ಛಾಯಚಿತ್ರಕಾರರಿಂದ ಬೆಂಗಳೂರು ಚಲೋ ಪ್ರತಿಭಟನೆ

ಮಸ್ಕಿ : ರಾಜ್ಯ ಮತ್ತು ಕೇಂದ್ರ ಸರ್ಕಾರ ಛಾಯಚಿತ್ರಗಾರರನ್ನು ನಿರ್ಲಕ್ಷಿಸಿದೆ ಎಂದು ಮಸ್ಕಿ ತಾಲೂಕು ದೇವನಾಂಪ್ರಿಯ ಛಾಯಚಿತ್ರಗ್ರಾಹಕರ ಸಂಘದ ಪದಾಧಿಕಾರಿಗಳು ಗುರುವಾರ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ಮಾಡಿ ತಹಸೀಲ್ದಾರ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಶ್ರೀ ಉಮಾಮಹೇಶ್ವರಿ ಪದವಿ ಹಾಗೂ ಪದವಿ ಪೂರ್ವ ಕಾಲೇಜು ಲಿಂಗಸೂರು. ಪೊನ್ ನಂ9036095825.
ಶ್ರೀ ಉಮಾಮಹೇಶ್ವರಿ ಪದವಿ ಹಾಗೂ ಪದವಿ ಪೂರ್ವ ಕಾಲೇಜು ಲಿಂಗಸೂರು. ಪೊನ್ ನಂ.9036095825

ಛಾಯಚಿತ್ರಗ್ರಾಹಕರ ಸಂಘದ ಅಧ್ಯಕ್ಷ ಉದಯಕುಮಾರ ಪತ್ತಾರ ಮಾತನಾಡಿ ಕಳೆದ ಆರು ತಿಂಗಳಿನಿಂದ ಛಾಯಚಿತ್ರಗಾರರು ಕರೊನಾ ಹಾವಳಿಯಿಂದ ಕೆಲಸ ಇಲ್ಲದೆ ಮನೆಯಲ್ಲಿ ಖಾಲಿ ಕುಳಿತುಕೊಂಡಿದ್ದೇವೆ. ಸರ್ಕಾರ ಬೇರೆ ಬೇರೆ ವೃತ್ತಿಯಲ್ಲಿ ಇರುವವರಿಗೆ ಅನೇಕ ರೀತಿಯಲ್ಲಿ ಸಹಾಯ ಸಹಕಾರ ನೀಡಿದೆ. ಆದರೆ ಛಾಯಚಿತ್ರಗ್ರಾಹಕರಿಗೆ ಯಾವುದೇ ಸವಲತ್ತು ನೀಡಿಲ್ಲ ಎಂದು ಆರೋಪಿಸಿದರು.
ಈಗಾಗಲೇ ಸರ್ಕಾರಕ್ಕೆ ಅನೇಕ ಬಾರಿ ಮನವಿ ಪತ್ರ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ರಾಜ್ಯದಲ್ಲಿರುವ ಎಲ್ಲಾ ಛಾಯಚಿತ್ರಗ್ರಾಹಕರು ಅಕ್ಟೋಬರ 31 ರಂದು ಬೆಂಗಳೂರಲ್ಲಿ ಪ್ರತಿಭಟನೆ ಮಾಡಲಾಗುವದು ಎಂದು ಉದಯಕುಮಾರ ಪತ್ತಾರ ಹೇಳಿದರು.
ಅಮರೇಶ ನಾಗಡದಿನ್ನಿ, ಸತೀಶ ಹಿರೇಮಠ, ಪಂಪಣ್ಣ ಹಂಪನಾಳ, ಶಿವು ಹಿರೇಮಠ, ಮಲ್ಲಿಕಾರ್ಜುನ, ಅಮರೇಶ ನಾಯಕ, ಮಲ್ಲಿಕಾರ್ಜುನ ವೀರಾಪುರ, ಸಿದ್ರಾಮ ಹಾಗೂ ಇತರರು ಭಾಗವಹಿಸಿದ್ದರು.

ವಧು- ವರರ ಮಾಹಿತಿಗಾಗಿ ಸಂಪರ್ಕಿಸಿ-8792306857

Don`t copy text!