ಗುಡುಗು ಸಿಡಿಲಿಗೆ ಆಕಳು ಕರು ಸಾವು
e-ಸುದ್ದಿ, ಹಾಲಾಪೂರ
ಹಾಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಮ್ ರಾಮಲದಿನ್ನಿ ಗ್ರಾಮದ ಕರಿಯಪ್ಪ ನಾಯಕ ಅವರ ಮನೆ ಮುಂದೆ ಕಟ್ಟಿದ್ದ ಆಕಳು ಮತ್ತು ಕರು ಗುರುವಾರ ರಾತ್ರಿ ಬಿದ್ದ ಗುಡುಗು ಸಿಡಿಲು ಹೊಡೆತಕ್ಕೆ ಸಾವನ್ನಪ್ಪಿವೆ.
ಕರಿಯಪ್ಪ ನಾಯಕ ರವರು ದಿನಾಲು 200 ರೂಪಾಯಿ ಹಾಲು ಮಾರಾಟ ಮಾಡಿ ಜೀವನ ಮಾಡುತ್ತಿದ್ದರು, ಹಾಗೆ ಆಕಳು 40000 ರೂಪಾಯಿ ಕೊಟ್ಟು ಖರೀದಿಗೆ ತಂದಿದ್ದರು ಇದರಿಂದ ತೀವ್ರ ತೊಂದರೆಗೆ ಒಳಗಾಗಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿ ಅಬುಬೂಕರ , ಪಶು ವೈದ್ಯರಾದ ಡಾ.ಜಯರಾಜ, ಕವಿತಾಳ ಪೊಲಿಸ್ ಠಾಣಿ ಸಿಬ್ಬಂದಿ ಬೇಟಿ ನೀಡಿ ಪರಿಶೀಲಿಸಿ ದರು.