ಶರಣರ ಮಹಿಳಾ ಸಬಲೀಕರಣ ಮತ್ತು ಧಾರ್ಮಿಕ ಸ್ವಾತಂತ್ರ್ಯ

ಶರಣರ ಮಹಿಳಾ ಸಬಲೀಕರಣ ಮತ್ತು ಧಾರ್ಮಿಕ ಸ್ವಾತಂತ್ರ್ಯ

ಹನ್ನೆರಡನೇ ಶತಮಾನದ ಸ್ತ್ರೀ ವಾದವನ್ನು ಮಹಿಳಾವಾದ ವೆಂದು ಮಹಿಳಾ ಸಬಲೀ ಕರಣ ವೆಂದು ಚಚೆ೯ ಗೆ ತೆಗೆದುಕೊಳ್ಳುತ್ತೇವೆ. ಅಂದು ಪ್ರತಿಗಾಮಿ ಸಮಾಜವನ್ನು ಎದುರಿಸಿ ಕ್ರಾಂತಿಕಾರಿ ಕ ವಿಚಾರಗಳನ್ನು ಪ್ರಚೋದಿಸಿದ ಕೆಲವೇ ಧರ್ಮ
ಪ್ರವರ್ತಕರಲ್ಲಿ ಬಸವಣ್ಣನವರುಒಬ್ಬರು. ಅವರ ರಾಜಕೀಯ ಆರ್ಥಿಕ ಪ್ರಜ್ಞೆಗಳನ್ನು ಕುರಿತಾಗಿ ನಾನಿಲ್ಲಿ ಚರ್ಚಿಸುತ್ತಿಲ್ಲ. ಅವರು ಪ್ರಥಮ ಸ್ತ್ರೀಪರ ವಾದಿಗಳೆಂದು ಧಾರ್ಮಿಕ ಸ್ವಾತಂತ್ರ್ಯ ಕೊಟ್ಟವರು ಬಸವಣ್ಣ ನಾಗಿದ್ದ ಎನ್ನುವುದೇ ರೋಮಾಂಚನಕಾರಿ ಯಾದದ್ದು. ಮಹಿಳೆ ಸಾಮಾಜಿಕ ವಲಯದಲ್ಲಿ ಸಂಕುಚಿತ ಳಾದಾಗ ಧೈರ್ಯ ನೀಡಿ ಅಕ್ಷರ ಸಂಸ್ಕೃತಿಯಲ್ಲಿ ಅವಕಾಶ ಕೊಟ್ಟವನೆ ಅಣ್ಣ ನಾಗಿದ್ದ.

ಸಂವೇದನೆ ಎನ್ನುವುದೇ ಭಾವನಾತ್ಮಕ ವಾದದ್ದು ಮನದ ಪ್ರತಿಭಟನೆಯ ಅನಿಸಿಕೆಗಳಿಗೆ ಪ್ರತ್ಯುತ್ತರ ನೀಡುವುದಾಗಿದೆ. ಜ್ಞಾನದ ಹಂತಗಳನ್ನು ವಿಶಾಲ ವಾಗಿಸಿ ಅನುಭವದ ಎಚ್ಚರಿಕೆ ಯನ್ನು ಕೊಡುವುದಾಗಿದೆ.ಸ್ಥ್ರೀ ಕುರಿತು ಪುರುಷನ ಸಂವೇದನೆ ಪುರುಷನ ಕುರಿತು ಸ್ಥ್ರೀಸಂವೇದನೆಗಳು ಬದಲಾಗಬೇಕು. ಈ ಸಂವೇದನೆಗಳಿಗೆ ಬದಲಾವಣೆ ತಂದವರೇ ಶರಣ ರಾಗಿದ್ದರು. ಹೆಣ್ಣು-ಗಂಡು ಎಂಬ ವ್ಯತ್ಯಾಸ ನಿರಾಕರಿಸಿ ಆತ್ಮದ ನೆಲೆಯಲ್ಲಿ ಇಬ್ಬರು ಸಮಾನ ಎಂಬುದು ಶರಣರ ವಾದ. ಸ್ಥ್ರೀದೇಹದ ಮೇಲಾಗುವ ಅತ್ಯಾಚಾರಗ ಳಿಗಿಂತ ಅವಳ ಮಾನಸಿಕ ಅತ್ಯಾಚಾರ ಇನ್ನೂ ಭೀಕರ ವೆಂದು ಅರಿತ ಶರಣರು ಸ್ಥ್ರೀ ಮಾನಸಿಕವಾಗಿ ಸದೃಡಳಾಗುವಂತೆ ಸಮಾನತೆಯ ಸ್ವಾತಂತ್ರ್ಯ ವನ್ನು ಮತ್ತು ಸಮಾನ ವೇದಿಕೆ ಕಲ್ಪಿಸಿ ಕೊಟ್ಟರು.

ಸ್ತ್ರೀ ಶಕ್ತಿಯ ವ್ಯಾಖ್ಯಾನ…

ಶರಣರ ಸಂವೇದನೆಗಳನ್ನು ಗುರುತಿಸುವ ಸ್ತ್ರೀವಾದದ ಅಧ್ಯಯನ ಇಂದು ಮುಖ್ಯ ಕಾಳಜಿಯಾಗಿದೆ. ಬಸವಣ್ಣನವರ ಒಡನಾಟ ದಿಂದ ಸಾಮಾಜಿಕ ವಲಯದಲ್ಲಿ ನೀಲಮ್ಮ ವಿಚಾರ ಪತ್ನಿ ಎಂದೇ ಗುರುತಿಸಿ ಕೊಂಡಿದ್ದಾಳೆ. ಮಡದಿ ಎಂಬ ಶಬ್ದವೇ ಸಂವೇಧನಾ ಶೀಲತೆಯನ್ನು ಮುಂದು ಮಾಡುತ್ತದೆ. ನೀಲಮ್ಮನ ಈ ವಚನ..

ಅರುಹನರಿಯಲು II ಕುರುಹ ಮರೆಯಲೇ

ಬೇಕುII ಅರುಹನನುಗೊಳಿಸಲು ಆನು

ಪ್ರಸನ್ನ ಮೂರ್ತಿಯ II ಪಡೆದೆನಯ್ಯII

ಆನು ಉಭಯವಳಿದುII ನಿರಾಭಾರಿಯಾದೆ

ನಯ್ಯಾII ನಿರ್ಮಲ ನಿಜವ ಕಂಡು ಮುಕ್ತಿ

ಪದವ ಪಡೆದೆನಯ್ಯಾ ಸಂಗಯ್ಯ

ನೀಲಮ್ಮನ ಈ ಮಾತುಗಳು ಮಹಿಳಾ ಸಂವೇದನೆಯನ್ನು ಎಚ್ಚರಿಸುತ್ತದೆ. ಸ್ತ್ರೀ ಮರೆಯಬೇಕಾದ ಕುರುಹುಗಳೆಂದರೆ ತಾನು ದೇಹ ಮಾತ್ರ ಎನ್ನುವ ಕುರುಹು. ತಾನು ದುರ್ಬಲೆ ಎನ್ನುವ ಕುರುಹನ್ನು ನಿರಾಕರಿಸಬೇಕು ಎನ್ನುತ್ತಾಳೆ. ಸ್ತ್ರೀ ಪಡೆಯ ಬೇಕಾದದ್ದು ಅರಿವು. ಈ ಜಗತ್ತಿನ ಸೃಷ್ಟಿಯಲ್ಲಿ ಯಾರು ಪ್ರಮುಖರೆಲ್ಲ ಎಲ್ಲ ಸ್ತ್ರೀಯರಿಗೆ ಸ್ವತಂತ್ರವಾಗಿ ಸ್ವಾವಲಂಬಿಯಾಗಿ ಬದುಕುವ ಅರ್ಹತೆಯ ಅವಕಾಶವಿದೆ ಎಂದು ಸ್ಪಷ್ಟವಾಗಿ ಹೇಳುತ್ತಾಳೆ. ಶತ ಶತಮಾನಗಳಿಂದ ಮಹಿಳೆ ಶೋಷಣೆಗೆ ಒಳಗಾಗಿ ಪುರುಷನ ಭೋಗವಸ್ತುವಾಗಿ ಕಂಡ ಸಮಾಜದಲ್ಲಿ ಅವಳಿಗೆ ಅನುಭವ ಮಂಟಪ ವೆಂಬ ವೇದಿಕೆಯನ್ನು ನೀಡಿದ್ದೆ ಬಸವಾದಿ ಶರಣ ರಾಗಿದ್ದರು. ಜಗತ್ತು ಕಂಡ ಅಪೂರ್ವ ಸಾಧಕಿ ಶರಣ ಚಳುವಳಿಯ ಸ್ತ್ರೀ ಸ್ವಾಭಿಮಾನ ಪ್ರತೀಕವಾಗಿ ಅರಸೊತ್ತಿಗೆಯನು ದಾಟಿ” ಸಾವಿಲ್ಲದ ಕೇಡಿಲ್ಲದIiರೂಹಿಲ್ಲದ ಚೆಲುವಂಗೆIiಒಲಿದ ಅಕ್ಕಬಂಡಾಯದ ಗಟ್ಟಿ ಧ್ವನಿ” ಸಾವ ಕೆಡುವ ಗಂಡಂದಿರ ಒಯ್ದು ಒಲೆಯೊಳಗಿಕ್ಕು.” ಎನ್ನುವ ಅಕ್ಕಸ್ತ್ರೀ ಪ್ರಧಾನ ನೆಲೆಯಲ್ಲಿ ನಿಷ್ಠುರವಾಗಿ ಅಭಿವ್ಯಕ್ತಿಸುತ್ತಾಳೆ.ತನ್ನ ಆತ್ಮಗೌರವದ ಪ್ರಶ್ನೆ ಬಂದಾಗ ಎಚ್ಚರಿಕೆಯಿಂದ ಮೌನ ಮುರಿದು ಉತ್ತರ ನೀಡಿದ್ದಳು.

ಕಾಯ ಕರ್ರನೆ ಕಂದಿದಡೇನಯ್ಯII ಕಾಯ

ಮಿರ್ರನೆ ಮಿಂಚಿದಡೆII ಏನಯ್ಯII ಅಂತರಂಗ

ಶುದ್ಧವಾದ ಬಳಿಕ II ಚೆನ್ನಮಲ್ಲಿಕಾರ್ಜುನಯ್ಯ

ನೀನೊಲಿದಕಾಯವುII ಹೇಗದ್ದಡೇನಯ್ಯ

ಸ್ತ್ರೀಶೋಷಿತಸಮಾಜದಲ್ಲಿ ಅವಳನ್ನು ಹತ್ತಿಕ್ಕಿದ ಪ್ರಸಂಗಗಳು ಸಾಕಷ್ಟಿವೆ.ಕಾಮವನ್ನು ಮತ್ತು ಸ್ತ್ರೀಯರನ್ನು ಅಪನಂಬಿಕೆಯಿಂದಲೇ
ಮೇಲ್ವರ್ಗ ಸಮಾಜ ಕಂಡಿತ್ತು. ಹೆಂಗಸರನ್ನು ನೋಡಬೇಡಿ ಅವರ ಜೊತೆ ಮಾತನಾಡಬೇಡಿ ಅವರು ಶೀಘ್ರ ಕೋಪಿಗಳು. ಅವರಲ್ಲಿ ರಾಗೋದ್ರೇಕ ತೀವ್ರ ವಾಗಿರುತ್ತದೆ ಎಂಬ ನಂಬಿಕೆ ಹುಟ್ಟುಹಾಕಿದ್ದರು. ಇಂತಹ ಪ್ರಸಂಗಗಳನ್ನು ಸಮಾಜದಲ್ಲಿ ಕಂಡ ಅಕ್ಕ, ” ಕಾಯ ದೊಳಗಿನ ಕಾಮವನ್ನು ಗೆದ್ದು ಕಾಮ ಹರನನ್ನು ಆಕೆ ಕೂಡಿದಳು” ಕಾಮುಕ ಕಣ್ಣುಗಳಿಗೆ ಪ್ರತ್ಯುತ್ತರ ನೀಡಿ ಸ್ತ್ರೀ ಕುಲಕ್ಕೆ ಅನುಭಾವಿ ಸಾಧಕಿ ಯಾದಳು.

ಆಧ್ಯಾತ್ಮಿಕವಾಗಿ ಪುರುಷ ಸಮಾನ ಅರ್ಹತೆ ಮಾನ್ಯತೆಗಳನ್ನು ಪಡೆದಿದ್ದ ಸ್ತ್ರೀಯರು ವಚನಗಳ ಮೂಲಕ ಅಭಿವ್ಯಕ್ತಿ ಸಿದ್ದು ಜಾಗತಿಕ ಧರ್ಮದ ಇತಿಹಾಸದಲ್ಲಿ ಮಹತ್ವದ ಸಂಗತಿ ಎಂದು ಹೇಳಬಹುದು. ಹೀಗಾಗಿ ಹೆಣ್ಣು ಪುರುಷ ಸಾಧನೆಗೆ ಅಡ್ಡಿ ಎಂದು ಎಲ್ಲಾ ಪುರುಷನ ಕೆಡುಕಿಗೆ ಸ್ತ್ರೀಯರನ್ನು ಮುಂದುಮಾಡಿ ಲೌಕಿಕ ಬದುಕಿನ ನಶ್ವರತೆಯನ್ನು ಹೆಣ್ಣಿಗೆ ಆರೋಪಿ ಸುತ್ತಿದ್ದರು. ಆದರೆ ಶರಣರ ಕಾಲದಲ್ಲಿ ಸ್ತ್ರೀ ಯನ್ನು ಗೌರವದಿಂದ ಕಂಡರು. ಹೆಣ್ಣು ಅಬಲೆಯಲ್ಲ ಪುರುಷರಂತೆ ಎಲ್ಲಾ ಕ್ಷೇತ್ರಗಳನ್ನು ನಿಭಾಯಿಸುವ ಸಮರ್ಥ ಶಕ್ತಿ ಉಳ್ಳವರೆಂದು ತಮ್ಮ ವಚನಗಳ ಮೂಲಕ ಸ್ಪಷ್ಟಪಡಿಸಿದರು. ಶರಣ ಸಿದ್ಧರಾಮ ಹೇಳುವಂತೆ, ” ಹೆಣ್ಣು ಸಾಕ್ಷಾತ್ ಕಪಿಲ ಸಿದ್ಧಮಲ್ಲಿಕಾರ್ಜುನ ವೆಂದು ವ್ಯಾಖ್ಯಾನಿಸಿದರು. ಹೊಸ ಆತ್ಮಶ್ರದ್ದೆಯ ಬೆಳಕನ್ನು ಸ್ತ್ರೀಯರಲ್ಲಿ ಕಂಡು ಮಹಾದೇವಿ ಎಂದು ಹೆಣ್ಣಿಗೆ ದೇವತೆಯ ಸ್ಥಾನ ನೀಡಿದರು. ಹೆಣ್ಣು ಹೊನ್ನು ಮಣ್ಣಿಗಾಗಿ ಕದನ ಗಳಾಗಿದ್ದು ಚರಿತ್ರೆಗಳಲ್ಲಿ ಕಾಣುತ್ತೇವೆ. ಅಣ್ಣನ ಈ ವಚನ

ಊರ ಸೀರೆಗೆ ಅಸಗII ಬಡಿ ಹೊಡೆದಂತೆ

ಹೊನ್ನೆನ್ನದು ಮಣ್ಣೆನ್ನದು II ಎಂದು ಮರುಳಾದೆ

ನಿಮ್ಮನರಿಯದ ಕಾರಣII ಕೆಮ್ಮನೆ ಕೆಟ್ಟೆ

ಕೂಡಲ ಸಂಗಮದೇವ…

ಕಾಯವೆಂಬ ಊರಿನಲ್ಲಿ ಜೀವವೆಂಬ ಮಗು ಹುಟ್ಟಿತ್ತು.ಅಲ್ಲಿ ಹೊನ್ನು ಮಣ್ಣಿಗಾಗಿ ಜಗಳ ನಡೆದಿತ್ತು. ಇದಕ್ಕೆ ಅಣ್ಣನು ಕೊಡುವ ಕಾರಣ ನಿಮ್ಮನರಿಯದ ಕಾರಣ ಕೆಮ್ಮನೆ ಕೆಟ್ಟೆ ಎಂದು… ದೇವರನ್ನು ಕಂಡಾಗ ಮಾತ್ರ ಇವುಗಳ ವ್ಯಾಮೋಹ ನೀಗುವುದರಿಂದ ಹೆಣ್ಣು- ಹೊನ್ನು ಮಣ್ಣು ಈ ಮೂರು ಪರರ ಪಾಲಾಗದಂತೆ ನೋಡಿಕೊಳ್ಳಬೇಕು. ಉತ್ತಮ ಜೀವನ ನಡೆಸಲು ಬೇಕಾದ ಮೂರು ಸೂತ್ರಗಳು ಇವು. ಇವುಗಳಲ್ಲಿ ಯಾವುದಾದರೂ ಒಂದು ನಶಿಸಿ ಹೋದರೆ ಮನುಷ್ಯ ನೆಮ್ಮದಿ ಕಳೆದುಕೊಳ್ಳ ಬೇಕಾಗುತ್ತದೆ. ಹೀಗಾಗಿ ಹೆಣ್ಣಲ್ಲಿ ಅಡಗಿರುವ ಸುಪ್ತ ಪ್ರತಿಭೆ ಸಾಧನೆಯನ್ನು ಕಂಡುಕೊಂಡ ಶರಣರು ಸ್ತ್ರೀ ಪ್ರಜ್ಞೆಯನ್ನು ವಿಶಾಲವಾಗಿ ಸಿದರು. ಮಹಿಳಾ ಸ್ವಾತಂತ್ರ್ಯಕ್ಕೆ ಅನುವು ಮಾಡಿ ಕೊಟ್ಟರು. 57 ಜನ ಶರಣೆಯರು ವಚನಗಳನ್ನು ಬರೆದ ಉಲ್ಲೇಖ ಸಿಗುತ್ತವೆ.ಅದರಲ್ಲಿ ಪ್ರಮುಖವಾಗಿ37 ಜನ ಶರಣೆಯರು ವಚನಗಳನ್ನು ಬರೆದಿರುವ ಮಾಹಿತಿಗಳು ಲಭ್ಯವಾಗಿವೆ.

ಸೂತಕಗಳ ಕುರಿತು…

ಶರಣರ ಭಾವ ಕಂಪನದ ಸಂವೇದನೆಗಳು ಸೂತಕಗಳ ಮೂಲಕ ಮರು ಪ್ರತಿಭಟನೆ ಪಡೆಯಿತು.ಶರಣರು ಮಾತನಾಡುತ್ತಿರ ಲಿಲ್ಲ ಅವರ ನಡೆಯೆ ಮಾತಾಗಿತ್ತು. ಕೇವಲ ತತ್ವ ಸಿದ್ದಾಂತ ಗಳಿಂದ ಬದಲಾವಣೆ ಅಸಾದ್ಯವೆಂದು ನಮ್ಮೊಳು ನಾವು ಬದಲಾಗಬೇಕು. ಹೀಗಾಗಿ ಬದಲಾವಣೆಯು ವಚನ ಸಾಹಿತ್ಯದ ಮೂಲ ಉದ್ದೇಶವಾಗಿತ್ತು. ಸಾಧನೆಯಮುಖ್ಯ ಉದ್ದೇಶ ಹೊಂದಿದ ಶರಣರು ಅಂದಿನ ಒಳ ಸೂತಕ ಗಳಿಂದ ಘಾಸಿಗೊಂಡು ಬೆಚ್ಚಿದರು. ಶ್ರೇಣೀಕೃತ ಧರ್ಮಗಳ ನೆಲೆ ಬೆಲೆಗಳನ್ನು ನೋಡಿ ಸೂತಕಗಳ ಕೊಳೆ ನಿರ್ಮೂಲ ವಾಗಬೇಕು. ಹೊಸದನ್ನು ನಿರ್ಮಿಸಬೇಕೆಂದು, ಬೆಳೆಯನ್ನು ಬೆಳೆಯಬೇಕು ಪಡೆಯಬೇಕು. ಎನ್ನುವ ಧೋರಣೆ ವಚನಕಾರರ ದಾಗಿತ್ತು. ಸೂತಕ ಗಳೆಂಬ ಸ್ವಾಭಿಮಾನ ಚಳುವಳಿಯು ಶರಣರ ಅರಿವು ಅನುಭಾವದ ಮೂಸೆಯಿಂದ ಹೊರಬಂದಿತು.

ಬಸವಣ್ಣನ ಈ ವಚನ..

ಗುರು ಕಾರುಣ್ಯ ಕಟಾಕ್ಷ ದಲ್ಲಿII ಉತ್ಪತ್ಯವಾದ

ಅಜಾತಂಗಳಿಗೆ II ಜಾತಿ ಸೂತಕ

ಜನನ ಸೂತಕII ರಜ ಸೂತಕ II ಉಚ್ಚಿಷ್ಟ

ಸೂತಕII ಉಂಟೆಂಬ ವು ಗಳಿಗೆII ಗುರುವಿಲ್ಲ

ಲಿಂಗವಿಲ್ಲ iI ಜಂಗಮವಿಲ್ಲ II ಪ್ರಸಾದ

ಇಲ್ಲವಯ್ಯII ಕೂಡಲಸಂಗಮದೇವ.

ಜಾತಿಸೂತಕ ಜನನಸೂತಕ ಉಚ್ಚಿಷ್ಟಸೂತಕ ರಜಸೂತಕ ಪ್ರೇತಸೂತಕ ಈ ಪಂಚಸೂತಕಗಳು ಶರಣರಿಗೆ ಇಲ್ಲವೆಂದು ಚೆನ್ನ ಬಸವಣ್ಣನೆ ಹೇಳುವನು. ವೈದಿಕ ಧರ್ಮದಲ್ಲಿ ಇಂದಿಗೂ ಪಂಚ ಸೂತಕಗಳ ಆಚರಣೆಯ ನೆಪದಲ್ಲಿ ದಲಿತರ ದುಃಖಿತರ ಸ್ತ್ರೀಯರ ಶೋಷಣೆ ಯಾಗುವುದನ್ನು ಕಂಡ ಶರಣರು ಈ ಸೂತಕಗಳನ್ನು ನಿರಾಕರಿಸಿದರು.”ಪಂಚಮಹಾ ಸೂತಕಕ್ಕ ಅಂಜುವುದು ಕೂಡಲಸಂಗಮನ” ನಾಮಕ್ಕಯ್ಯ..
ದಾಸಿ ಪುತ್ರನಾಗಲಿ ವೇಶ್ಯಾಪುತ್ರನಾಗಲಿ ಶಿವ ಲಿಂಗದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವ ನೆಂದು ವಂದಿಸ ಬೇಕೆನ್ನುತ್ತಾರೆ.ಶರಣರು.

ಹೊಲೆಯುಂಟೆ ಲಿಂಗವಿದ್ದಡೆಯಲ್ಲಿllಕುಲ

ಉಂಟೆ ಜಂಗಮವಿದ್ದಡೆಯಲ್ಲII ಅಪವಿತ್ರದ

ನುಡಿಯ ನುಡಿವ II ಸೂತಕವೇ ಪಾತಕ

ನಿಶ್ಕಳಂಕ ನಿಜೈಕ್ಯ II ತ್ರಿವಿಧ ನಿರ್ಣಯII

ಕೂಡಲ ಸಂಗಮದೇವII ನಿಮ್ಮ

ಶರಣರಿಗಿಲ್ಲದಿಲ್ಲII

ಹೊಲೆ ಎಂದರೆ ಮಲಿನ. ಲಿಂಗವಿದ್ದಲ್ಲಿ ಮಲಿನ ವಿರಲು ಸಾಧ್ಯವೇ? ಲಿಂಗವು ಎಲ್ಲಾ ಅಸ್ಪೃಶ್ಯತೆ ಯನ್ನು ತೊಲಗಿಸುವ ವಸ್ತುವಾಗಿದೆ. ಜನನ ಮರಣ ಮುಟ್ಟು ಇವು ಸೂತಕ ಗಳಲ್ಲ ಎನ್ನುತ್ತಾನೆ ಬಸವಣ್ಣ. ಈ ಎಲ್ಲಾ ಮಲಿನ ಗಳನ್ನು ಹೋಗಲಾಡಿಸುವ ಶಕ್ತಿ ಲಿಂಗ ಕ್ಕಿದೆ. ಜಂಗಮ ವಿರುವ ಕಡೆ ಜಾತಿಯ ವಿಷಯ ವಿರಲು ಸಾಧ್ಯವಿಲ್ಲ. ಅಂದರೆ ಪ್ರಸಾದ ಎಂದಿಗೂ ಅಪವಿತ್ರ ವಲ್ಲ.ಈ ವಿಚಾರ ಶೀಲತೆಯ ಮೂಲಕ ಸಾಮಾಜಿಕ ಶೋಷಣೆಯನ್ನು ನಿರ್ಮೂಲನೆ ಮಾಡಿದರು ಇನ್ನೊಂದು ಕಡೆ ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟರು ಶರಣರು.

ಸತಿಪತಿ ಭಾವದ ಅಭಿವ್ಯಕ್ತತೆ….

ಸತಿಪತಿ ಭಾವದ ಸಂವೇದನೆಯಲ್ಲಿ ಲಿಂಗ ಸಮಾನತೆಯ ಎಚ್ಚರಿಕೆಯನ್ನು ಮರು ಆಶಯ ಗಳ ಮೂಲಕ ಕಟ್ಟಿಕೊಟ್ಟರು.” ಸತಿಪತಿ ಗಳು ಒಂದಾದ ಭಕ್ತಿ ಹಿತವಪ್ಪುದು ಶಿವಂಗೆ “ಎಂಬ ಹೇಳಿಕೆಯಲ್ಲಿ ಸಾಂಸಾರಿಕ ಬದುಕಿನ ಹೆಗ್ಗಳಿಕೆಯನ್ನು ಕಾಣಬಹುದು. ಆದರೆ ಅಂದು ಹೆಂಗಸರು ಇರುವುದಕ್ಕಿಂತ ಹೆಚ್ಚಿನ ಕ್ರೌರ್ಯ ಅತಿರೇಕದ ದುಷ್ಟತನವನ್ನು ಆರೋಪಿಸಿ ಪುರುಷರನ್ನು ಸಂಸಾರ ವಿಮುಖರನ್ನಾಗಿ ಸಿದ್ದರು ಇದನ್ನರಿತ ಶರಣರು ಶರಣಸತಿ ಲಿಂಗಪತಿ ಎಂದರು. ನೈಸರ್ಗಿಕವಾಗಿ ಸ್ತ್ರೀ-ಪುರುಷರ ದೇಹದಲ್ಲಿ ಭಿನ್ನತೆಯಿದೆ ಹೊರತು ಅಂತರಂಗ ದಲ್ಲಿರುವ ಅರಿವು ಸುಜ್ಞಾನ ಆತ್ಮ ಚೈತನ್ಯ ಭಿನ್ನವಲ್ಲ ವೆಂದು ಶರಣರು ಸಮರ್ಥಿಸಿದರು.
ಮಧ್ಯಕಾಲೀನ ಧಾರ್ಮಿಕ ಪಂಥಗಳು ಹುಟ್ಟು ಹಾಕಿದ ಬಹುದೊಡ್ಡದಾದ ಸತಿಪತಿ ಭಾವಗಳೆಂದರೆ ಹೆಣ್ಣು ಗಂಡಾಗುವ ಪರಿ ಗಂಡು ಹೆಣ್ಣಾಗುವ ಪರಿ ವ್ಯಾಖ್ಯಾನಿಸಿದರು. ಅಂದರೆ ಪರತತ್ವವನ್ನು ಆರಾಧಿಸಲು ಸಾಧಕನು ಹೆಣ್ಣಾಗಲೇಬೇಕು. ಭಕ್ತ ಗಂಡೆಂಬ ಅಹಂ ನಿಂದ ಶಿವನನ್ನು ಒಲಿಸಿ ಕೊಳ್ಳಲಾಗುವುದಿಲ್ಲ. ಪುರುಷ ತನ್ನ ಅಹಂ ಅನ್ನು ಸುಟ್ಟುಕೊಳ್ಳುವುದು. ತನ್ನೊಳಗಿನ ಸ್ತ್ರೀಸತ್ವವನ್ನು ಆಹ್ವಾನಿಸಿಕೊಳ್ಳುವ ದಾಗಿದೆ. ಶರಣಸತಿ ಲಿಂಗಪತಿ ಎನ್ನುವ ಮೂಲಕ ಶರಣರು ಗಂಡು ಎಂಬ ಅಹಂ ಅನ್ನು ನಿರಾಕರಿಸಿ ಶರಣ ಹೆಣ್ಣಾದರು. ಸ್ತ್ರೀಪುರುಷ ವ್ಯತ್ಯಾಸ ನಿರಾಕರಿಸಿ ಆತ್ಮದ ನೆಲೆಯಲ್ಲಿ ಇಬ್ಬರು ಸಮವೆಂದು ಸಾರಿದರು. ಈ ಲೋಕ ವೆಲ್ಲಾ ಹೆಣ್ಣು, ಶಿವನೊಬ್ಬನೇ ಗಂಡೆಂದು ಸಮರ್ಥಿಸಿತು ” ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ II ಸತಿಪತಿ ಗಳು ಒಂದಾಗದ ಭಕ್ತಿII ಅಮೃತದೊಳು ವಿಷ ಬೆರೆಸಿದಂತೆ II ರಾಮನಾಥ. ಎಂದು ಜೇಡರ ದಾಸಿಮಯ್ಯ ಹೇಳುವನು ಸತಿಪತಿಯ ಸಂಬಂಧ ಕೇವಲ ಲೌಕಿಕವಾಗಿ ಅಲ್ಲ.ಧಾರ್ಮಿಕವಾಗಿ ಗಟ್ಟಿಯಾಗಿರಬೇಕು ಎಂಬ ಆತ್ಮವಿಶ್ವಾಸದ ಮಾತುಗಳು ಶರಣರದು

ಅಕ್ಕನ ವಚನ..

ಕರ್ಮವೆಂಬ ಗಂಡನ IIಬಾವಿ ಟೊಣೆದು

ಹಾದರ ಮಾಡುವೆII ಹರನ ಕೂಡ

ಮನವೆಂಬ ಸಖಿಯ IIಪ್ರಸಾದದಿಂದ

ಅನುಭಾವವನ್ನು IIಕಲಿತನು ಶಿವನೊಡನೆ

ಅಕ್ಕ ಸತಿಯಾಗಿ ಚೆನ್ನಮಲ್ಲಿಕಾರ್ಜುನ ನಲ್ಲಿ ಪತಿ ಭಾವವನ್ನು ಅನುಭವದಲ್ಲಿ ಕಾಣುತ್ತಾಳೆ. ಅಂದು ಹೆಣ್ಣಿಗೆ ವಿಧಿಸಿದ ಲೌಕಿಕಸಂಕೋಲೆಗಳನ್ನು ಬೇಧಿಸಿ ಆಧ್ಯಾತ್ಮದ ಗಂಡನ ಜೊತೆ ಅನುಭಾವದ ಬಾವಿಯನ್ನು ಹೊಕ್ಕೆ. ಮನವೆಂಬ ಇಂದ್ರಿಯಗಳಿಂದ ಚೆನ್ನಮಲ್ಲಿಕಾರ್ಜುನನ ಜೊತೆ ಅನುಭಾವದ ಸಂವೇದನೆಗಳನ್ನು ಹಂಚಿಕೊಂಡೆ. ಅಕ್ಕ ಸತಿಪತಿ ಭಾವದ ಅತೀಂದ್ರಿಯದ ಉನ್ಮತ್ತತೆ ಇಂದ ಕರ್ಮವೆಂಬ ಗಂಡನ ಭಾವಿಯ ಟೊಣೆದು… ಎಂದು ಭೌತಿಕ ಪ್ರತಿಕ್ರಿಯೆಯಲ್ಲಿ ಸಿಡಿದೇಳುತ್ತಾಳೆ. ಅಕ್ಕ ಸತಿಯಾಗಿ ಚೆನ್ನಮಲ್ಲಿಕಾರ್ಜುನನನ್ನು ಪತಿಭಾವದ ಅನುಭಾವದಲ್ಲಿ ಕಾಣುತ್ತಾಳೆ. ಅಲ್ಲಮಪ್ರಭು ಬೆಡಗಿನ ವಚನದಲ್ಲಿ ಸತಿಪತಿ ಭಾವವನ್ನು ಗುರುವಿನ ಮೂಲಕ ವ್ಯಕ್ತ ಪಡಿಸುತ್ತಾನೆ.

ಗಂಡಗಿಂತ ಮುನ್ನII ಹೆಂಡತಿ ಹುಟ್ಟಿ

ಗಂಡಗಿಂತ IIಕಿರಿಯಳಾದಳು ಆ ಹೆಂಡತಿII

ಒಡಹುಟ್ಟಿದವ ಳಾದಳೆಂಬುದII ಕೇಳಿ

ಆ ಗಂಡನ ಸಂಗವ IIಮಾಡಿದಡೆ ತಾಯಿ

ಇಬ್ಬರಿಗೊಂದು ಮಗುII ಹುಟ್ಟಿತ್ತಲ್ಲಾ

ಆ ಹುಟ್ಟಿದ ಮಗುII ತಾಯಿ ಮುದ್ದಾಡಿಸಿದಡೆ

ತಾಯಿ ತಕ್ಕೈಸಿದ್ದೇನು ಹೇಳಾII ತಾ ಯೆದ್ದು

ಪತಿ ಭಕ್ತಿಯ ಮಾಡಿತ್ತ ಕಂಡುII ಗುಹೇಶ್ವರ

ಲಿಂಗಕ್ಕೆ ಭಕ್ತಿ ಪರಿಣಾಮವಾಯಿತ್ತು. ಗುರುವೇ ಪತಿ ಶಿಷ್ಯನೇ ಸತಿಯಾಗಿ ಗುರು ವಿ ಗಿಂತ ಮೊದಲೇ ಶಿಷ್ಯನಿಗೆ ಆಧ್ಯಾತ್ಮ ಪಯಣ ದಲ್ಲಿ ಲಿಂಗವೆಂಬ ಶಿಶು ಹುಟ್ಟುತ್ತದೆ. ಲಿಂಗವೆಂಬ ಜ್ಞಾನ ಶಕ್ತಿಯನ್ನು ತಾಯಿ ಆಲಂಗಿಸಿಕೊಂಡು. ಭಕ್ತಿಯಲ್ಲಿ ಗುರುವು ಶಿಷ್ಯನಿಗೆ ತಾಯಿಯಾಗಿ ಸತಿಪತಿ ಸ್ವರೂಪದ ಸಂಬಂಧದಲ್ಲಿ ತನ್ನ ಕಾಯವನ್ನೇ ಲಿಂಗ ಮಯವನ್ನಾಗಿ ಮಾಡಿ ಕೊಂಡನು.ಅಲ್ಲಮ ಸತಿ ಪತಿ ಭಾವದ ಸತ್ಯವನ್ನು ಕಥನಾತ್ಮಕವಾಗಿ ಹಂಚಿಕೊಳ್ಳುತ್ತಾನೆ.

ಮಾಯೆಯೆಂಬ ಮಹಾ ಪಾಶನದಲ್ಲಿ

ಶರಣರ ಸಂವೇಧನಾ ಶೀಲ ಪ್ರತಿಕ್ರಿಯೆ ಅಂದಿನ ಸಮಾಜದಲ್ಲಿ ಸ್ತ್ರೀಪರ ಪ್ರತಿಭಟನೆಯಾಗಿ ಮಾಯೆಯ ಮೂಲಕ ಪ್ರಕಟವಾಗುತ್ತದೆ.ಮಹಿಳೆಯ ಬದುಕಿನ ಅಸ್ವಸ್ಥತೆ,ಶೋಷಣೆಯ ಬದುಕು., ಶಿಕ್ಷಣ ಸೌಲಭ್ಯದ ಅಭಾವ, ಬಾಲ್ಯ ವಿವಾಹ ದಂತ ಕಟ್ಟುನಿಟ್ಟಿನ ಆಚರಣೆ, ಬಹುಪತ್ನಿತ್ವದ ಒತ್ತಡಗಳು ಕಾರಣವಾಗಿ ಸ್ತ್ರೀಯರ ಬದುಕು ಅಸಹನೀಯ ಯಾತನೆ ಗಳಿಂದ ಕೂಡಿತ್ತು.
” ವೇದಾಂತದಲ್ಲಿ ಸ್ತ್ರೀ ತತ್ವವು ಮಾಯೆಯಾಗಿ ಸ್ತ್ರೀಯನ್ನು ಹೊರಗಿಟ್ಟರು. ಸಾಂಖ್ಯದಲ್ಲಿ. ಸ್ತ್ರೀಯನ್ನು ಪ್ರಕೃತಿಗೆ ಹೋಲಿಸಿದರು. ತಂತ್ರದಲ್ಲಿ ಸ್ತ್ರೀಯನ್ನು ಶಕ್ತಿಯಾಗಿ ಪೂಜಿಸಲ್ಪಟ್ಟರು ಹೀಗಾಗಿ ಸಮಾಜದ ಸಾಂಸಾರಿಕ ಬದುಕಿನಲ್ಲಿ ಈ ಎಲ್ಲಾ ಆಪಾದನೆಗಳಿಂದ ಅಸ್ವಸ್ಥತೆ, ಅವಮಾನದ ನೋವುಗಳು ಕಾಡಲು ಪ್ರಾರಂಭಿಸಿತು. ಮಹಿಳೆ ಮಾಯೆ ಎಂಬ ಆಪಾದನೆ ಹೊತ್ತು ಮಾನಸಿಕವಾಗಿ ಕುಗ್ಗಿದ್ದನ್ನು ಕಂಡ ಶರಣರು ಅದನ್ನು ಬೇರುಸಮೇತ ಕಿತ್ತೆಸೆದರು. ಆಧ್ಯಾತ್ಮದ ಆತ್ಮತತ್ವ ನೆಲೆಯಲ್ಲಿ ಸ್ತ್ರೀ-ಪುರುಷ ಸಮಾನತೆಗೆ ಅವಕಾಶ ಕೊಟ್ಟರು. ಆತ್ಮದ ವ್ಯಾಖ್ಯಾನದಲ್ಲಿ ಸ್ತ್ರೀಯರಿಗೆ ಅಂಟಿದ ಮಾಯೆಯ ಆಪಾದನೆ ಯನ್ನು ನಿರಾಕರಿಸಿದರು.

ಜನಿತಕ್ಕೆ ತಾಯಾಗಿ IIಹೆತ್ತಳು ಮಾಯೆ

ಮೋಹಕ್ಕೆಮಗಳಾಗಿII ಹುಟ್ಟಿದಳು ಮಾಯೆ

ಕೂಟಕ್ಕೆ ಸ್ತ್ರೀಯಾಗಿ II ಕೂಡಿದಳು ಮಾಯೆ

ಇದಾವ ಪರಿಯಲ್ಲಿ ಕಾಣಿಸಿತು IIಮಾಯೆ ಈ

ಮಾಯೆಯ ಕಳೆವಡೆ II ಎನ್ನವಳಲ್ಲ ನೀವೇ

ಬಲ್ಲಿರಿ IIಕೂಡಲಸಂಗಮದೇವ .

ಲೌಕಿಕವಾಗಿ ನೋಡಿದಾಗ ತಾಯಿಯಾಗಿ ಪತ್ನಿ ಯಾಗಿ ಮಗಳಾಗಿ ಹೀಗೆ ಹಲವು ಪಾತ್ರಗಳಲ್ಲಿ ಪುರುಷನ ಬದುಕನ್ನು ಸಮಗ್ರವಾಗಿ ಸಾರ್ಥಕ ಗೊಳಿಸಿದ ಸ್ತ್ರೀಯನ್ನು ನಿರ್ಲಕ್ಷಿಸಿದ್ದರಿಂದ ಈ ಮಾತನ್ನು ಹೆಣ್ಣಿನ ಭಿನ್ನ ಪಾತ್ರಗಳನ್ನು ಪರಿಚಯಿಸುತ್ತಾರೆ. ಲೌಕಿಕದಲ್ಲಿ ಸಣ್ಣ ಪಾತ್ರಗಳೇ ಮಾಯೆಯನ್ನು ಬಿಂಬಿಸುವ ಸ್ತ್ರೀ ಶಕ್ತಿಯ ನ್ನಾಗಿಸುವ ಸಂಸಾರದಲ್ಲಿ ಮಮತೆ ಪ್ರೀತಿಯನ್ನು ತುಂಬಿಕೊಡುವ ಅಂತಃಕರಣದ ಪಾತ್ರಗಳು ಮಾಯೆ ಹೀಗಾಗಲು ಸಾಧ್ಯ ಎನ್ನುತ್ತಾನೆ ಅಣ್ಣ .ತಮ್ಮ ಆತ್ಮಾವಲೋಕನ ದಲ್ಲಿ ಸ್ತ್ರೀ ಮಾಯೆಯ ಬಗ್ಗೆ ವಿಷಾದವಿಲ್ಲ. ಅಣ್ಣನಿಗೆ ಪರಶಿವನ ಸೃಷ್ಟಿ-ಸ್ಥಿತಿ-ಲಯ ದ ರೂಪಾತ್ಮಕ ವಾದ ಲೀಲೆ. ಹೀಗಾಗಿ ಸ್ತ್ರೀಯರ ಬಗ್ಗೆ ಇರುವ ತಪ್ಪು ಕಲ್ಪನೆಗಳು ಸಾಮಾಜಿಕ ನಿಲುವುಗಳಾಗಿ ಬದಲಾದವು.

ಅಕ್ಕನ ಪ್ರಕಾರ ನೀವಿಕ್ಕದ ಮಾಯೆ ಕೊಲ್ಲು ತಿರ್ಪುದೋ ಎಂದು ಚೆನ್ನಮಲ್ಲಿಕಾರ್ಜುನನ್ನೇ ಪ್ರಶ್ನೆ ಮಾಡುತ್ತಾಳೆ. ಆಕೆಯ ಪ್ರಕಾರ ಮಾಯೆ ಶಿವನ ವಶದಲ್ಲಿದೆ. ಅದು ಸತ್ವ ರಜ ತಮ ಗುಣಗಳಿಂದ ಕೂಡಿದ್ದೆಂದು ಅವಳ ವಾದ. ಅಲ್ಲಮಪ್ರಭು ಹೇಳುವಂತೆ ಸರ್ವವೂ ಗುಹೇಶ್ವರನ ಮಾಯೆ., ” ಹೆಣ್ಣು ಹೊನ್ನು ಮಣ್ಣು ಮಾಯೆಯಲ್ಲ ಮನದ ಮುಂದಣ ಆಶೆಯೇ ಮಾಯೆ”… ಚೆನ್ನಬಸವಣ್ಣನ ಪ್ರಕಾರ ಮಾಯೆ ಸಂಸಾರದ ಸತ್ಯಕ್ಕೆ ಮೀರಿದ್ದು. ಲಿಂಗವಿದ್ದ ಶರೀರಿ ಯು ಮನ ಚಿತ್ತ ಬುದ್ಧಿ ಅಹಂಕಾರದ ಮಹಾ ಪಾಶನ ದಲ್ಲಿ ಅವನೆಂದಿಗೂ ಮಾಯೆಯನ್ನು ಮುಟ್ಟಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸುತ್ತಾನೆ. ಈ ಎಲ್ಲಾ ಅಂಶಗಳಿಗೆ ಶರಣರು ಸ್ಪಷ್ಟವಾದ ಉತ್ತರ ನೀಡಿದರು. ಭೌತಿಕವಾಗಿ ಸ್ತ್ರೀ ಶಕ್ತಿಯ ಸಂಗಮ, ತಾಯಿಯೇ ದೈವ ಗುರು ಪುರುಷರಿಗಿಂತ ಸ್ತ್ರೀ ಮಾನಸಿಕವಾಗಿ ಸದೃಡಳೆಂದು ಸ್ಪಷ್ಟಪಡಿಸಿದರು.

ಶರಣರ ಆಧ್ಯಾತ್ಮ ಪಥದ ನಿಯಮ ಕಾಯಕ

ಉತ್ತಮ ಜೀವನ ನಿರ್ವಹಣೆಗಾಗಿ ಸಂವೇಧಿಸುವ ವೃತ್ತಿಯೇ ಕಾಯಕವೆಂದು ಗುರುತಿಸಿ ಕೊಂಡಿದೆ. ಕಾಯಕ ವೆನ್ನುವ ಆದರ್ಶ ರೂಪಗಳು ಆಚರಣೆಯ ಸ್ವರೂಪಗಳಾಗುವಲ್ಲಿ ಸೋಮಾರಿತನ ಮೋಸ ವಾಗುವುದನ್ನು ಖಂಡಿಸಿದರು ಶರಣರು. ಕಾಯಕದ ಮಹತ್ವವನ್ನು ಒತ್ತಿ ಒತ್ತಿ ಹೇಳಿದ್ದರ ಉದ್ದೇಶ ಅಲ್ಲಿಯೇ ಇದ್ದ ಕಾಯಕವನ್ನು ಮಾಡಿ ಬದುಕುತ್ತಿದ್ದ ವಚನಕಾರರಿಗಲ್ಲ. ದೇವಸ್ಥಾನಗಳಲ್ಲಿ ಅಗ್ರಹಾರಗಳಲ್ಲಿ ಕುಳಿತು ಕಾಯಕವಿಲ್ಲದ ವಿದ್ಯೆಗೆ ಅರ್ಥವಾಗದ ಭಾಷೆಯಲ್ಲಿ ಕಲಿಸುತ್ತಿದ್ದವರಿಗೆ ಎಚ್ಚರಿಕೆಯದು. ದುಡಿದುಣ್ಣುವ ವರ್ಗದವರ ಪಾಲನ್ನು ಸೋಮಾರಿ ವರ್ಗ ಕಸಿದು ಕಿತ್ತುಕೊಳ್ಳುವ ಅಮಾನವೀಯತೆ ಅಂದು ನಡೆದಿತ್ತು. ಬಹುಶಃ ಅಸಂಗ್ರಹ ತತ್ವಕ್ಕೆ ಕಾಯಕ ದಾಸೋಹಕ್ಕೆ ಇಂತಹ ಘಟನೆಗಳು ಪ್ರೇರಕ ವಾಗಿರಬಹುದು.
ಕಾಯಕ ಶರಣರ ಆದರ್ಶ ಮತ್ತು ಆರ್ಥಿಕ ಆಂದೋಳನವಾಗಿತ್ತು. ಇಡೀ ಸಮಾಜ ಕಾರ್ಯಚಟುವಟಿಕೆಯಿಂದ ಕೂಡಿರ ಬೇಕೆನ್ನುವುದು ಶರಣರ ವಾದವಾಗಿತ್ತು. ದೇಶದ ಅರ್ಥವ್ಯವಸ್ಥೆಯನ್ನು ಭದ್ರವಾಗಿಸುವು ದರ ಜೊತೆಗೆ ಆಧ್ಯಾತ್ಮದ ಕಾಯಕ ಮತ್ತು ದಾಸೋಹಗಳೆಡೆ ತಿರುಗಿತು. ಲೋಕದ ಸಂಸಾರದಲ್ಲಿ ನಾನೊಬ್ಬನೇ ಎಂಬ ಭಾವನೆಯಿಂದ ದುಡಿಮೆಯ ಪ್ರತಿಫಲವನ್ನು ಸಮಾಜಕ್ಕೆ ಅರ್ಪಿಸಬೇಕು. ಇದನ್ನೇ ಬಸವಣ್ಣ ದಾಸೋಹ ವೆಂದು ಕರೆದನು. ಗುರುಲಿಂಗ ಜಂಗಮಕ್ಕರ್ಪಿಸುವ ತ್ರಿವಿಧ ದಾಸೋಹ ಆಧ್ಯಾತ್ಮದ ಅರ್ಪಣೆಯ ಅನುಸಂಧಾನ ವೆಂದು ಹೇಳಬಹುದು.

ಭವಿ ಬಿಜ್ಜಳನ ಗದ್ದುಗೆಯ IIಕೆಳಗೆ ಕುಳ್ಳಿರ್ದ

ಓಲೈಸಿಹನೆಂದು IIನುಡಿವರಯ್ಯ ಪ್ರಮಥರು

ಕೊಡುವೆನುತ್ತರವನವರಿಗೆ ಕೊಡ ಲೊಮ್ಮುವೆ

ಹೊಲೆಯರIIಮನೆಯ ಹೊಕ್ಕು ಸಲೆ

ಕೈಕೂಲಿಯ IIಮಾಡಿಯಾದರೆಯು ನಿಮ್ಮ

ನಿಲುವಿಂಗೆ ಕಂದಿವೆ ನಲ್ಲದೆ ಎನ್ನೊಡಲವಸರಕ್ಕೆ

ಕುದಿದೆನಾದೊಡೆ IIತಲೆದಂಡ ಕೂಡಲ

ಸಂಗಮದೇವ.

ಬಿಜ್ಜಳನ ರಾಜ್ಯದಲ್ಲಿ ತನ್ನ ಸೇವಾ ಕಾಯಕವನ್ನು ಒತ್ತಿ ಹೇಳುತ್ತಾನೆ ಅಣ್ಣ. ಮನೆ ಮನೆಗೆ ತಿರುಗಿ ಕೂಲಿಯನ್ನಾದರೂ ಮಾಡುತ್ತೇನೆ ಅದು ನನ್ನ ಒಡಲ ಅವಸರಕ್ಕಲ್ಲ .ಕೂಡಲ ಸಂಗಮದೇವರ ಒಡಲ ನಿಲುವಿಗೆ ಎನ್ನುವುದು. ದೇವಸಹಿತ ಭಕ್ತ ಮನೆಗೆ ಬಂದೊಡೆ ಕಾಯಕ ವಾವುದೆಂದು ಬಸಗೊಂಡೆ ನಾದಡೆ ನಿಮ್ಮ ಪುರಾತನರಾಣೆ.ತಲೆದಂಡ ತಲೆದಂಡ ಎನ್ನುವ ಬಸವಣ್ಣನ ಕಾಯಕವೆಂಬ ಸಂವೇದನೆ ಶರಣಧರ್ಮದ ವಿಶಿಷ್ಟ ಧಾರೆಯಾಗಿ ಪರಿಚಯವಾಗುತ್ತದೆ.

ಅಂಬಿಗರ ಚೌಡಯ್ಯನದು ವರ್ಣವ್ಯವಸ್ಥೆಯ ವಿರುದ್ಧ ಕೈಗೊಂಡ ಸ್ವಾಭಿಮಾನದ ಕಾಯಕವಾಗಿತ್ತು.

ಅಂಬಿಗ ಅಂಬಿಗ IIಎಂದು ಕುಂದು

ನುಡಿಯದಿರು iiನಂಬಿದರೆ ಒಂದೇ ಹುಟ್ಟಲಿ

ಕಡೆಯIIಹಾಯಿಸುವನಂಬಿಗರ ಚೌಡಯ್ಯ

ಕಾಯಕ ವೆನ್ನುವುದು ಶ್ರಮಿಕ ಧ್ವನಿಯ

ಆತ್ಮಾಭಿಮಾನದ ಕೆಲಸವಾಗಿತ್ತು.ಆತ್ಮ ಪ್ರತಿಷ್ಠೆ ಮಾತಾಗದೇ ಆತ್ಮಗೌರವದ ಅನಿವಾರ್ಯದ ಧ್ವನಿ. ಒಂದೇ ಹುಟ್ಟಲಿ ಎಂಬ ಪದವೇ ಶ್ಲೇಷಾರ್ಥವಾಗಿದೆ.ಕಾಯಕದ ಪರಿಣಿತಿ ಮತ್ತು ಅವನತ್ತ ಕ್ರಿಯಾತ್ಮಕವಾದರೂ ಹಸಿದ ಒಡಲಿನ ನೋವು ನೊಂದ ಪ್ರತಿಭಟನೆ ಯಾಗಿದೆ. ಆದರೆ ನಿಜವಾದ ಅರ್ಥದಲ್ಲಿ ಕಾಯಕ ಜೀವಿಗೆ ವರ್ಗ ವರ್ಣದ ಪ್ರಶ್ನೆಯಿಲ್ಲ ಎನ್ನುವುದೇ ಪ್ರಾಮಾಣಿಕ ಸತ್ಯವಾಗಿತ್ತು. ಅ ಸಂಗ್ರಹವನ್ನು ಸಹಿಸದ ದಿನದ ಕಾಯಕ ದಲ್ಲಿಯೇ ಕಾಯಕ ದಾಸೋಹ ಪ್ರಸಾದಗಳನ್ನು ರೂಢಿಸಿಕೊಂಡ ಶರಣರ ಬದುಕು ಸುಂಕ ವಿರೋಧಿ ನೆಲೆಯದ್ದಾಗಿತ್ತು. ಅತಿ ಸಂಗ್ರಹ ತೆರಿಗೆ ದಾರಿಯೆಂದು ಇದೇ ಇರದಿದ್ದರೆ ತೆರಿಗೆಯ ಕಿರಿಕಿರಿ ಇರುವುದಿಲ್ಲ. ಶರಣರ ಈ ತತ್ವ ಪ್ರಭುತ್ವ ಮತ್ತು ಅದರ ನೆರಳಾದ ಶ್ರೀಮಂತಿಕೆ ಆಡಂಬರತೆ ವ್ಯಕ್ತಿ ಪ್ರತಿಸ್ತೆ ಸಮಾನತೆಯ ವಿರೋಧವಾಗಿ ರೂಪ ಪಡೆಯಿತು. ಪ್ರಮುಖ ಗೌರವ ತಗ್ಗಿ ಉಪ ಭೋಗಕ್ಕೆ ಸಿಗುವ ರಾಜ ಮರ್ಯಾದೆಯನ್ನು ನಿರ್ಭೀತಿಯಿಂದ ವಿರೋಧಿಸಿದರು. ಶರಣರ ಸ್ತ್ರೀಸಂವೇದನೆಗಳು ಇಂದು ಜಾಗತಿಕ ಮಟ್ಟದಲ್ಲಿ ವಿಮರ್ಶೆ ಯಾಗುತ್ತಿವೆ.

12ನೇ ಶತಮಾನದ ಶರಣ ಸಂವೇದನೆಯ ಮರು ಆವಿಷ್ಕಾರದ ತತ್ವಜ್ಞಾನಿ, ಲಿಂಗಾಯಿತ ಧರ್ಮ ಸ್ಥಾಪನೆಯ ಜೊತೆಗೆ ನವ ಕಲ್ಯಾಣ ಕಟ್ಟಿದ, ಮಾನವತಾವಾದಿ ಶಕ್ತಿ ಸಂಚಾಲಕ ಬಸವಣ್ಣ ನಾಗಿದ್ದಾನೆ. ಕ್ರಿಸ್ತಶಕ 2010 ಅಥವಾ2011ರ ಆಡಳಿತದ ಸರಕಾರ ಶೇಕಡಾ 33%. ಮಹಿಳಾ ಮೀಸ ಲಾತಿಯನ್ನು ಅಂದಿನ ಸರಕಾರ ಕೊಟ್ಟಿದ್ದನ್ನು ಸ್ಮರಿಸಿಕೊಳ್ಳಬಹುದು. ಈ ಮೀಸಲಾತಿ ಸ್ತ್ರೀಯರಿಗೆ ಅಲ್ಪ ಶಿಕ್ಷಣ ಪಡೆದವರಿಗೆ ಜಾತೀಯತೆಯ ಆಧಾರದ ಮೇಲೆ ಮೀಸಲಾತಿ ಬಂದಿರಬಹುದು. ಆದರೆ 12ನೇ ಶತಮಾನದ ಶರಣರು ಮಹಿಳೆಯರಿಗೆ ಶೇಕಡ 100%. ಮೀಸಲಾತಿಯನ್ನು ಕಲ್ಪಿಸಿಕೊಟ್ಟರು ಕೊಟ್ಟರು. ವಚನಕಾರರು ನಮಗೆ ಕೊಟ್ಟಿರುವಂತ ಸಮಾನತೆಯನ್ನು ಸ್ವೇಚ್ಛಾಚಾರಕ್ಕೆ ಬಳಸಿಕೊಳ್ಳದೆ ಗೌರವಿಸಬೇಕು. ತಮ್ಮ ವಚನಗಳಲ್ಲಿ ಹೇಳಿದ ನೀತಿ ಸಂಹಿತೆ ಯನ್ನು ನಮಗೆ ಬಿಟ್ಟು ಹೋಗಿದ್ದಾರೆ. ಶರಣರ ತಾತ್ವಿಕ ಸೃಜನಶೀಲ ಸಂವೇದನೆಗಳನ್ನು ನಾವು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಶರಣರ ಸಂವೇಧನಾ ಕ್ರಾಂತಿಯನ್ನು ಮಹಿಳಾ ಶಕ್ತಿಯನ್ನುಪುನಃ ಕಟ್ಟ ಬೇಕಾಗಿದೆ.

ಡಾ.ಸರ್ವಮಂಗಳ ಸಕ್ರಿ.
ಕನ್ನಡ ಉಪನ್ಯಾಸಕರು
ರಾಯಚೂರು.

Don`t copy text!