ಕಸಾಪ ಜಿಲ್ಲಾ ಅಭ್ಯರ್ಥಿ ಮಲ್ಲಿಕಾರ್ಜುನಸ್ವಾಮಿ ಮತಯಾಚನೆ

e-ಸುದ್ದಿ, ಮಸ್ಕಿ

ಕನ್ನಡ ಸಾಹಿತ್ಯ ಪರಿಷತ್‍ಗೆ ಸ್ಪರ್ಧೆಸಿರುವ ರಾಯಚೂರಿನ ಮಲ್ಲಿಕಾರ್ಜುನ ಸ್ವಾಮಿ ಶಿಖರಮಠ ಪಟ್ಟಣದಲ್ಲಿ ಶುಕ್ರವಾರ ಕಸಾಪ ಆಜೀವ ಸದಸ್ಯರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಈ ಬಾರಿಯ ಜಿಲ್ಲಾ ಕಸಾಪಗೆ ಯುವಕನಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಮತದಾರರು ಯುವಕರನ್ನು ಬೆಂಬಲಿಸುವ ಮೂಲಕ ಜಿಲ್ಲಾ ಕಸಾಪಕ್ಕೆ ಹೊಸ ಚೈತನ್ಯ ನೀಡಲು ಅವಕಾಶ ಮಾಡಿಕೊಡುವದಕ್ಕಾಗಿ ನನಗೆ ಮತ ನೀಡಿ ಎಂದು ಮನವಿ ಮಾಡಿದರು.
ಇದುವರೆಗೆ ಜಿಲ್ಲಾ ಕಸಾಪಗೆ ಹಲವು ಹಿರಿಯರು ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ಮೊದಲ ಬಾರಿಗೆ ಯುವಕರಿಗೆ ಅವಕಾಶ ನೀಡಿ ಬೆಂಬಲಿಸಿರಿ ಎಂದರು.
ಕರೊನಾ ಹಿನ್ನಲೆಯಲ್ಲಿ ಸಭೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಗೆಳೆಯರೊಂದಿಗೆ ಸಾಧ್ಯವಾದಷ್ಟು ಮನೆ ಮನೆ ಭೇಟಿ ನೀಡಿ ಮತಯಾಚಿಸುವೆ. ಉಳಿದಂತೆ ನನ್ನ ಸ್ನೇಹಿತರು, ಹಿರಿಯರು ನನ್ನ ಪರವಾಗಿ ಮತ ಯಾಚನೆ ಮಾಡುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು.
ಪಟ್ಟಣದ ಮಹಾಂತೇಶ ಬ್ಯಾಳಿ, ರಾಜು ಸಾನಬಾಳ, ಶಿವಕುಮಾರ ಕಡಾಮುಡಿಮಠ ಹಾಗೂ ಇತರ ಸದಸ್ಯರ ಮನೆಗಳಿಗೆ ಭೇಟಿ ನೀಡಿದ ಮಲ್ಲಿಕಾರ್ಜುನ ಸ್ವಾಮಿ ಮತ ಕೊಡುವಂತೆ ಮನವಿ ಮಾಡಿದರು.
ಹೊರಾಟಗಾರ ರಜಾಕ್ ಉಸ್ತಾದ, ಬಸವರಾಜ ನಾಗಡದಿನ್ನಿ, ಆನಂದ ವೀರಾಪುರ ಹಾಗೂ ಇತರರು ಇದ್ದರು.

Don`t copy text!