ನಿತ್ಯ ಮುಕ್ತಿ ಗುರು ಬಸವನಲ್ಲಿ

ನಿತ್ಯ ಮುಕ್ತಿ ಗುರು ಬಸವನಲ್ಲಿ

ಸತ್ಯ ಇರಬೇಕು ನಿನ್ನ ಮನದಲ್ಲಿ.!
ನೀ ಬಂದೀದಿ ತಮ್ಮ ಈ ಭವದಲ್ಲಿ.!
ಅರುವಿನ ಗುರು ದರ್ಶನ ಬೇಕಿಲ್ಲಿ ,!
ಆಗ ದೊರೆಯುವುದು ಮುಕ್ತಿ ಫಲವಿಲ್ಲಿ.!

ಪೊಳ್ಳು ಸುಳ್ಳು ಬಿಡಬೇಕು ನೀನಿಲ್ಲಿ.!
ಸತ್ಯವಂತರ ಸಂಗವನು ಮಾಡಿಲ್ಲಿ.!
ನಿತ್ಯ ಮಾಯಾ ಮೋಹದ ಗುಂಗಿನಲ್ಲಿ.!
ಬಿಟ್ಟು ನೀ ಬರಬೇಕು ಶಿವ ಶರಣರಲ್ಲಿ.!!

ನಿತ್ಯ ದಾನ ಧರ್ಮ ಮಾಡೋ ನೀನಿಲ್ಲಿ.!
ನಿಜ ಧರ್ಮ ತಿಳಿದು ಬಾಳಬೇಕು ನಿನ್ನಲ್ಲಿ
ಕಾಮ ಕ್ರೋಧ ಸುಡಬೇಕು ಮನದಲ್ಲಿ.!
ಜೊತೆಸಾಗು ಸತ್ಯಶರಣರ ಹಾದಿಯಲ್ಲಿ.!!

ಹೆತ್ತವರ ಕೀರ್ತಿಯ ಗಳಿಸು ನೀನಿಲ್ಲಿ.
ಉತ್ತಮರ ಮಗನೆಂದೆಸೋ ನೀನಿಲ್ಲಿ.!
ಸುಳ್ಳೇ ಖಾಲಿ ತಿರುಗುತಿ ನೀ ಯಾಕಿಲ್ಲಿ.!
ನಿಜದೇವರು ಇರುವನು ನಿನ್ನ ಮನದಲ್ಲಿ.

ಕೈಲಾಸ ಕಾಣೋ ನಿಜ ಕಾಯಕದಲ್ಲಿ.!
ದಾಸೋಹ ಮಾಡೋ ಹಸಿದವರಲ್ಲಿ.!
ಗುರುಲಿಂಗ ಜಂಗಮರ ತಿಳಿ ಮನದಲ್ಲಿ.!
ಶಿವಯೋಗ ಸಾಧನೆ ಬೇಕು ಮನದಲ್ಲಿ.!!

ನಿಜ ಸದ್ಗುರುವಿನ ದರ್ಶನ ಮಾಡಿಲ್ಲಿ.!
ಸತ್ಯ ಅರಿತು ನೀ ನಡೆದರೆ ಸಾಕಿಲ್ಲಿ.!
ನಿತ್ಯ ಮುಕ್ತಿ ಹೊಂದೋ ಬಸವನಲ್ಲಿ.!
ಕಂದಪಂಪಯ್ಯನ ಕವನ ಗುರುವಿಗಿಲ್ಲಿ.!!

ಗೀತೆ ರಚನೆ
-ಪಂಪಯ್ಯಸ್ವಾಮಿ ಸಾಲಿಮಠ ಅಂತರಗಂಗಿ ಸಿಂಧನೂರು.ಜಿಲ್ಲಾಧ್ಯಕ್ಷರು ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆ ರಾಯಚೂರು 9980094144

One thought on “ನಿತ್ಯ ಮುಕ್ತಿ ಗುರು ಬಸವನಲ್ಲಿ

Comments are closed.

Don`t copy text!