ವಿಶ್ವ ಭೂಮಿ ದಿನ
e-ಸುದ್ದಿ,
ಭೂಮಿ ದಿನ ಏಪ್ರಿಲ್ 22 ರಂದು ವಿಶ್ವಾದ್ಯಂತ ಆಚರಿಸಲಾಗುವ ವಾರ್ಷಿಕ ಘಟನೆಯಾಗಿದೆ. ಪರಿಸರ ರಕ್ಷಣೆ ಬೆಂಬಲವನ್ನು ವಿವಿಧ ಪ್ರದರ್ಶನಗಳ ಮೂಲಕ ನಡೆಸಲಾಗುತ್ತದೆ. 1970 ರಲ್ಲಿ ಮೊದಲ ಭೂಮಿ ದಿನ ಆಚರಿಸಲಾಯಿತು. 193 ರಾಷ್ಟ್ರಗಳಲ್ಲಿ ಈ ದಿನ ಆಚರಿಸಲಾಗುತ್ತದೆ. ಇದನ್ನು ಭೂಮಿ ದಿನ ನೆಟ್ವರ್ಕ್ ಜಾಗತಿಕವಾಗಿ ಸಂಬಂಧ ಹೊಂದಿವೆ.
ಯು.ಎಸ್. ಸ್ಟೇಟ್ ಸೆಕ್ರೆಟರಿ ಜಾನ್ ಕೆರ್ರಿ ಮಾಜಿ ಯು.ಎಸ್. ಯುನೈಟೆಡ್ ಸ್ಟೇಟ್ಸ್ ಹವಾಮಾನ ಬದಲಾವಣೆಗಾಗಿ ವಿಶೇಷ ರಾಯಭಾರಿ ಟಾಡ್ ಸ್ಟರ್ನ್ ಮತ್ತು ಯು.ಎಸ್. ಮಿಷನ್ ಟು ಯುನೈಟೆಡ್ ನೇಷನ್ಸ್ ಚಾರ್ಜ್ ಡಿ ಅಫೈರ್ಸ್ ಮಿಚೆಲ್ ಸೀಸನ್ ಅವರೊಂದಿಗೆ ಸಿಒಪಿ 21 ಹವಾಮಾನ ಬದಲಾವಣೆ ಒಪ್ಪಂದಕ್ಕಾಗಿ ವಿಶ್ವಸಂಸ್ಥೆಯ ಸಹಿ ಕಾರ್ಯಕ್ರಮದ ಪ್ರಾರಂಭದ ಸಂದರ್ಭದಲ್ಲಿ ಮಾತನಾಡುತ್ತಾರೆ.
ಕೈಗಾರಿಕೆಗಳ ಮಾಲಿನ್ಯದಿಂದ ವಾತಾವರಣ ಕೆಡುತ್ತಿದ್ದು, ಮಾಲಿನ್ಯಯುಕ್ತವಾಗುತ್ತಿದೆ ಎಂದು ಅಮೆರಿಕದಲ್ಲಿ 1970ರಲ್ಲಿ ಪರಿಸರಪ್ರೇಮಿಗಳ ಚಳವಳಿ ನಡೆಯಿತು. ಇದು ಕೆಲವೇ ದಿನಗಳಲ್ಲಿ ಬೃಹತ್ ಸ್ವರೂಪವನ್ನೂ ಪಡೆಯಿತು. ಪರಿಸರ ಪ್ರೇಮಿಗಳು ಅಷ್ಟೇ ಅಲ್ಲ, ನಾಗರಿಕರೆಲ್ಲ ಎಚ್ಚೆತ್ತುಕೊಂಡು ಈ ಮಾಲಿನ್ಯ ಹೋಗದಿದ್ದರೆ ಉಳಿಗಾಲವಿಲ್ಲ ಎಂದರಿತುಕೊಂಡರು.
ಆಗ ಸರ್ಕಾರ ಮಾಲಿನ್ಯ ತಡೆಗೆ ನಿಯಮಗಳನ್ನು ರೂಪಿಸಿ, ಜಾರಿಗೂ ತಂದಿತು. ಈ ಹೋರಾಟದ ಫಲವೇ ಭೂಮಿ ದಿನ.ಈ ಚಳವಳಿಗೆ ಸರ್ಕಾರ ಮನ್ನಣೆ ನೀಡಿ ಪರಿಸರ ರಕ್ಷಣೆ, ಭೂಮಿ ಸಂರಕ್ಷಣೆಗೆ ಒತ್ತು ನೀಡುವ ಭರವಸೆ ನೀಡಿದ ಸೂಚಕವಾಗಿ ಪ್ರತಿವರ್ಷ ಏಪ್ರಿಲ್ 22ರಂದು ವಿಶ್ವಭೂಮಿ ದಿನ ಆಚರಿಸುತ್ತಿದೆ.
ಜಗತ್ತಿನ ತಾಪಮಾನದ ಏರಿಕೆ, ಹವಾಮಾನ ಏರುಪೇರು ಭವಿಷ್ಯದ ಬೂಮಿಯ ಜೀವ ಸಂಕುಲದ ಅಳಿವಿಗೆ ಕಾರಣವಾಗಬಹುದು ಎಂಬ ಭಯ ಹವಾಮಾನ ತಜ್ಞರನ್ನು ಕಾಡುತ್ತಿದೆ. ಈ ತಾಪಮಾನದ ಏರಿಕೆಗೆ,’ಭೂಮಿ ಕುದಿಯುತ್ತಿದೆ” ಎಂಬ ಸಂದೇಶ ಹರಿಬಿಟ್ಟಿದ್ದಾರೆ, ಇದೇ ಸಂದರ್ಭದಲ್ಲಿ 2010–2020 ದಶಕವು ಇತಿಹಾಸದಲ್ಲೇ ಗರಿಷ್ಠ ತಾಪಮಾನ ದಾಖಲೆಯಾದ ದಶಕ ಎಂಬ ಆತಂಕಕಾರಿ ಮಾಹಿತಿಯನ್ನು ವಿಶ್ವ ಹವಾಮಾನ ಸಂಸ್ಥೆಯು (ಡಬ್ಲ್ಯೂ.ಎಂ.ಒ-World Meteorological Organization – WMO) ನೀಡಿದೆ. ಸ್ಪೇನ್‌ನ ರಾಜಧಾನಿ ಮ್ಯಾಡ್ರಿಡ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಹವಾಮಾನ ಸಮ್ಮೇಳನದಲ್ಲಿ ಭೂಮಿಯ ವಾತಾವರಣದ ಬಗ್ಗೆ ವರದಿಯನ್ನು ಡಬ್ಲ್ಯೂ.ಎಂ.ಒ. ಬಿಡುಗಡೆಗೊಳಿಸಿತು.
ಅಂಕಿ ಅಂಶಗಳ ವಿವರ:-
2019-2020 ವರ್ಷದಲ್ಲಿ ಏರಿದ ಜಾಗತಿಕ ತಾಪಮಾನ: 1.1 ಡಿಗ್ರಿ ಸೆಲ್ಸಿಯಸ್(ಕೈಗಾರಿಕಾ ಯುಗದ ಹಿಂದಿನ ಸರಾಸರಿಗಿಂತ ಅಧಿಕ)
2 ಡಿಗ್ರಿ ಸೆಲ್ಸಿಯಸ್: ಪ್ಯಾರಿಸ್ ಒಪ್ಪಂದದ ಪ್ರಕಾರ ಜಾಗತಿಕ ತಾಪಮಾನದ ಮಿತಿ.
ಶೇ 90: ಹಸಿರು ಮನೆ ಅನಿಲದಿಂದ, ಕಾಡು -ಸಸ್ಯಗಳಿಂದ ಉತ್ಪತ್ತಿಯಾದ ಬಿಸಿಯನ್ನು ಸಮುದ್ರ ಹೀರಿಕೊಳ್ಳುವ ಪ್ರಮಾಣ. ಆದರೆ ಈಗ ಸಮುದ್ರವೂ ತನ್ನ ಗರಿಷ್ಠ ತಾಪಮಾನವನ್ನು ತಲುಪಿರುವುದರಿಂದ, ಯಾತಾವರನದ ತಾಪಮಾನ ಇನ್ನೂ ಏರುವ ಸಾಧ್ಯತೆ.
ಶೇ 26:ಆಮ್ಲದ ಹೆಚ್ಚಳ; ಕೈಗಾರಿಕಾ ಯುಗ ಆರಂಭದ ಕಾಲಕ್ಕೆ ಹೋಲಿಸಿದರೆ ಸಮುದ್ರದ ನೀರಿನಲ್ಲಿ ಹೆಚ್ಚಾಗಿರುವ ಆಮ್ಲದ ಅಂಶ.
32,900 ಕೋಟಿ ಟನ್: ವಾತಾವರಣದ ಬಿಸಿ ಹೆಚ್ಚಳದಿಂದ ಕಳೆದ 12 ತಿಂಗಳಲ್ಲಿ ಗ್ರೀನ್‌ಲ್ಯಾಂಡ್‌ನಲ್ಲಿ ಕರಗಿದ ಹಿಮಗಡ್ಡೆಯ ಪ್ರಮಾಣ.
ಜಗತ್ತಿನಲ್ಲಿ ಬರ, ನೆರೆ, ಚಂಡಮಾರುತ ಮುಂತಾದ ನೈಸರ್ಗಿಕ ವಿಕೋಪದಿಂದ ನಿರಾಶ್ರಿತರಾದವರ ಒಟ್ಟು ಸಂಖ್ಯೆ.೭೦ ಲಕ್ಷ ಆಗಿದೆ.
2019 ಜುಲೈ– ಆಗಸ್ಟ್‌ನಲ್ಲಿ ಜಪಾನ್‌ನಲ್ಲಿ ಬಿಸಿಗಾಳಿಯಿಂದಾಗಿ ಮೃತಪಟ್ಟವರ ಸಂಖ್ಯೆ.೧೦೦ ಜನಕ್ಕಿಂತ ಹೆಚ್ಚಿನವರು ಸತ್ತಿದ್ದಾರೆ.
ಭೂಮಿಯಲ್ಲಿ ಹೆಚ್ಚುತ್ತಿರುವ ಶಾಖಕ್ಕೆ ಪರಿಹಾರ ಕಂಡುಹಿಡಿಯಲು 25ನೇ ವಾರ್ಷಿಕ ಜಾಗತಿಕ ಹವಾಮಾನ ಸಮಾವೇಶ (World Climate Conference) ಸ್ಪೇನಿನ ರಾಜಧಾನಿ ಮಾಡ್ರಿಡ್‍ನಲ್ಲಿ ನಡೆಯಿತು. ಅಲ್ಲಿ 177 ದೇಶಗಳ ವಿಜ್ಞಾನಿಗಳು, ರಾಜತಾಂತ್ರಿಕ ಪರಿಣತರು, ರಾಜಕೀಯ ಮುತ್ಸದ್ದಿಗಳು ಸೇರಿದ್ದರು. ಈ ಸಮಾವೇಶ ಡಿಸೆಂಬರ್ 2ರಂದು ಆರಂಭವಾಗಿದ್ದು 13-12-2019 ಮುಕ್ತಾಯವಾಯಿತು.
ಅಲ್ಲಿ ಹಾಕಿದ ವಿವಿಧ ದೇಶಗಳ ಪ್ರದರ್ಶನ ಮಳಿಗೆಗಳಲ್ಲಿ ಭಾರತದ್ದು ವಿಶಿಷ್ಠವಾದುದು. ಅಲ್ಲಿ ಗಾಂಧೀಜಿಯವರ ಅನೇಕ ಬಟ್ಟೆಚಿತ್ರಗಳನ್ನು ತೂಗುಹಾಕಿ, ನಡುವೆ ಗಾಂಧೀಜಿಯ ಸರಳ ಜೀವನದ ಸಂಕೇತಗಳನ್ನೂ ತೋರಿಸಲಾಗಿದೆ. ವರ್ಧಾ ಆಶ್ರಮದ ದೃಶ್ಯವನ್ನು ಹೋಲುವ ಚರಕ, ಚಾಪೆ, ಚೊಂಬು, ದಿಂಬುಗಳನ್ನು ಇಡಲಾಗಿದೆ.
ಸಂದೇಶ:ಅದರ ಸಂದೇಶವೆಂದರೆ ಸರಳಜೀವನ ಮುಂದಿನ ಬಿಸಿಯುಗಕ್ಕೆ ಪರಿಹಾರವಾಗಿದೆ. ವಿಜ್ಞಾನಿಗಳು ಹೇಳುವ ವರದಿಯಂತೆ ವರದಿಗಳಂತೆ ಮುಂದೆ ಬರುವ ಬಿಸಿಪ್ರಳಯಕ್ಕೆ ಭಾರತೀಯರೇ ಹೆಚ್ಚು ಬಲಿಯಾಗಯಾಗಬಹುದು. ಈ ಪ್ರಳಯವನ್ನು ಯಶಸ್ವಿಯಾಗಿ ಎದುರಿಸಲು ಪರಿಹಾರಗಳು ಭಾರತದಲ್ಲೇ ಇವೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಗಾಂಧೀಜಿ ತೋರಿದ ಸರಳ ಬದುಕಿನ ಮಾದರಿಯೇ ಈ ಮುಂದೆ ಬರಬಹುದಾದ ಬಿಸಿಯುಗದ ಸಮಸ್ಯೆಗಳಿಗೆ ಪರಿಹಾರ. ಗಾಂಧೀಜಿಯವರ ಜೀವನ ಸಂದೇಶ ಅದು.
ಆಮ್ಲಜನಕದ ಕೊರತೆ ಅನೆಕ ಕಡೆ ಅದೂ ನಗರಗಳಲ್ಲಿ ಹೆಚ್ಚು ಆಗುತ್ತಿದೆ. ಅದನ್ನು ‘ಕಾರ್ಬನ್ ಹೆಜ್ಜೆಗುರುತು’ (ಕಾರ್ಬನ್ ಫೂಟ್‍ಪ್ರಿಂಟ್) ಎಂಬ ಮಾಪನದಲ್ಲಿ ಅಳತೆಮಾಡುತ್ತಾರೆ.ಜಗತ್ತಿನ ಒಬ್ಬೊಬ್ಬರೂ ಪ್ರತಿವರ್ಷ ಎಷ್ಟು ಫಾಸಿಲ್ ಇಂಧನಗಳನ್ನು ಸುಟ್ಟು ಗಾಳಿಗೆ ಸೇರಿಸುತ್ತಿದ್ದೇವೆ ಎಂಬ ಅಳತೆಗೋಲು ಇದು. ಈ ಅಳತೆಯಮತೆ ಜಗತ್ತಿನ ಸರಾಸರಿ ಪ್ರತಿವ್ಯಕ್ತಿಯ ಇಂಗಾಲದ ಹೆಜ್ಜೆಗುರುತಿನ ತೂಕ ವಾರ್ಷಿಕ 4.5 ಟನ್‍ಗಳಷ್ಟಿದೆ ಎಂಬುದು ವಿಜ್ಞಾನಿಗಳ ಲೆಕ್ಕ. ಅಮೆರಿಕದ ಜನರ ಹೆಜ್ಜೆಗುರುತಿನ ತೂಕ 16 ಟನ್; ಅದೇ ಭಾರತದ ಪ್ರಜೆಯ ಸರಾಸರಿ ಕೇವಲ 1.8 ಟನ್ ಇದೆ. ಆದರೆ ಅಮೆರಿಕ ತನ್ನ ಜಗತ್ತಿಗೆ ಇಂಗಾಲ ಕೊಡಿಗೆಯನ್ನು ಕಡಿಮೆ ಮಾಡಲು ಒಪ್ಪುತ್ತಿಲ್ಲ. ಭಾರತ ಚೀನಾಗಳಿಗೆ ಇಂಗಾಲವನ್ನು ಹೆಚ್ಚುಮಾಡುವ ಯೊಜನೆ ಕೈಗೊಳ್ಳದಂತೆ ಒತ್ತಡ ಹಾಕುತ್ತಿದೆ. ಒಟ್ಟಿನಲ್ಲಿ ಈ ಬಿಸಿ ಇಂಗಾಲದ ಪ್ರಳಯವನ್ನು ತಡೆದು ಮುಂದಿನ ಪೀಳಿಗೆಗೆ ಸುಖ ಜೀವನಕ್ಕೆ ಅವಕಾಶಮಾಡಲು ಗಾಂಧೀಜಿಯವರ ಸರಳ ಬದುಕು ಎಲ್ಲರಿಗೆ ಆದರ್ಶಪ್ರಾಯವಾಗಿದೆ ಎಂಬುದನ್ನು ಮಾಡ್ರಿಡ್ ಹವಾಮಾನ ಸಮ್ಮೇಳನದಲ್ಲಿ ಸಂಕೇತಿಸಲಾಗಿದೆ.