ಪ್ರತಾಪಗೌಡ ಪಾಟೀಲ ಪರವಾಗಿ ಉಮೇಶ ಕಾರಜೋಳ ಮತಯಾಚನೆ


e-ಸುದ್ದಿ, ಮಸ್ಕಿ
ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರ ಪರವಾಗಿ ಉಪಮುಖ್ಯಮಂತ್ರಿ ಗೊವಿಂದ ಕಾರಜೋಳ ಅವರ ಪುತ್ರ ಉಮೇಶ ಕಾರಜೋಳ ಗಾಂಧಿ ನಗರ, ಅಂಬೇಡ್ಕರ್ ಕಾಲೊನಿಗಳಲ್ಲಿ ಬುಧವಾರ ಪಾದಯಾತ್ರೆ ಮಾಡಿ ಮತಯಾಚನೆ ಮಾಡಿದರು.
ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಉಪಹಾರ ಸೇವಿಸಿದ ದಲಿತ ಕುಟುಂಬ ಕಾಸಿಂ ಮುರಾರಿ ಮನೆಗೆ ಭೇಟಿ ನೀಡಿದ ಉಮೇಶ ಕಾರಜೋಳ ಅವರಿಗೆ ಕಾಸಿಂ ಮುರಾರಿ ಮಾತನಾಡಿ ದಲಿತರು ಮಾಡಿದ ಅಡುಗೆಯನ್ನು ಸವಿದ ಯಡಿಯೂರಪ್ಪನವರ ಸರಳತೆಯನ್ನು ನೆನಪಿಸಿಕೊಂಡರು.
ಉಮೇಶ ಕಾರಜೋಳ ಮಾತನಾಡಿ ಬಿ.ಎಸ್.ಡಿಯೂರಪ್ಪ ದಲಿತರ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದು ದಲಿತ ಸಮುದಾಯದ ಏಳಿಗೆಗಾಗಿ ಹಗಲಿರುಳು ಶ್ರಮನಿಸುತ್ತಿದ್ದಾರೆ. ದಲಿತರನ್ನು ಉಪಮುಖ್ಯಮಂತ್ರಿ ಮಾಡಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ ಎಂದರು.
ಪಟ್ಟಣದ ಮುಖ್ಯಬೀದಿಯಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಉಮೇಶ ಕಾರಜೋಳ ಪ್ರತಾಪಗೌಡ ಪಾಟೀಲ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಎಲ್.ವಿ.ಟಿ ಕಾಂಪ್ಲೇಕ್ಸ್‍ನಲ್ಲಿ ಮತಯಾಚನೆ ಮಾಡುವಾಗ ಉಮಾಕಾಂತಪ್ಪ ಸಂಗನಾಳ ಲಿಂಗಸುಗೂರಿನ ಬಿಜೆಪಿ ಮುಖಂಡ ದೊಡ್ಡನಗೌಡ ಪಾಟೀಲ ಜತೆಗಿದ್ದರು.

Don`t copy text!