ಮಸ್ಕಿಯಲ್ಲಿ ವರ್ತಕರ ಸಭೆ
ಕೊರೊನಾ ನಿಯಮ ಕಟ್ಟುನಿಟ್ಟಿನಿಂದ ಪಾಲೀಸಲು ಸೂಚನೆ
e-ಸುದ್ದಿ, ಮಸ್ಕಿ
ಮಸ್ಕಿ : ರಾಜ್ಯದಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಸಾರ್ವಜನಿಕರು ಹಾಗೂ ವರ್ತಕರು ಕರೊನಾ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದು ಪುರಸಭೆಯ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಹೇಳಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಗುರುವಾರ ನಡೆದ ವರ್ತಕರ ಹಾಗೂ ಹೊಟೇಲ್ ಅಂಗಡಿ ಮಾಲಿಕರ ಸಭೆಯಲ್ಲಿ ಮಾತನಾಡಿ ‘ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಮೇ 4 ರ ವರೆಗೆ ಮಧ್ಯಾಹ್ನ 2 ರಿಂದ ಮಾರುಕಟ್ಟೆ ಸಂಪೂರ್ಣ ಬಂದ್ ಮಾಡಲಾಗುವುದು, ವಾರದ ಸಂತೆಯನ್ನು ನಿಷೇಧಿಸಲಾಗಿದೆ, ಶನಿವಾರ ಹಾಗೂ ಭಾನುವಾರ ಸಂಪೂರ್ಣ ಕರ್ಪ್ಯೂ ಜಾರಿ ಮಾಡಲಾಗಿದೆ ಎಂದರು.
ಮದುವೆ ಸಮಾರಂಭಕ್ಕೆ 100 ಜನ ಹಾಗೂ ಅಂತ್ಯಕ್ರಿಯೆ ಗೆ 20 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದರು.
ಕರೊನಾ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮುಖಂಡ ಬಸನಗೌಡ ಪೊಲೀಸ್ ಪಾಟೀಲ, ಅಮರೇಶ ಮಾಟೂರು, ಆರೋಗ್ಯಾಧಿಕಾರಿ ನಾಗರಾಜ ಕಿರಾಣಿ, ಹೊಟೆಲ್, ತರಕಾರಿ ಸೇರಿದಂತೆ ವಿವಿಧ ಅಂಗಡಿಗಳ ಮಾಲೀಕರು ಪಾಲ್ಗೊಂಡಿದ್ದರು