ಕನ್ನಡ ನಾಡು ನುಡಿ ಸೇವೆಗೆ ಅವಕಾಶ ಕೊಡಿ- ವಿಜಯಕುಮಾರ ಕಮ್ಮಾರ
ಕನ್ನಡ ಸಾಹಿತ್ಯ ಪರಿಷತ್ತು
ಧಾರವಾಡ ಜಿಲ್ಲಾ ಘಟಕ
ಅಧ್ಯಕ್ಷ ಸ್ಥಾನದ ಚುನಾವಣೆ – 2021
ಚುನಾವಣೆ ದಿನಾಂಕ : 09.05.2021
ಸಮಯ : ಬೆಳಿಗ್ಗೆ 8 ರಿಂದ ಸಂಜೆ 4 ರ ವರೆಗೆ
ಮಾನ್ಯ ಸಾಹಿತ್ಯ ಪ್ರಿಯರೆ,
ದಿನಾಂಕ 09.05.2021 ರಂದು ಕನ್ನಡ ಸಾಹಿತ್ಯ ಪರಿಷತ್ತು – ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರ ಚುನಾವಣೆ ನಡೆಯಲಿದೆ.
ವಿಜಯಕುಮಾರ ಈಶ್ವರ ಕಮ್ಮಾರ ಆದ ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ. ತಮ್ಮ ಅಮೂಲ್ಯವಾದ ಮತವನ್ನು ನೀಡಿ ಕನ್ನಡಾಂಬೆಯ ಸೇವೆಗೆ ಅವಕಾಶ ಮಾಡಿಕೊಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.
ಭಾಗದ ಸಂಖ್ಯೆ : 21/1-2
ಮತದಾರರ ಪಟ್ಟಿಯ ಕ್ರಮ ಸಂಖ್ಯೆ : 1234
ಕ.ಸಾ.ಪ. ಅಜೀವ ಸದಸ್ಯತ್ವ ಸಂಖ್ಯೆ : 170361
ಹೆಸರು (ಮತಪತ್ರದಲ್ಲಿರುವಂತೆ) : ವಿಜಯಕುಮಾರ ತಂದೆ: ಈಶ್ವರ ಕಮ್ಮಾರ
ವಿಳಾಸ:
ವಿಜಯಕುಮಾರ ಈಶ್ವರ ಕಮ್ಮಾರ
ಮಲ್ಲಮ್ಮ ನಿಲಯ, ಸವದತ್ತಿ ರಸ್ತೆ,
ಮರೆವಾಡ ಕ್ರಾಸ, ಮರೆವಾಡ ಗ್ರಾಮ,
ಧಾರವಾಡ ತಾಲೂಕ,
ಧಾರವಾಡ ಜಿಲ್ಲೆ – 581 201
ಮೋಬೈಲ್ ಸಂಖ್ಯೆ : 9741 357 132
ಕಿರು ಪರಿಚಯ
ವಿಜಯಕುಮಾರ ಕಮ್ಮಾರ
ಅಂತರಾಷ್ಟ್ರೀಯ “ಬಸವ ತತ್ವ” ಪ್ರಚಾರಕರು, ಸಾಹಿತಿಗಳು
ಬಿ. ಈ (ಮೆಕ್ಯಾನಿಕಲ್ ಇಂಜನೀಯರಿಂಗ್) – 1988 / ಕರ್ನಾಟಕ ವಿಶ್ವ ವಿದ್ಯಾಲಯ-ಧಾರವಾಡ (ಕೆ. ಎಲ್. ಇ. ಇಂಜನೀಯರಿಂಗ್ ಕಾಲೇಜು-ಬೆಳಗಾವಿ)
ವೃತ್ತಿ, ಪ್ರವೃತಿ ಮತ್ತು ಉಪನ್ಯಾಸ ಮಾಲಿಕೆಗಳು
* ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಮ್ಯಾಕ್ ಇಂಟರನ್ಯಾಶನಲ್ ಕಾರ್ಪೋರೇಶನ್.
* ಬಸವಾದಿ ಶರಣರ ವಚನ ಸಾಹಿತ್ಯದಲ್ಲಿ “ಅರ್ಥಶಾಸ್ತ್ರ – ಸಂಸ್ಕೃತಿ” ಕುರಿತು ಉಪನ್ಯಾಸ ಮಾಲಿಕೆಗಳು.
* ಬಸವಾದಿ ಶರಣರ ವಚನ ಸಾಹಿತ್ಯದಲ್ಲಿ “ನಿರ್ವಹಣಾ ವಿಜ್ಞಾನ” ಕುರಿತು ಉಪನ್ಯಾಸ ಮಾಲಿಕೆಗಳು.
* ದೇಶ-ವಿದೇಶಗಳ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಲ್ಲಿ “ಆರ್ಥಿಕ ನೀತಿಗಳಲ್ಲಿ ಸಂಸ್ಕೃತಿ ಮತ್ತು ಪರಂಪರೆಯ ಪಾತ್ರ” ಉಪನ್ಯಾಸ ಮಾಲಿಕೆಗಳು.
* ನಾಗರೀಕ ಸೇವಾ ಪರೀಕ್ಷೆ (IAS/IPS) ತರಬೇತುದಾರರು.
* ಪತ್ರಿಕೆಗಳಲ್ಲಿ ಅಂಕಣಕಾರರು.
* ದೂರದರ್ಶನ ವಾಹಿನಿಗಳಲ್ಲಿ ಉಪನ್ಯಾಸ ಮಾಲಿಕೆಗಳು ಮತ್ತು ಚರ್ಚೆಗಳು.
* ಶೈಕ್ಷಣಿಕ ಮತ್ತು ವೃತಿ ಮಾರ್ಗದರ್ಶಕರು.
* “ಮೂಲಭೂತ ಮಾರುಕಟ್ಟೆ ವ್ಯವಸ್ಥೆ” ಮತ್ತು “ವ್ಯಾಪಾರ ನಿರ್ವಹಣೆ” ಕುರಿತು ಉಪನ್ಯಾಸ ಮಾಲಿಕೆಗಳು.
* ಫೋರ್ಜಿಂಗ್, ಕಾಸ್ಟಿಂಗ್ ಮತ್ತು ಸಿ.ಎನ್.ಸಿ ಮಶಿನಿಂಗ್ ತಂತ್ರಜ್ಞಾನ ಕುರಿತು ಉಪನ್ಯಾಸ ಮಾಲಿಕೆಗಳು.
ಸಂಕಲ್ಪಗಳು (ಗುರಿಗಳು ಮತ್ತು ಧೇಯೋದ್ದೇಶಗಳು)
# ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಕಾರ್ಯ ಪ್ರವೃತ್ತವಾಗುವದು. ಈ ಮೂಲಕ ಕನ್ನಡಾಂಬೆಯ ಸೇವೆಯನ್ನು ಮಾಡಲಿಚ್ಛಿಸುವ ಎಲ್ಲ ಕನ್ನಡಿಗರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು “ತೆರೆದ ಬಾಗಿಲು” ಎನ್ನುವ ಭಾವನೆ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು.
# ವಿದೇಶದಲ್ಲಿ ನೆಲೆಸಿರುವ ಹೊರನಾಡು ಕನ್ನಡಿಗರನ್ನು ಇತ್ತೀಚಿನವರೆಗೂ ಕಡೆಗಣಿಸಿದ್ದನ್ನು ನನ್ನ ಹಲವಾರು ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಕಂಡಿದ್ದೇನೆ. ಈ ನಿಟ್ಟಿನಲ್ಲಿ ಹೊರನಾಡು ಕನ್ನಡಿಗರಿಗೆ ಜಿಲ್ಲಾ ಸಾಹಿತ್ಯ ಪರಿಷತ್ತು “ತವರು ಮನೆ” ಎನ್ನುವ ಭಾವನೆ ಮೂಡಿಸುವ ಪ್ರಯತ್ನ ಮಾಡಲಾಗುವುದು.
# ಹೊರನಾಡು ಕನ್ನಡಿಗರನ್ನು ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಳ್ಳುವ ಪ್ರಯತ್ನ ಮಾಡಲಾಗುವುದು.
# ಧಾರವಾಡದಲ್ಲಿ ಮತ್ತು ತಾಲೂಕು ಕೇಂದ್ರಗಳಲ್ಲಿ ಅತ್ಯಾಧುನಿಕ ಮಾಹಿತಿ ಮತ್ತು ಸಂವಹನ ವ್ಯವಸ್ಥೆ ಇರುವ ಕನ್ನಡ ಭವನ ನಿರ್ಮಾಣ.
# ಮಾಹಿತಿ ತಂತ್ರಜ್ಞಾನ ಮತ್ತು ಗಣಕ ತಂತ್ರಜ್ಞಾನವನ್ನು ಬಳಸಿಕೊಂಡು ಅಂತರ್ಜಾಲ ಉಪನ್ಯಾಸಗಳ ಮೂಲಕ ಚರ್ಚೆ, ಸಂವಾದ, ಅನುಸಂಧಾನಗಳನ್ನು ನಿಯಮಿತವಾಗಿ ನಡೆಸುವುದು. ಇದಕ್ಕಾಗಿ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಗಣಕ ಯಂತ್ರಗಳ ವ್ಯವಸ್ಥೆ ಮಾಡುವುದು.
# ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ಅಜೀವ ಸದಸ್ಯರನ್ನು ಮಾಡುವ ಮೂಲಕ ಬಲಪಡಿಸುವುದು.
# ಎಲೆಮರೆ ಕಾಯಿಯಂತಿರುವ ಸಾಹಿತಿಗಳಿಗೆ, ಉದಯೋನ್ಮುಖ ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುವುದು.
# ವಚನ ಸಾಹಿತ್ಯದಿಂದ ಹಿಡಿದು ಇತ್ತೀಚಿನ ನವೋದಯ ಸಾಹಿತ್ಯದವರೆಗೆ ಮಹಿಳಾ ಲೇಖಕಿಯರ ಪಾತ್ರ ಅಮೋಘವಾದದ್ದು. ಮಹಿಳಾ ಲೇಖಕಿಯರಿಗೆ ಪ್ರಥಮ ಪ್ರಾಶಸ್ತ್ಯ ನೀಡುವುದು.
# ಸಾಹಿತ್ಯದ ಎಲ್ಲಾ ಪ್ರಾಕಾರದ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಉಪನ್ಯಾಸ ಕಾರ್ಯಕ್ರಮಗಳನ್ನು ರೂಪಿಸುವುದು. ಎಲ್ಲ ಸಾಹಿತ್ಯ ಪ್ರಿಯರು ಭಾಗವಹಿಸುವಂತೆ ಆಕರ್ಷಕವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವುದು.
ಸಮ್ಮೇಳನಗಳು :
• ಜಿಲ್ಲೆ ಮತ್ತು ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳು
• ಮಕ್ಕಳ ಸಾಹಿತ್ಯ ಸಮ್ಮೇಳನ
• ಮಹಿಳಾ ಸಾಹಿತ್ಯ ಸಮ್ಮೇಳನ
• ಯುವ ಸಾಹಿತ್ಯ ಸಮ್ಮೇಳನ
• ವಚನ ಸಾಹಿತ್ಯ ಸಮ್ಮೇಳನ
• ದಾಸ ಸಾಹಿತ್ಯ ಸಮ್ಮೇಳನ
• ಜಾನಪದ ಸಾಹಿತ್ಯ ಸಮ್ಮೇಳನ
• ಸಂಗೀತ ಸಮ್ಮೇಳನ
# ಸಂಗೀತ ಕ್ಷೇತ್ರ ಅತ್ಯಂತ ಮಹತ್ಚದ ಕ್ಷೇತ್ರ. ಎಲ್ಲ ಕಲಾವಿದರಿಗೆ ಅವಕಾಶ ಮಾಡಿ ಕೊಡುವುದು. ಇದರ ಬಗ್ಗೆ ವಿದ್ವಾಂಸರಲ್ಲಿ ಚರ್ಚಿಸಿ ತೀರ್ಮಾನ ಪಡೆಯುವುದು.
# ಧಾರವಾಡ ಸಾಹಿತ್ಯ ಭವನದ ಹಿಂಭಾಗದಲ್ಲಿ ಖಾಲಿ ಇರುವ ಜಾಗದಲ್ಲಿ ಬಯಲು ರಂಗಮಂದಿರ ನಿರ್ಮಾಣ ಮಾಡುವಲ್ಲಿ ಪ್ರಯತ್ನಿಸಲಾಗುವುದು. ಇದರಿಂದ ರಂಗಭೂಮಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಪ್ರಯತ್ನ ಮಾಡಲಾಗುವುದು.
# ಅನುದಾನ ಕ್ರೋಢೀಕರಿಸಿ ಅಪ್ರಕಟಿತ ಇಲ್ಲವೇ ಔಟ್ ಆಫ್ ಪ್ರಿಂಟ್ ಆಗಿರುವ ಅತ್ಯುತ್ತಮ ಗ್ರಂಥಗಳ ಪ್ರಕಟಣೆಗೆ ಪ್ರಯತ್ನಿಸಲಾಗುವುದು.
# ದತ್ತಿ ಉಪನ್ಯಾಸಗಳನ್ನು ಏರ್ಪಡಿಸಿ ನೂತನ ಬರಹಗಾರರಿಗೆ ಅವಕಾಶ ನೀಡುವುದು. ನಿಯಮಿತವಾಗಿ ಕಾರ್ಯಕ್ರಮಗಳನ್ನು ರೂಪಿಸಿ, ಮಂಡನೆ ಮಾಡಿದ ವಿಷಯಗಳನ್ನು ಸಂಗ್ರಹಿಸಿ ಪ್ರಕಟಿಸಲಾಗುವುದು.
# ಒಂದೇ ಒಂದು ಬೆರಳನ್ನು ಒತ್ತುವುದರ ಮೂಲಕ ಇಡೀ ವಿಶ್ವವನ್ನು ತಲುಪುವ ಶಕ್ತಿ ಅಂತರ್ಜಾಲ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಇದೆ. ಅಂತರ್ಜಾಲ ಮತ್ತು ಮಾಹಿತಿ ತಂತ್ರಜ್ಞಾನ ಆಧುನಿಕ ಯುಗದ ಅವಶ್ಯಕ ಮಾಧ್ಯಮ. ಧಾರವಾಡ ಜಿಲ್ಲಾ ಸಾಹಿತ್ಯ ಪರಿಷತ್ತಿನ “ಸ್ವತಂತ್ರ ಅಂತರ್ಜಾಲ ಜಾಲತಾಣ” ವನ್ನು ನಿರ್ಮಿಸಿ ಅದರ ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ಇಡೀ ವಿಶ್ವಕ್ಕೆ ತಲುಪುವ ವ್ಯವಸ್ಥೆ ಮಾಡುವ ಸಂಕಲ್ಪ.
ಧಾರವಾಡ ಜಿಲ್ಲೆಯ ಸಾಹಿತ್ಯಾಸಕ್ತರು ಆಶೀರ್ವಾದ ಮಾಡಿ ಕನ್ನಡಾಂಬೆಯ ಸೇವೆಗೆ ಅವಕಾಶ ಮಾಡಿಕೊಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ.
ತಮಗೆ ಪರಿಚಯವಿರುವ ಧಾರವಾಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಿಗೆ ತಿಳಿಸಬೇಕೆಂದು ಈ ಮೂಲಕ ವಿನಂತಿಸುತ್ತೇನೆ.
ವಿಜಯಕುಮಾರ ಈಶ್ವರ ಕಮ್ಮಾರ
—————————————————————————-ಧಾರವಾಡ ಜಿಲ್ಲಾ ಕಸಾಪ ಸದಸ್ಯರಲ್ಲಿ ವಿನಂತಿ,
ನಮ್ಮ e-ಸುದ್ದಿ ತಂಡದ ಹಿರಿಯ ಲೇಖಕರಾದ ಶ್ರೀ ವಿಜಯಕುಮಾರ ಕಮ್ಮಾರ ಅವರು ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.
ಶ್ರೀಯುತರು ನಾಡಿನ ಹೆಸರಾಂತ ಸಾಹಿತಿ ಲಿಂ.ಈಶ್ವರ ಕಮ್ಮಾರ ಅವರ ಸುಪುತ್ರರು. ಶ್ರೀ ವಿಜಯಕುಮಾರ ಕಮ್ಮಾರ ಅವರನ್ನು ಧಾರವಾಡ ಜಿಲ್ಲಾ ಕಸಾಪ ಸದಸ್ಯರು ಆಯ್ಕೆಮಾಡಿ ಕನ್ನಡ ನಾಡು ನುಡಿ ಸೇವೆಗೆ ಅವಕಾಶ ಕಲ್ಪಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.
e-ಸುದ್ದಿ
ಸಂಪಾದಕ
ವೀರೇಶ ಸೌದ್ರಿ, ಮಸ್ಕಿ
೯೪೪೮೮೦೫೦೬೭