ಬಸವಣ್ಣ ನಾವು ಲಿಂಗವಂತರಲ್ಲ

ಬಸವಣ್ಣ ನಾವು ಲಿಂಗವಂತರಲ್ಲ

ನಾವು ಬಣಜಿಗ ಪಂಚಮ ಗಾಣಿಗರು,
ನೋಣಬರು ಕುಂಬಾರರು ಹಡಪದ
ಕಂಬಾರ ನೇಕಾರ ಮಾಳಿ ಕೋಳಿ
ಅಂಬಿಗ ಮೇದಾರ ಮಾದಾರ ರಡ್ಡಿ
ಜಂಗಮ ಕುರುಹಿನ ಶೆಟ್ಟಿ ಜಾಡರು
ಶಿವಸಿಂಪಿ ಬಣಗಾರ ಸಮಗಾರ
ನಗರ್ತಕ ಗೌಡ ಸಾದರು ಹೂಗಾರರು.
ನಾವಾರೂ ಲಿಂಗಾಯತರಲ್ಲಾ .
ನಮಗೆ ಮೀಸಲಾತಿ ಬೇಕು.
ಖೊಟ್ಟಿ ಜಾತಿ ಸರ್ಟಿಫಿಕೇಟ್ ಮಾಡಿ ನಾವು
ಸೀಟು ಕೆಲಸ ಸಂಬಳ ಪಡೆಯುತ್ತೇವೆ.
ನಮಗೆ ಬಸವಣ್ಣ ನೀನು ಬೇಕು
ಜಾತ್ರೆಗೆ ಸಂಬ್ರಮಕೆ ರಜೆಗೆ .
ಮದುವೆಗೆ ಮುಹೂರ್ತಕ್ಕೆ
ಬೇಡ ನಿನ್ನ ತತ್ವ ಕಾಯಕ ದಾಸೋಹ
ನಾವೆಲ್ಲರೂ ಕಳ್ಳರು ದ್ರೋಹಿಗಳು.
ನಿನ್ನನ್ನು ನಿತ್ಯ ಕೊಂದವರು.
ನಿನ್ನ ಹೆಸರಲ್ಲಿ ಮನೆ ಮಠ ಆಸ್ತಿ ಮಾಡಿದವರು.
ನಿನ್ನ ಮುದ್ರೆ ಬಳಸಿ ಅಧಿಕಾರ ಪಡೆದವರು.
ನಾವಾರೂ ಲಿಂಗಾಯತರಲ್ಲ .
ಸೋಗು ಹಾಕುವವರು ಬಣ್ಣ ಬಳೆದವರು.
ನಿನ್ನ ಹೆಸರಲ್ಲಿ ಕೊಳ್ಳೆ ಹೊಡೆವವರು.
ಅರಿವು ಆಚಾರ ಅನುಭಾವ ಸತ್ತಿದೆ .
ಕಾವಿಗಳ ದರ್ಪ ಖಾದಿಗಳ ಮೋಸ
ಆಷಾಡಭೂತಿಗಳ ಗದ್ದಲದಲ್ಲಿ ನಾವಿದ್ದೇವೆ.
ಬಸವಣ್ಣ ನಾವಾರೂ ಲಿಂಗಾಯತರಲ್ಲ .

-ಡಾ ಶಶಿಕಾಂತ ಪಟ್ಟಣ -ಪೂನಾ

Don`t copy text!