ದಲಿತ ಖಾಸಿಂ ಮುರಾರಿ ಮನೆಯಲ್ಲಿ ಉಪಹಾರ ಸೇವಿಸಿದ ಸಿಎಂ

ದಲಿತ ಖಾಸಿಂ ಮುರಾರಿ ಮನೆಯಲ್ಲಿ ಉಪಹಾರ ಸೇವಿಸಿದ ಸಿಎಂ
e-ಸುದ್ದಿ, ಮಸ್ಕಿ
ಮಸ್ಕಿ ಉಪ ಚುನಾವಣೆ ದಿನೇ ದಿನೇ ರಂಗೇರುತ್ತಿದೆ. ಉಪ ಚುನಾವಣೆ ಗೆಲುವಿಗಾಗಿ ಸಿಎಂ ಯಡಿಯೂರಪ್ಪ 2 ದಿನಗಳ ಕಾಲ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ಮಸ್ಕಿ ವಿಧಾನ ಸಭಾ ಕ್ಷೇತ್ರದಲ್ಲಿ ಕ್ಯಾಂಪೇನ್ ನಡೆಸಲಿದ್ದಾರೆ.
ಮಸ್ಕಿ ಪಟ್ಟಣಕ್ಕೆ ಶುಕ್ರವಾರ ಸಂಜೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೊದಲಿಗೆ ಮಸ್ಕಿ ಪಟ್ಟಣದ ವಾರ್ಡ ನಂ 18 ರ ದಲಿತರ ಮನೆಯೊಂದರಲ್ಲಿ ಉಪಹಾರ ಸೇವನೆ ಮಾಡಿದರು.
ಸಿ.ಎಂ.ಯಡಿಯೂರಪ್ಪ ಆಗಮನಕ್ಕಾಗಿ ಇಡೀ ದಲಿತ ಓಣಿಯಲ್ಲಿ ಸಾರಿಸಿ ಬಣ್ಣ ಬಣ್ಣದ ರಂಗೋಲಿ ಹಾಕಿ ಸಿಂಗಾರಗೊಳಿಸಲಾಗಿತ್ತು. ದಲಿತ ಮಹಿಳೆ ಮರೆಮ್ಮ ಖಾಸಿಂ ಮುರಾರಿ ಮನೆಗೆ ಬೇಟಿ ನೀಡಿದ ಸಿಎಂ ಯಡಿಯೂರಪ್ಪ ದಲಿತ ಮನೆಯಲ್ಲಿ ತಯಾರಿಸಿದ ಉಪ್ಪಿಟ್ಟು, ಕೇಸರಿ ಬಾತ್ ಹಾಗೂ ಉತ್ತರ ಕರ್ನಾಟಕದ ಸ್ಪೇಷಲ್ ಮಂಡಕ್ಕಿ ಸೇವನೆ ಮಾಡಿದರು. ನಾಳೆ ಶನಿವಾರ ಮಸ್ಕಿ ವಿಧಾನಸಭಾ ಕ್ಷೇತ್ರದ ತುರ್ವಿಹಾಳ, ಬಳಗಾನೂರು ಮತ್ತು ಸಂತೆಕೆಲ್ಲೂರು ಗ್ರಾಮಗಳಳ್ಲಿ ಪ್ರಚಾರ ಭಾಷಣ ಮಾಡಲಿದ್ದಾರೆ.
ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಆನ್ವರಿ, ರಾಜುಗೌಡ, ಪರಣ್ಣ ಮುನವಳ್ಳಿ, ಸಂಸದ ಕರಡಿ ಸಂಗಣ್ಣ ಹಾಗೂ ಇತರರು ಇದ್ದರು.

Don`t copy text!