e-ಸುದ್ದಿ, ಮಸ್ಕಿ
ಮೇ.2 ಭಾನುವಾರದÀಂದು ರಾಯಚೂರಿನ ಎಸ್.ಆರ್.ಪಿ.ಎಸ್ ಕಾಲೇಜಿನಲ್ಲಿ ನಡೆಯುವ ಮಸ್ಕಿ ಕ್ಷೇತ್ರದ ಉಪಚುನಾವಣೆಯ ಫಲಿತಾಂಶದ ಮತ ಏಣಿಕೆ ಕೇಂದ್ರಕ್ಕೆ ಹೋಗುವ ಏಜಂಟರುಗಳಿಗೆ ಶುಕ್ರವಾರ ಎರಡನೇ ಬಾರಿಗೆ ಕೊವಿಡ್ ಟೇಸ್ಟ್ ಮಾಡಲಾಯಿತು.
ಪಟ್ಟಣದ ಮುದಗಲ್ ರಸ್ತೆಯಲ್ಲಿರುವ ದೇವನಾಂಪ್ರಿಯ ಅಶೋಕ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಅಭ್ಯರ್ಥಿಗಳು ಮತ್ತು ಏಜಂಟಿರು ಸೇರಿದಂತೆ ಒಟ್ಟು 118 ಜನರಿಗೆ ಕೊವಿಡ್ ಟೇಸ್ಟ್ ನಡೆಸಲಾಯಿತು.
ಮತ ಏಣಿಕೆ ದಿನದ 48 ಗಂಟೆ ಮುಂಚಿತವಾಗಿ ಕೊವಿಡ್ ಟೇಸ್ಟ್ ಮಾಡುವುದು ಕಡ್ಡಾಯವಾಗಿರುವದರಿಂದ ಈಗಾಗಲೇ ಕೊವಿಡ್ ಟೇಸ್ಟ್ ಮಾಡಿಸಿಕೊಂಡಿರುವವರಿಗೆ ಮತ್ತೊಮ್ಮೆ ಟೇಸ್ಟ್ ಮಾಡುವುದಾಗಿ ಡಾ.ಮೌನೇಶ ತಿಳಿಸಿದರು.
ಕೊವಿಡ್ ಟೇಸ್ಟ್ ಮಾಡಿಸಿಕೊಂಡು ನೆಗಟಿವ್ ವರದಿ ಬಂದವರಿಗೆ ಮಾತ್ರ ಮತ ಏಣಿಕೆ ಎಜಂಟgಗಿ ಹೋಗಲು ಅವಕಾಶವಿದೆ. ಮಾಜಿ ಶಾಸಕ ಬಿಜೆಪಿ ಅಭೈರ್ಥಿ ಪ್ರತಾಪಗೌಡ ಪಾಟೀಲ ಕೊವಿಡ್ ಟೇಸ್ಟ್ ಮಾಡಿಸಿಕೊಂಡರು.