆಸ್‍ನವರಿಗೆ ಶೀರಾ ಮತ್ತು ಕೆ.ಆರ್.ಪೇಟೆ ಸೋಲಿನ ಅಘಾತದಿಂದ ಹೊರ ಬಂದಿಲ್ಲ. ಕಾಂಗ್ರೆಸ್‍ನವರು ಶಿರಾ ತಾಲೂಕಿನ ಮದಲೂರು ಕೆರೆಗೆ ನೀರು ಹರಿಸಿರಲಿಲ್ಲ. ಬಿ.ಎಸ್.ವೈ ಮಾತುಕೊಟ್ಟಂತೆ ನೀರು ಹರಿಸಿದ್ದಾರೆ ಎಂದರು.
ಮಸ್ಕಿ ಕ್ಷೇತ್ರಕ್ಕೆ 5 ಎ ಕಾಲುವೆ ಸಮಸ್ಯೆ ಬಗೆಹರಿಸಬೇಕು ಅಂದ್ರೇ ಬಿಜೆಪಿಯ ಸಿ.ಎಂ.ಯಡಿಯೂರಪ್ಪ ಅವರಿಂದ ಮಾತ್ರ ಸಾಧ್ಯ. ಈ ಬಗ್ಗೆ ಸಿ.ಎಂ.ಸಮಾಲೋಚನೆ ಮಾಡುತ್ತಿದ್ದಾರೆ ಮುಂದೆ ಪರಿಹಾರ ಸಿಗುತ್ತೆ ಎಂದು ವಿಜಯೇಂದ್ರ ಅಭಯ ನೀಡಿದರು.
ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರಚಾರ ಸಭೆಯಲ್ಲಿ ಮಾತನಾಡಿ ಪ್ರತಾಪಗೌಡ ಪಾಟೀಲ್ ಸ್ವಾಭಿಮಾನಿ ಕ್ಷೇತ್ರದ ಅಭಿವೃದ್ದಿಗಾಗಿ ಬಿಜೆಪಿ ಸೇರಿದ್ದಾರೆ ಆಗಲಿ ಮಾರಾಟವಾಗುವ ವ್ಯಕ್ತಿ ಅಲ್ಲ ಎಂದರು.
ಈ ಹಿಂದೆ ಸಿದ್ಧರಾಮಯ್ಯ ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ಯಾಕೆ ಬಂದರು ಅದನ್ನು ಬಹಿರಂಗ ಪಡಿಸಲಿ ಎಂದು ರೇಣುಕಾಚಾರ್ಯರ ಪ್ರಶ್ನಿಸಿದರು.
ನಾವು ಅಭಿವೃದ್ದಿ ವಿಷಯಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇವೆ. ಕಾಂಗ್ರೆಸ್‍ನವರು ಕೆಲಸಕ್ಕೆ ಬಾರದ ವಿಷಯ ಚರ್ಚಿಸುತ್ತಿದ್ದಾರೆ ಎಂದು ರೇಣುಕಾಚಾರ್ಯ ಟೀಕಿಸಿದರು.
ಈಶ್ವರಪ್ಪ ಅವರ ಸಮಸ್ಯೆ ಬಗೆಹರಿಯಲಿದೆ. ಯತ್ನಾಳ ಮನಸ್ಥಿತಿ ಸರಿಯಿಲ್ಲ. ಅವರಿಗೆ ಹುಚ್ಚು ಹಿಡಿದಿದೆ. ಅದಕ್ಕೆ ಹುಚ್ಚು ಹುಚ್ಚು ಹೇಳಿಕೆ ಕೊಡುತ್ತಿದ್ದಾರೆ. ನಾನು ಮಸ್ಕಿಗೆ ಚುನಾವಣೆ ಪ್ರಚಾರಕ್ಕೆ ಬಂದಿದ್ದೇನೆ. ಯತ್ನಾಳ ಬಗ್ಗೆ ಮಾತನಾಡಲು ಬಂದಿಲ್ಲ ಎಂದರು.
ಶಾಸಕ ರಾಜುಗೌಡ, ಮಾಜಿ ಸಂಸದ ಸಂಸದ ಕೆ.ವೀರುಪಾಕ್ಷಪ್ಪ ಮಾತನಾಡಿದರು. ಪುರಸಭೆ ಮಾಜಿ ಉಪಾಧ್ಯಕ್ಷ ರವಿಗೌಡ ಪಾಟೀಲ ಇದ್ದರು.
—————————-

ಮದ್ಯ ಮಾರಾಟ ನಿಷೇಧಕ್ಕೆ ಮಹಿಳೆಯರ ಒತ್ತಾಯ
ತಾಲೂಕಿನ ಕೊಳಬಾಳ ಗ್ರಾಮದಲ್ಲಿ ಬಿ.ವೈ.ವಿಜಯೇಂದ್ರ ಬಿಜೆಪಿ ಪರ ಪ್ರಚಾರ ವೇಳೆಯಲ್ಲಿ ಮಹಿಳೆಯರು ಮದ್ಯಪಾನ ನಿಷೇಧ ಮಾಡುವಂತೆ ಒತ್ತಾಯಿಸಿದ ಘಟನೆ ಜರುಗಿತು.
ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ನೀರು ಬರುವದಕ್ಕಿಂತ ಮುಂಚೆ ಮದ್ಯೆ ಸರಬರಾಜು ನಡೆಯುತ್ತಿದೆ. ಯುವಕರು ಮತ್ತು ದುಡಿಯುವ ಗಂಡದಿರು ಮದ್ಯದ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ನಮಗೇನು ಬೇಡ ಮದ್ಯೆ ಮಾರಾಟ ನಿಷೇಧಿಸುವಂತೆ ಮಹಿಳೆಯರು ಪಟ್ಟು ಹಿಡಿದರು.
ವಿಜಯೇಂದ್ರ ಮಹಿಳೆಯರ ಬೇಡಿಕೆಗೆ ಸ್ಪಂದಿಸದೆ ಹಾಗೆ ಹೊರಟು ಹೋದರು.

Don`t copy text!