ನೀತಿ ಸಂಹಿತೆ 20 ಪ್ರಕರಣ ದಾಖಲು, ಅಕ್ರಮ ಕಂಡು ಬಂದರೆ ನಿರ್ಧಾಕ್ಷಣ್ಯ ಕ್ರಮ-ರಾಜಶೇಖರ ಡಂಬಳ

ನೀತಿ ಸಂಹಿತೆ 20 ಪ್ರಕರಣ ದಾಖಲು, ಅಕ್ರಮ ಕಂಡು ಬಂದರೆ ನಿರ್ಧಾಕ್ಷಣ್ಯ ಕ್ರಮ-ರಾಜಶೇಖರ ಡಂಬಳ

e-ಮಸ್ಕಿ, ಸುದ್ದಿ

ಉಪಚುನಾವಣೆ ಹಿನ್ನಲೆಯಲ್ಲಿ ಇದುವರೆಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಕೊವಿಡ್ ನಿಯಮ ಉಲ್ಲಂಘನೆಗಾಗಿ 20 ಪ್ರಕರಣಗಳ ಕುರಿತು ದೂರು ದಾಖಲಾಗಿದೆ ಎಂದು ಚುನಾವಣಾಧಿಕಾರಿಯು ಆದ ಎಸಿ ರಾಜಶೇಖರ ಡಂಬಳ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಉಪ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಂದ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದರಿಂದ 14 ಪ್ರಕರಣಗಳು ಮತ್ತು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರಿಂದ 9 ಪ್ರಕರಣಗಳು ದಾಖಲಾಗಿಸಿಕೊಂಡು 17,600 ರೂ.ಗಳ ದಂಡವನ್ನು ವಿಧಿಸಲಾಗಿದೆ ಎಂದು ವಿವರಿಸಿದರು.
ತಾಲೂಕಿನ ಪಾಮನಕಲ್ಲೂರು ಗ್ರಾ.ಪಂ ವ್ಯಾಪ್ತಿಯ ಹರ್ವಾಪೂರು ಗ್ರಾಮದಲ್ಲಿ ಬಿಜೆಪಿ ಅನಾಮಧೇಯ ವ್ಯಕ್ತಿಗಳು ಹಣ ಹಂಚಿಕೆ ಮಾಡಿರುವ ವಿಡೀಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದರಿಂದ ಈ ಕುರಿತು ಕವಿತಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿಯಾಗಿ ಬಳಗಾನೂರು ಮತ್ತು ತುರ್ವಿಹಾಳ ಹಾಗೂ ಹಿರೇದಿನ್ನಿಯಲ್ಲಿ ನಡೆದಿರುವ ಘಟನೆಯ ಬಗ್ಗೆ ಸ್ಥಳಕ್ಕೆ ಫ್ಲೈಯಿಂಗ್ ಸ್ವ್ಕೋಡ್ ಅಧಿಕಾರಿಗಳು ತೆರಳಿ ಮಾಹಿತಿ ಪಡೆದುಕೊಂಡ ನಂತರ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಒಟ್ಟು 305 ಮತಗಟ್ಟೆ ಕೇಂದ್ರಗಳಿರುವದರಿಂದ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ವಾಗಿರುವ ಪ್ರದೇಶಗಳಿಗೆ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಲಾಗುತ್ತಿದೆ.
ಉಪ ಚುಣಾವಣೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಸೂಕ್ತ ಕ್ರಮಕೈಗೊಳ್ಳಲಾಗುತ್ತಿದೆ. ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ಅಸ್ಪಾದ ನೀಡುತ್ತಿಲ್ಲ. ಮಾದರಿ ನೀತಿ ಸಂಹಿತೆ ಹೆಚ್ಚಾಗಿ ಬಿಜೆಪಿ ಪಕ್ಷದವರು ಉಲ್ಲಂಘನೆ ಮಾಡುತ್ತಿದ್ದಾರೆ. ಸೂಕ್ತ ಕ್ರಮಕೈಗೊಳ್ಳುತ್ತೇವೆ. 7 ಕಂದಾಯ ವ್ಯಾಪ್ತಿಯಲ್ಲಿ 7 ಜನ ಫ್ಲೈಯಿಂಗ್ ಸ್ವ್ಕ್ಭೊಡ್‍ಗಳನ್ನು ರಚನೆ ಮಾಡಿದ್ದೇವು. ಆದರೆ ದೂರುಗಳು ಜಾಸ್ತಿ ಬರುತ್ತಿರುವದರಿಂದ ಹೆಚ್ಚುವರಿಯಾಗಿ ಇನ್ನೂ ಮೂರು ಜನ ಫ್ಲೈಯಿಂಗ್ ಸ್ವ್ಕೋಡ್‍ಗಳನ್ನು ನೇಮಿಸಲಾಗುತ್ತದೆ ಎಂದು ತಿಳಿಸಿದರು.
ಭದ್ರತೆಗಾಗಿ ಸಿಆರ್‍ಪಿಎಫ್ ತುಕಡಿಗಳನ್ನು ನೇಮಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚುನಾವಣಾ ಸಹಾಯಕ ಅಧಿಕಾರಿ ಮಹೇಂದ್ರಕುಮಾರ ಇದ್ದರು.

Don`t copy text!