ಫೇಕ್ ರಿಸಲ್ಟ್‍ಶೀಟ್ ವೈರಲ್, ಬಿಜೆಪಿ ಪ್ರತಿ ಭೂತನಲ್ಲೂ ಹೆಚ್ಚಳ

e-ಸುದ್ದಿ, ಮಸ್ಕಿ
ಮಸ್ಕಿ ಉಪಚುನಾವಣೆಯ ಫಲಿತಾಂಶ ಇನ್ನು ಹೊರ ಬೀಳುವ ಮುನ್ನವೇ ತಾಲೂಕಿನಲ್ಲಿ ನಕಲಿ ಫಲಿತಾಂಶವುಳ್ಳ ಪಿಡಿಎಫ್ ದಾಖಲೆಯೊಂದು ವೈರಲ್ ಆಗಿದೆ.
ವಿಧಾನ ಸಭೆ ಕ್ಷೇತ್ರಕ್ಕೆ ಏ.17ರಂದು ಮತದಾನ ನಡೆದಿತ್ತು. ಇದರ ಫಲಿತಾಂಶ ಪ್ರಕಟಿಸಲು ಮೇ.2ರಂದು ಮತ ಎಣಿಕೆ ರಾಯಚೂರಿನಲ್ಲಿ ನಿಗದಿ ಮಾಡಲಾಗಿದೆ. ಆದರೆ ಸ್ಥಳೀಯವಾಗಿ ಗುಂಪೊಂದು ಫಲಿತಾಂಶ ಮಾದರಿಯ ಶೀಟವೊಂದನ್ನು ಸಿದ್ದಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದೆ. ಪಿಡಿಎಫ್ ಮಾದರಿಯಲ್ಲಿರುವ ಈ ಫಲಿತಾಂಶ ಪಟ್ಟಿ ಒಟ್ಟು 6ಪೇಜ್‍ಗಳಲ್ಲಿದೆ. 2021ರ ಮಸ್ಕಿ ವಿಧಾನ ಸಭೆ ಉಪಚುನಾವಣೆಯ ಫಲಿತಾಂಶ ಎಂದು ನಮೂದು ಮಾಡಲಾಗಿದ್ದು, ಒಟ್ಟು ಮತರದಾರರ ಸಂಖ್ಯೆ, ಮತದಾನವಾದ ಅಂಕಿ-ಸಂಖ್ಯೆಯನ್ನು ದಾಖಲು ಮಾಡಿದ್ದು, ಒಟ್ಟು 231 ಮತಗಟ್ಟೆವಾರು ಬಿಜೆಪಿಗೆ ಇಷ್ಟು, ಕಾಂಗ್ರೆಸ್‍ಗೆ ಇಂತಿಷ್ಟು ಮತಗಳು ದಾಖಲಾಗಿವೆ ಎಂದು ನಮೂದು ಮಾಡಿ ಒಟ್ಟು ಬಿಜೆಪಿ ಅಭ್ಯರ್ಥಿಗೆ 75,295 ಮತಗಳು, ಕಾಂಗ್ರೆಸ್ ಅಭ್ಯರ್ಥಿಗೆ 70,163 ಮತಗಳು ಎನ್ನುವ ಮಾಹಿತಿಯುಳ್ಳ ನಕಲಿ ಫಲಿತಾಂಶ ಪಟ್ಟಿಯನ್ನು ಹರಿಬಿಡಲಾಗಿದೆ. ಇದು ತಾಲೂಕಿನ ಎಲ್ಲ ಕಡೆಗೂ ತೀವ್ರ ವೈರಲ್ ಆಗಿದ್ದು, ಕ್ಷೇತ್ರಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಆದರೆ ಜಿಲ್ಲಾ, ತಾಲೂಕು ಆಡಳಿತ ಇದನ್ನು ತಳ್ಳಿ ಹಾಕಿವೆ. ಯಾರೋ ಹಳೆಯದನ್ನು ನಕಲು ಮಾಡಿ ಈ ರೀತಿ ಹರಿಬಿಟ್ಟಿದ್ಧಾರೆ ಇದೆಲ್ಲ ಫೇಕ್ ಎಂದು ತಹಸೀಲ್ದಾರ್ ಮಹೇಂದ್ರಕುಮಾರ್ ತಿಳಿಸಿದ್ದಾರೆ.

 

Don`t copy text!