ಮಸ್ಕಿ : ಬಹುದಿನಗಳ ನಂತರ ಸರ್ಕಾರ ಪುರಸಭೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು ಅಧ್ಯಕ್ಷ ಸ್ಥಾನ ಎಸ್.ಟಿ ಗೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಿದೆ.
ಒಟ್ಟು ೨೩ ಸದಸ್ಯರಿರುವ ಪುರಸಭೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಪುರಸಭೆಗೆ ನಡೆದ ಚುನಾವಣೆಲ್ಲಿ ೧೩ ಜನ ಬಿಜೆಪಿಯಿಂದ ೮ ಜನ ಕಾಂಗ್ರೆಸ್ ನಿಂದ ೩ ಜನ ಪಕ್ಷೇತರರಾಗಿ ಆಯ್ಕೆ ಯಾಗಿದ್ದರು.
ಕಾಂಗ್ರೆಸ್ ನಿಂದ ಶಾಸಕರಾಗಿ ಆಯ್ಕೆ ಆಗಿದ್ದ ಪ್ರತಾಪಗೌಡ ಪಾಟೀಲ ಬಿಜೆಪಿ ಸೇರ್ಪಡೆಯಾದ ನಂತರ ೮ ಜನ ಪುರಸಭೆ ಸದಸ್ಯರು ಬಿಜೆಪಿ ಸೇರುವ ಮೂಲಕ ಕಾಂಗ್ರೆಸ್ ತನ್ನ ಅಸ್ತಿತ್ವವ ಕಳೆದುಕೊಂಡಿದೆ.
ಅಧ್ಯಕ್ಷ ಸ್ಥಾನಕ್ಕೆ ರವಿಗೌಡ ಪಾಟೀಲ ಮತ್ತು ದೇವಣ್ಣ ನಾಯಕ ನಡುವೆ ಪೈಪೋಟಿ ಏರ್ಪಟ್ಟಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಕವಿತಾ ಅಮರೇಶ ಮಾಟೂರು ಮತ್ತು ಪುಷ್ಪ ಶರಣಯ್ಯ ಸೊಪ್ಪಿಮಠ ನಡುವೆ ಪೈಪೋಟಿ ನಡೆಯುವ ಸಾಧ್ಯತೆ ಹೆಚ್ಚಿದೆ.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಸೂಚಿಸುವ ವ್ಯಕ್ತಿಗಳು ಬಹುತೇಕ ಆಯ್ಕೆಯಾಗಲಿದ್ದಾರೆ ಎಂದು ಪುರಸಭೆ ಸದಸ್ಯರು ತಿಳಿಸಿದ್ದಾರೆ.