ಲಸಿಕೆಗಾಗಿ ಸರ್ಕಾರಿ ಆಸ್ಪತ್ರೆಗಳ ಮುಂದೆ ಸಾಲುಗಟ್ಟಿದ ಜನ


ಮಸ್ಕಿಯಲ್ಲಿ ಕೊವಿಡ್ ಲಸಿಕೆ ಅಭಾವ
ಲಸಿಕೆಗಾಗಿ ಸರ್ಕಾರಿ ಆಸ್ಪತ್ರೆಗಳ ಮುಂದೆ ಸಾಲುಗಟ್ಟಿದ ಜನ

e-ಸುದ್ದಿ ಮಸ್ಕಿ

ಕೋವ್ಯಾಕ್ಸಿನ್ ಹಾಗೂ ಕೋ ಶಿಲ್ಡ್ ಲಸಿಕೆ ನಿಗದಿತ ಪ್ರಮಾಣದಲ್ಲಿ ಪೂರೈಕೆಯಾಗದ ಕಾರಣ ಪ್ರಥಮ ಹಾಗೂ ದ್ವಿತೀಯ ಹಂತದ ಲಸಿಕೆ ಪಡೆಯಲು ಮಸ್ಕಿ ಸೇರಿದಂತೆ ತಾಲ್ಲೂಕಿನ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಪರದಾಡುತ್ತಿರುವುದು ದೃಶ್ಯ ಕಳೆದ ಒಂದು ವಾರದಿಂದ ಸಾಮಾನ್ಯವಾಗಿದೆ.
ಕರೊನಾ ನಿಯಂತ್ರಣಕ್ಕೆ ಮೊದಲ ಹಂತದಲ್ಲಿ ಕೋ ವ್ಯಾಕ್ಸಿನ್ ಲಸಿಕೆ ನೀಡಲಾಗಿದ್ದು, ಎರಡನೇ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳಲು ನಿತ್ಯ ನೂರಾರು ಜನರು ವಿವಿಧ ಆಸ್ಪತ್ರೆ ಗಳಿಗೆ ಅಲೆದಾಡುತ್ತಿದ್ದಾರೆ‌. ಯಾವ ಆಸ್ಪತ್ರೆಗೆ ಹೋಗಿ ಕೇಳಿದರು ಇನ್ನೂ ಕೋ ವ್ಯಾಕ್ಸಿನ್ ಬಂದಿಲ್ಲ. ಕೋ ಶಿಲ್ಡ್ ಮಾತ್ರ ಇದ್ದು ಅದನ್ನು ಮಾತ್ರ ಕೊಡಲಾಗುತ್ತಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸುತ್ತಾರೆ.
ಈಗಾಗಲೇ ಕೋ ವಾಕ್ಸಿನ್ ಪಡೆದವರು ಸಮಯಕ್ಕೆ ಸರಿಯಾಗಿ ಎರಡನೆಯ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳದಿದ್ದರೆ ಮೊದಲ ಲಸಿಕೆ ಹಾಕಿಸಿಕೊಂಡಿದ್ದಕ್ಕೆ ಯಾವುದೇ ಲಾಭ ಇಲ್ಲಾ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕೊ ಶೀಲ್ಡ್ ಲಸಿಕೆ ಸಹ ತಾಲ್ಲೂಕಿನ ಆಸ್ಪತ್ರೆಗೆ ಸಮರ್ಪಕವಾಗಿ ಪೂರೈಕೆಯಾಗದ ಕಾರಣ ಪ್ರತಿನಿತ್ಯ ಲಸಿಕೆ ಹಾಕಿಸಿಕೊಳ್ಳಲು ಬರುವ ಜನರು ಲಸಿಕೆ ಸಿಗದೆ ವಾಪಾಸು ಹೋಗುತ್ತಿದ್ದಾರೆ.
ಸರ್ಕಾರ ಕೂಡಲೇ ಕೋ ವ್ಯಾಕ್ಸಿನ್ ಹಾಗೂ ಕೋ ಶಿಲ್ಡ್ ಲಸಿಕೆ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ನಾಗರಿಕ‌ ಶಿವಶಂಕ್ರಪ್ಪ ಹಳ್ಳಿ ಒತ್ತಾಯಿಸಿದ್ದಾರೆ.

 

Don`t copy text!