e-ಸುದ್ದಿ, ಮಸ್ಕಿ
ಮಸ್ಕಿ: ಮಸ್ಕಿ ವಿಧಾನ ಸಭೆ ಕ್ಷೇತ್ರದ ಉಪಚುನಾವಣೆ ಈಗ ತಾನೆ ಮುಕ್ತಾಯವಾಗಿದೆ. ಆದರೆ ಇದರ ಬೆನ್ನಲ್ಲೇ ಈಗ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪ್ರಕಟವಾಗಿದ್ದು, ಮತ್ತೆ ಚುನಾವಣೆ ಚಟುವಟಿಕೆ ಗರಿಗೆದರಿವೆ.
ಮಸ್ಕಿ ತಾಲೂಕಿನಲ್ಲಿ ಮಸ್ಕಿ ಪುರಸಭೆ, ಬಳಗಾನೂರು ಪಟ್ಟಣ ಪಂಚಾಯಿತಿ ಮತ್ತು ತುರುವಿಹಾಳ ಪಟ್ಟಣ ಪಂಚಾಯಿತಿಗಳಿದ್ದು, ಮೂರು ಸ್ಥಳೀಯ ಸಂಸ್ಥೆಗಳಿಗೆ ವಾರ್ಡ್‍ವಾರು ಮೀಸಲಾತಿ ಪ್ರಕಟಿಸಿ ರಾಜ್ಯ ಸರಕಾರ ಅಧಿಸೂಚನೆ ಪ್ರಕಟಿಸಿದೆ. ಏ.27ರಂದು ಮೀಸಲಾತಿ ರಾಜ್ಯಪತ್ರ ಹೊರಡಿಸಲಾಗಿದ್ದು, ಈ ಮೀಸಲು ಆಧಾರದ ಮೇಲೆ ಈಗಿನಿಂದಲೇ ಚುನಾವಣೆ ಸ್ಪರ್ಧೆಯ ಲೆಕ್ಕಚಾರಗಳು ಹರಿದಾಡಲು ಆರಂಭಿಸಿವೆ. ಹಾಲಿ ಇರುವ ಸದಸ್ಯರು ಮರು ಸ್ಪರ್ಧೆ ಮಾಡುವುದು, ಹೊಸದಾಗಿ ಇರುವ ಆಕಾಂಕ್ಷಿಗಳು ಸೇರಿ ಹಲವರು ಚುನಾವಣೆಗೆ ಸ್ಪರ್ಧೆಯ ಇಂಗಿತ ವ್ಯಕ್ತಪಡಿಸಿದ್ದಾರೆ. ಇನ್ನು ಬೈ ಎಲೆಕ್ಷನ್‍ನ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಈ ಆಸೆ, ಆಕಾಂಕ್ಷೆಗಳು ಮತ್ತಷ್ಟು ಮುನ್ನೆಲೆಗೆ ಬರುವ ಲಕ್ಷಣ ಗೋಚರಿಸುತ್ತಿವೆ.
ಮಸ್ಕಿ ಪುರಸಭೆ ಮೀಸಲು ವಿವರ: ಮಸ್ಕಿ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್‍ಗಳಿದ್ದು, 23 ವಾರ್ಡ್‍ಗಳಿಗೆ ಮೀಸಲು ನಿಗಧಿಪಡಿಸಿ ಸರಕಾರ ಆದೇಶ ಹೊರಡಿಸಿದೆ. 1ನೇ ವಾರ್ಡ್-ಹಿಂದುಳಿ ವರ್ಗ ಎ(ಮಹಿಳೆ), 2ನೇ ವಾರ್ಡ್-ಪರಿಶಿಷ್ಠ ಜಾತಿ, 3ನೇ ವಾರ್ಡ್-ಪರಿಶಿಷ್ಠ ಜಾತಿ(ಮಹಿಳೆ), 4ನೇ ವಾರ್ಡ್-ಪರಿಶಿಷ್ಠ ಜಾತಿ(ಮಹಿಳೆ), 5ನೇ ವಾರ್ಡ್-ಸಾಮಾನ್ಯ, 6ನೇ ವಾರ್ಡ್-ಸಾಮಾನ್ಯ, 7ನೇ ವಾರ್ಡ್-ಹಿಂದುಳಿದ ವರ್ಗ(ಎ), 8ನೇ ವಾರ್ಡ್-ಪರಿಶಿಷ್ಠ ಜಾತಿ(ಮಹಿಳೆ), 9ನೇ ವಾರ್ಡ್- ಪರಿಶಿಷ್ಠ ಪಂಗಡ, 10ನೇ ವಾರ್ಡ್-ಸಾಮಾನ್ಯ(ಮಹಿಳೆ), 11ನೇ ವಾರ್ಡ್-ಪರಿಶಿಷ್ಠ ಪಂಗಡ(ಮಹಿಳೆ), 12ನೇ ವಾರ್ಡ್-ಹಿಂದುಳಿದ ವರ್ಗ(ಬಿ), 13ನೇ ವಾರ್ಡ್-ಸಾಮಾನ್ಯ, 14ನೇ ವಾರ್ಡ್-ಸಾಮಾನ್ಯ, 15ನೇ ವಾರ್ಡ್-ಸಾಮಾನ್ಯ(ಮಹಿಳೆ), 16ನೇ ವಾರ್ಡ್-ಸಾಮಾನ್ಯ, 17ನೇ ವಾರ್ಡ್-ಪರಿಶಿಷ್ಠ ಜಾತಿ, 18ನೇ ವಾರ್ಡ್-ಸಾಮಾನ್ಯ, 19ನೇ ವಾರ್ಡ್-ಸಾಮಾನ್ಯ ಮಹಿಳೆ, 20ನೇ ವಾರ್ಡ್-ಸಾಮಾನ್ಯ(ಮಹಿಳೆ), 21ನೇ ವಾರ್ಡ್ ಪರಿಶಿಷ್ಠ ಜಾತಿ, 22ನೇ ವಾರ್ಡ್-ಸಾಮಾನ್ಯ(ಮಹಿಳೆ), 23ನೇ ವಾರ್ಡ್-ಸಾಮಾನ್ಯ(ಮಹಿಳೆ).
ತುರುವಿಹಾಳ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 11 ವಾರ್ಡ್‍ಗಳಿದ್ದು, 1ನೇ ವಾರ್ಡ್-ಸಾಮಾನ್ಯ, 2ನೇ ವಾರ್ಡ್- ಹಿಂದುಳಿದ ವರ್ಗ ಎ(ಮಹಿಳೆ), 3ನೇ ವಾರ್ಡ್-ಸಾಮಾನ್ಯ, 4ನೇ ವಾರ್ಡ್- ಹಿಂದುಳಿದ ವರ್ಗ ಎ, 5ನೇ ವಾರ್ಡ್-ಸಾಮಾನ್ಯ(ಮಹಿಳೆ), 6ನೇ ವಾರ್ಡ್-ಪರಿಶಿಷ್ಠ ಪಂಗಡ, 7ನೇ ವಾರ್ಡ್- ಹಿಂದುಳಿದ ವರ್ಗ(ಬಿ), 8ನೇ ವಾರ್ಡ್-ಸಾಮಾನ್ಯ, 9ನೇ ವಾರ್ಡ್-ಸಾಮಾನ್ಯ,ಮಹಿಳೆ, 10ನೇ ವಾರ್ಡ್–ಪರಿಶಿಷ್ಠ ಜಾತಿ(ಮಹಿಳೆ), 11ನೇ ವಾರ್ಡ್-ಪರಿಶಿಷ್ಠ ಜಾತಿ, 12ನೇ ವಾರ್ಡ್-ಸಾಮಾನ್ಯ (ಮಹಿಳೆ), 13ನೇ ವಾರ್ಡ್-ಪರಿಶಿಷ್ಠ ಪಂಗಡ (ಮಹಿಳೆ)À, 14ನೇ ವಾರ್ಡ್-ಸಾಮಾನ್ಯ ಮೀಸಲು ನಿಗಧಿಸಿ ಆದೇಶ ಹೊರಡಿಸಲಾಗಿದೆ.
ಬಳಗಾನೂರು: ಬಳಗಾನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 12 ವಾರ್ಡ್‍ಗಳಿದ್ದು, 1ನೇ ವಾರ್ಡ್-ಪರಿಶಿಷ್ಠ ಜಾತಿ, 2ನೇ ವಾರ್ಡ್- ಹಿಂದುಳಿದ ವರ್ಗ ಎ(ಮಹಿಳೆ), 3ನೇ ವಾರ್ಡ್-ಸಾಮಾನ್ಯ(ಮಹಿಳೆ), 4ನೇ ವಾರ್ಡ್-ಸಾಮಾನ್ಯ, 5ನೇ ವಾರ್ಡ್-ಸಾಮಾನ್ಯ(ಮಹಿಳೆ), 6ನೇ ವಾರ್ಡ್-ಹಿಂದುಳಿದ ವರ್ಗ(ಎ), 7ನೇ ವಾರ್ಡ್-ಪರಿಶಿಷ್ಠ ಪಂಗಡ, 8ನೇ ವಾರ್ಡ್-ಹಿಂದುಳಿದ ವರ್ಗ(ಬಿ), 9ನೇ ವಾರ್ಡ್-ಸಾಮಾನ್ಯ, 10ನೇ ವಾರ್ಡ್-ಸಾಮಾನ್ಯ(ಮಹಿಳೆ), 11ನೇ ವಾರ್ಡ್-ಪರಿಶಿಷ್ಠ ಜಾತಿ(ಮಹಿಳೆ), 12ನೇ ವಾರ್ಡ್-ಸಾಮಾನ್ಯಕ್ಕೆ ಮೀಸಲು ನಿಗಧಿಸಿ ಆದೇಶ ಹೊರಡಿಸಲಾಗಿದೆ.
ಕಾಲವಕಾಶ: ಸ್ಥಳೀಯ ಸಂಸ್ಥೆಗಳಿಗೆ ಮೀಸಲು ಹೊರಡಿಸಿದ ರಾಜ್ಯ ಸರಕಾರ ಮೀಸಲಾತಿ ಬಗ್ಗೆ ಆಕ್ಷೇಪಣೆ, ಅಪಸ್ವರಗಳು ಇದ್ದರೆ, ಮೀಸಲಾತಿ ಹೊರಡಿಸಿದ 7 ದಿನಗಳ ಒಳಗಾಗಿ ರಾಯಚೂರು ಜಿಲ್ಲಾಧಿಕಾರಿ ಕಚೇರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ರಾಜ್ಯಪತ್ರದಲ್ಲಿ ಹೊರಡಿಸಲಾಗಿದೆ.