ಕಲ್ಕತ್ ಯುವ ಮೊರ್ಚಾಪ್ರತಿಭಟನೆ ಅಡ್ಡಿ, ಮಸ್ಕಿ ಯುವ ಮೊರ್ಚಾ ಖಂಡನೆ

ಮಸ್ಕಿ; ಕಲ್ಕತ್‍ದಲ್ಲಿ ಬಿಜೆಪಿ ಯುವ ಮೊರ್ಚಾ ನಾಯಕರು ನಡೆಸುತ್ತಿದ್ದ ‘ನಬನ್ನಾ ಚಲೋ’ ರ್ಯಾಲಿ ವೇಳೆ ಟಿ.ಎಂ.ಸಿ ಕಾರ್ಯಕರ್ತರು ಹಿಂಸಾಚಾರ ನಡೆಸಿರುವದು ಖಂಡನೀಯ ಎಂದು ಮಸ್ಕಿ ತಾಲೂಕು ಬಿಜೆಪಿ ಯುವ ಮೊರ್ಚಾ ಅಧ್ಯಕ್ಷ ನಿರುಪಾದಿ ಬಳಗಾನೂರು ಖಂಡಿಸಿದರು.
ಪಟ್ಟಣದ ಕನಕವೃತ್ತದ ಬಳಿ ಯುವ ಮೊಚಾ ಕಾರ್ಯಕರ್ತರು ಗುರುವಾರ ಸಂಜೆ ಪ್ರತಿಭಟನೆ ಮಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸುವದು ಸಂವಿಧಾನ ಬದ್ದ ಹಕ್ಕು. ಅದನ್ನು ಕಸಿದುಕೊಳ್ಳುವ ಬೇದರಿಕೆಯನ್ನು ಮಮತ ಬ್ಯಾನರ್ಜಿ ಸರ್ಕಾರ ಮಾಡುತ್ತಿದೆ ಎಂದು ನಿರುಪಾದಿ ಬಳಗಾನೂರು ಹೇಳಿದರು.

ಉತ್ತಮ ಶಿಕ್ಷಣಕ್ಕಾಗಿ ಉಮಾ ಮಹೇಶ್ವರಿ ಕಾಲೇಜು ,ಲಿಂಗಸುಗುರು

ಯುವಮೊರ್ಚಾ ಕಾಂiÀರ್iಕರ್ತರು ಮಮತ ಬ್ಯಾನರ್ಜಿ ವಿರುದ್ಧ ಘೋಷಣೆ ಕೂಗಿದರು.
ಪುರಸಭೆ ಸದಸ್ಯರಾದ ಕಿರಣಕುಮಾರ ಸಾನಬಾಳ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶರಣಯ್ಯ ಸೊಪ್ಪಿಮಠ, ಯುವಮೊರ್ಚಾದ ರವಿಕುಮಾರ, ಶೇಖರ್‍ಗೌಡ, ಮಲ್ಲಿಕಾರ್ಜುನ ಬೈಲಗುಡ್, ಅಮರೇಶ ಮಾಟೂರು, ಮಲ್ಲಿಕಾರ್ಜುನ ಅಚ್ಛ, ಯಮನೂರು ಬುದ್ದಿನ್ನಿ, ಗಂಗಾಧರ ಸ್ವಾಮಿ, ಹನುಮನಗೌಡ, ರಾಹುಲ್ ಹಜಾರಿ ಹಾಗೂ ಇತರರು ಭಾಗವಹಿಸಿದ್ದರು.

Don`t copy text!