ಕೊಳದ ಹಂಸವೆ ಕೇಳು ನನ್ನ ಕಥೆಯಾ

ಕೊಳದ ಹಂಸವೆ ಕೇಳು ನನ್ನ ಕಥೆಯಾ

ಕೊಳದ ಹಂಸವೆ ಕೇಳು ನನ್ನ ಕಥೆಯಾ
ಮನದ ನೋವಿನ ವ್ಯಥೆಯಾ.

ಅರಮನೆಯ ಅಂತಃಪುರದಿ ಬಂಧಿ ನಾನು
ಮನದ ನೋವ ಕೇಳಲು ಬಂದೆ ನೀನು.

ಮನದ ತಳಮಳವ ತಿಳಿಸಲೆಂತು
ಮನದ ಭಾರವನು ಮರೆಯಲೆಂತು.

ನಿನ್ನಂತೆ ನನಗೂ ಮನದ ನೋವ ಅರುಹಲು ಮಾತು ಬರುತ್ತಿಲ್ಲ.
ಮನದ ದುಗುಡ ದೂರಗೋಳಿಸಲು
ಇನಿಯ ಬರುತ್ತಿಲ್ಲ.

ಇನಿಯನಾ ಸನಿಹ ಬಯಸಿದೆ ಮನವು
ಹೇಗೆ ಅರುಹಲಿ ಹೇಳು ವಿರಹದಾ ಒಲವು

ಸವಿತಾ ‌ಮಾಟೂರು ಇಲಕಲ್ಲ

Don`t copy text!