ಕಾಂಗ್ರೆಸ್ ಪಕ್ಷವನ್ನು ಗಂಟುಮೂಟೆ ಕಟ್ಟಿ ಮನಗೆ ಕಳಿಸುತ್ತಾರೆ. – ರೇಣುಕಾಚಾರ್ಯ

ಕಾಂಗ್ರೆಸ್ ಪಕ್ಷವನ್ನು ಕ್ಷೇತ್ರದ ಜನರು ಗಂಟು ಮೂಟೆ ಕಟ್ಟಿ ಮನೆಗೆ ಕಳಿಸುತ್ತಾರೆ-ಎಂ.ಪಿ.ರೇಣುಕಾಚಾರ್ಯ
e-ಮಸ್ಕಿ
ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆಲೆ ಇಲ್ಲದಂತಾಗಿದೆ ಮಸ್ಕಿ ಕ್ಷೇತ್ರದಿಂದ ಈ ಉಪ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‍ನ್ನು ಗಂಟು ಮೂಟೆ ಕಟ್ಟಿ ಕಳಿಸುತ್ತಾರೆ ಎಂದು ಸಿ.ಎಂ.ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಮಸ್ಕಿ ಕ್ಷೇತ್ರದ ವೀರುಪಾಪೂರ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಪರ ಶಾಸಕ ಎಂ.ಪಿ.ರೇಣುಕಾಚಾರ್ಯ ಭರ್ಜರಿ ಪ್ರಚಾರ ನಡೆಸಿ ಪ್ರತಾಪಗೌಡ ಪಾಟೀಲ್ ಅವರಿಗೆ ಮತ ನೀಡಿ ಬಿಜೆಪಿ ಗೆಲ್ಲಿಸುವಂತೆ ಮನವಿ ಮಾಡಿದರು.
ಪ್ರತಾಪಗೌಡ ಪಾಟೀಲ್ ಅವರು ರಾಜ್ಯದ ಹಿತಕ್ಕಾಗಿ ಬಿಜೆಪಿ ಪಕ್ಷಕ್ಕೆ ಬಂದಿದ್ದಾರೆ ವಿನಃ ಯಾವುದೋ ಆಸೆಗಾಗಿ ಬಂದಿಲ್ಲ. ಕಾಂಗ್ರೆಸ್ ಪಕ್ಷದವರು ಇಲ್ಲಸಲ್ಲದ ಆರೋಪಗಳು ಮಾಡುತ್ತಾರೆ. ಅವರ ರಾಜೀನಾಮೆಯಿಂದ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಯಡಿಯೂರಪ್ಪನವರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಉತ್ತಮ ಆಡಳಿತ ನೀಡಿ ಬಿಜೆಪಿ ಪಕ್ಷ ಜನಸಾಮಾನ್ಯರ ದ್ವನಿಯಾಗಿದೆ ಎಂದರು. ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ಬೇಡ ಎಂದು ಅಧಿಕಾರದಿಂದ ದೂರವಿಟ್ಟು ಬಿಜೆಪಿಗೆ ಅಧಿಕಾರ ನೀಡಿದ್ದಾರೆ. ಸರ್ಕಾರ ಮುಂದಿನಗಳಲ್ಲಿ ಇನ್ನಷ್ಟು ಅಬೀವೃದ್ಧಿ ಕಾರ್ಯಗಳನ್ನು ಮಾಡುತ್ತದೆ. ಕ್ಷೇತ್ರದಲ್ಲಿ ಮತದಾರರು ತೋರಿಸುತ್ತಿರುವ ಪ್ರೀತಿ ನೋಡಿದರೆ ಮಸ್ಕಿ ಉಪಚುನಾವಣೆಯಲ್ಲಿ 20 ಸಾವಿರಕ್ಕೂ ಅಧಿಕ ಮತಗಳಿಂದ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ನೂರಾರು ಕಾರ್ಯಕರ್ತರು ಇದ್ದರು.

Don`t copy text!