ಸಮಾಧಾನ

ಸಮಾಧಾನ

ಕನಸು ನನ್ನದು
ಅದನು ಸಿಂಗರಿಸಿ ಸೊಗಸು ತಂದ
ಶೃಂಗಾರದ
ಚೆಲುವ ಹೂ ನಗು ನಿನ್ನದು ||

ನಿನ್ನ ಕಣ್ಮಿಂಚು
ಕೋಲ್ಮಿಂಚಿಗೂ ಮಿಗಿಲಾಗಿದೆಯಲ್ಲ.
ಸೋಜಿಗವೇನಿದೆ ? ನಿನ್ನ ನುಣುಪು ಕೆನ್ನೆಯ
ಕಂಡು ಹಿಮದ ಮುದ್ದೆ ನಾಚಿದೆಯಲ್ಲ ? ||

ನಿನ್ನ ನಗುವಿಗಿದೆ ಬಿಡು
ಕಪ್ಪು ನಕ್ಷತ್ರದ ಎಳೆತ
ನಾನಲ್ಲ, ಬೆಳಕೂ ಬಾರದು ಅದರಾಚೆ
ಅಷ್ಡಿದೆ ಅದರ ಸೆಳೆತ ||

ನಿನ್ನ ತುಟಿಗಳ ಮುಂದೆ
ತೊಂಡೆ ಹಣ್ಣೂ ಸಪ್ಪೆ ಸಪ್ಪೆ
ಕನಸಿನಲೂ ಬಿಡಲಾಗದು ನಿನ್ನ
ಚೆಲುವೇ ಹಾಗಿದೆ ನನ್ನದು ತಪ್ಪೇ? ||

ಕೂಗಿ ಕರೆದರೂ ಮೌನ ಮೆರೆದರೂ
ನಿನ್ನ ನೆನಪಿದೆ ಬೆಚ್ಚಗೆ
ನೀನು ಒಲಿದರೂ ಮುನಿದು ಮರೆತರೂ
ನನ್ನೆದೆಬಡಿತ ಕೇಳು ಮೆತ್ತಗೆ ||

ಎನೇ ಹೇಳು ನಲ್ಲೆ
ನೀನಿರುವೆ ನನ್ನೆದೆಯಲ್ಲೆ
ಬಿಡು ಬಿಂಕ ಬಿಗುಮಾನ
ಕನಸಿಗಾದರೂ ಬಾರೆ ನನಗದೇ ಸಮಾಧಾನ ||

✍️ ಆದಪ್ಪ ಹೆಂಬಾ ಮಸ್ಕಿ

Don`t copy text!