ಗಜಲ್

ಆತ್ಮೀಯರೇ,

ದಿನಾಂಕ 27-4-2021 ಸೋಮವಾರ ಅಕ್ಕಮಹಾದೇವಿ ಜಯಂತಿಯ ಅಂಗವಾಗಿ e-ಸುದ್ದಿ ಗೆ ಸಾಕಷ್ಟು ಜನ ಕವಿತೆ, ಲೇಖನ, ವಚನ ವಿಶ್ಲೇಷಣೆ ಕಳಿಸಿದ್ದರು ಎಲ್ಲವನ್ನೂ ಪ್ರಕಟಿಸಲು ಸಾಧ್ಯವಾಗದಿರುವದಕ್ಕಾಗಿ ವಿಷಾದಿಸುವೆ.

ಪತ್ರಿಕೆ ಮೇಲೆ ನೀವಿಟ್ಟಿರುವ ಅಭಿಮಾನ ದೊಡ್ಡದು. ಹಾಗಾಗಿ ಉತ್ತಮವಾದ ಕವಿತೆ, ವಚನ ವಿಶ್ಲೇಷಣೆಯನ್ನು ಇಂದು ಬಳಸಿಕೊಳ್ಳಲಾಗುವುದು.  ಬರಹಗಾರರಿಗೆ ಉತ್ತಮ ವೇದಿಕೆ ಒದಗಿಸುವ ನಮ್ಮ ಪ್ರಯತ್ನಕ್ಕೆ ಕೈ ಜೋಡಿಸಿರಿ. ಎಲ್ಲರೂ ಓದುವಂತೆ ಮಾಡಲು ನಿಮ್ಮ ಸ್ನೇಹಿತರು, ಬಂಧು-ಬಳಗದವರಿಗೆ e-ಸುದ್ದಿ ಪರಿಚಯಿಸಿರಿ. ವಂದನೆಗಳು.

-ಸಂಪಾದಕ

————————————–

ಗಜಲ್
ಮಾಯಾ ಮೋಹದ ಬಟ್ಟೆಯನು ಕಳಚಿ ಎಸೆದವಳು
ವೈರಾಗ್ಯದ ಬಟ್ಟೆಯನು ಅರಸುತ್ತಾ ಹೊರಟವಳು

ಅರಮನೆಯ ವೈಭವದ ಸುಖ ಧಿಕ್ಕರಿಸಿದವಳು
ಭವದ ಸುಳಿಗೆ ಸಿಲುಕದೆ ಬಯಲಲಿ ಒಂದಾದವಳು

ಹಸಿವು ತೃಷೆ ಬಾಧೆಗಳನು ಕಪೂ೯ರದಂತೆ ದಹಿಸಿದವಳು
ಅಂಗ ಚೇಷ್ಟೆ ಕಾಮ ಕ್ರೋಧ ಗಳ ಕವಚ ಕಳಚಿದವಳು

ಜಗ ನಿಮಿ೯ಸಿದ ಮೌಢ್ಯ ಬೇಲಿಯನು ದಾಟಿದವಳು
ಸ್ತ್ರೀ ಸಂಕುಲಕೆ ಆತ್ಮಸ್ಥೈರ್ಯ ತುಂಬಿದವಳು

ಶರಣ ಸಮೂಹದಲ್ಲಿ ಅಗ್ರ ರತ್ನವಾಗಿ ಬೆಳಗಿದವಳು
ನಿರಾಕಾರನ ಪಡೆಯಲು ಸರ್ವವನು ತ್ಯಜಿಸಿದವಳು

ಅಲ್ಲಮನ ಪ್ರಶ್ನೆಗೆ ಉತ್ತರಿಸಿ ಲೋಕ ಗೆದ್ದವಳು
ಸಾವಿಲ್ಲದ ಕೇಡಿಲ್ಲದ ಚೆಲುವನನು ಮೆಚ್ಚಿದವಳು

ಬೆಟ್ಟ ಹಳ್ಳ ಕಣವೆ ಗಳ ದಾಟುತ್ತಾ ಮುನ್ನಡೆದವಳು
ಬಯಲ”ಪ್ರಭೆ”ಯ ಹುಡುಕುತ್ತಾ ಕದಳಿಗೆ ನಡೆದವಳು.

ಪ್ರಭಾವತಿ ಎಸ್ ದೇಸಾಯಿ‍
ವಿಜಯಪುರ
೮೪೦೮೮೫೪೧೦೮

Don`t copy text!