ಮಸ್ಕಿ: ಬೈಕ್ ಸವಾರರಿಗೆ ಬೆತ್ತದ ರುಚಿ ತೋರಿಸಿದ ಪೊಲೀಸರು

ಕರೊನಾ ಕರ್ಪ್ಯೂ ಜಾರಿಗೆ ಕಟ್ಟುನಿಟ್ಟಿನ ಕ್ರಮ
ಮಸ್ಕಿ: ಬೈಕ್ ಸವಾರರಿಗೆ ಬೆತ್ತದ ರುಚಿ ತೋರಿಸಿದ ಪೊಲೀಸರು

e-ಸುದ್ದಿ, ಮಸ್ಕಿ

ಮಸ್ಕಿ: ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕರ್ಪ್ಯೂ ವಿಧಿಸಿದ್ದರ ಹಿನ್ನೆಲೆಯಲ್ಲಿ ರಸ್ತೆಗೆ ಇಳಿದ ಪೊಲೀಸರು ಅನಾವಶ್ಯವಾಗಿ ಓಡಾಡುತ್ತಿರುವ ಬೈಕ್ ಸವಾರರಿಗೆ ಬೆತ್ತದ ರುಚಿ ತೋರಿಸಿದ ಘಟನೆ ಬುಧವಾರ ರಾತ್ರಿ ಪಟ್ಟಣದಲ್ಲಿ ನಡೆಯಿತು.
ಲಿಂಗಸುಗೂರು ಡಿಎಸ್ ಪಿ ಎಸ್.ಎಸ್. ಹುಲ್ಲೂರು ನೇತೃತ್ವದಲ್ಲಿ ಪೊಲೀಸರು ಕರ್ಪ್ಯೂ ಸಮಯದಲ್ಲಿ  ರಸ್ತೆ ಮೇಲೆ ಓಡಾಡುತ್ತಿದ್ದ 50 ಕ್ಕೂ ಹೆಚ್ಚು ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡರು. ಕೆಲ ಬೈಕ್ ಸವಾರರಿಗೆ ಬೆತ್ತದ ರುಚಿ ತೋರಿಸಲಾಯಿತು. ಮಾಸ್ಕ್ ಇಲ್ಲದೇ ತಿರುಗಾಡುತ್ತಿದ್ದ ವ್ಯಕ್ತಿಗಳಿಗೆ ದಂಡ ಹಾಕಲಾಯಿತು.
ಪಟ್ಟಣದ ಹಳೆಯ ಬಸ್ ನಿಲ್ದಾಣ, ಅಶೋಕ ವೃತ್ತ, ಕನಕವೃತ್ತ ಹಾಗೂ ವಾಲ್ಮೀಕಿ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ  ಪೊಲೀಸರನ್ನು ನಿಯೋಜನೆ ಮಾಡಿ ಜನರ ಹೊರ ಬರದಂತೆ ನೋಡಿಕೊಳ್ಳಲಾಯಿತು.
ಧ್ವನಿ ವರ್ಧಕದ ಮೂಲಕ ಕೊರೊನಾ ನಿಯಮ ಪಾಲನೆ ಜೊತೆಗೆ ಸಾರ್ವಜನಿಕರು ಮನೆಯಿಂದ ಹೊರ ಬರದಂತೆ ಮನವಿ ಮಾಡಲಾಯಿತು.
ಪಟ್ಟಣದಲ್ಲಿ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ  ಅವಶ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಇದ್ದು 2 ರ ನಂತರ ಸಾರ್ವಜನಿಕರು ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ನೀಡಲಾಯಿತು.
ಈ ನಡುವೆ ಪುರಸಭೆ ಸಿಬ್ಬಂದಿ ಗಲ್ಲಿ ಗಲ್ಲಿಗಳಲ್ಲಿ ಸಂಚರಿಸಿದ ಕೊರೊನಾ ನಿಯಮ ಪಾಲಿಸುವಂತೆ ಮನವಿ ಮಾಡುತ್ತಿದ್ದ ದೃಶ್ಯ ಕಂಡು ಬಂತು.

 

Don`t copy text!