ಗಜಲ್
ವಯಸ್ಸಾಗುತಿದೆ ಎಂಬುದನು ತಿಳಿಸಿ ಹೇಳಿದವರು ಮಕ್ಕಳು
ನಾವು ಕಲಿಸದೆ ಇರುವುದನ್ನು ನಮಗೆ ಕಲಿಸಿದವರು ಮಕ್ಕಳು
ಹಂಚಿಕೊಂಡು ಉಣ್ಣಲು ಹೇಳಿರುವುದು ನಮ್ಮದೇ ತಪ್ಪು..
ದಂಪತಿಗಳನ್ನು ದೂರ ಮಾಡಲು ಮುಂದಾದವರು ಮಕ್ಕಳು
ಅನ್ನ ಕೆಡಿಸಬಾರದೆಂದು ಹಳಸಿದ ತಿಂದು ಬೆಳೆದವರು ನಾವು
ಉಳಿದ ಕಸ-ಮುಸರಿಯನು ತಿನಲು ನೂಕಿದವರು ಮಕ್ಕಳು
ಮಕ್ಕಳನು ಬೆಳೆಸುವಲ್ಲಿ ಎಡವಿರುವುದಕ್ಕೆ ಕಂಬನಿಯೆ ಸಾಕ್ಷಿ
ವೃದ್ಧಾಶ್ರಮದ ಪರಾವಲಂಬಿ ದಾರಿ ತೋರಿದವರು ಮಕ್ಕಳು
ಮಕ್ಕಳೂ ಮೊಮ್ಮಕಳನ್ನು ಕಾಣುವರು ಜಗದೊಳಗೆ ‘ಮಲ್ಲಿ’
ಯಾರಿಗೆ ಯಾರೂ ಇಲ್ಲ ಎಂಬುದು ತಿಳಿಸಿದವರು ಮಕ್ಕಳು
*✍️ರತ್ನರಾಯಮಲ್ಲ