ಅಧಿಕಾರಿಗಳ ಅಸ್ಪಷ್ಟ ನಿರ್ಧಾರ, ಸಂತೆಗೆ ಬಾರದ ವ್ಯಾಪಾರಿಗಳು,ಖರೀದಿಗೆ ಮುಗಿಬಿದ್ದ ಜನತೆ..!!

ಅಧಿಕಾರಿಗಳ ಅಸ್ಪಷ್ಟ ನಿರ್ಧಾರ, ಸಂತೆಗೆ ಬಾರದ ವ್ಯಾಪಾರಿಗಳು,ಖರೀದಿಗೆ ಮುಗಿಬಿದ್ದ ಜನತೆ..!!

e-ಸುದ್ದಿ, ಲಿಂಗಸುಗೂರು

ಕೊರೊನಾ ನಿಯಮದಿಂದ ವಾರದ ಸಂತೆ ರದ್ದಾಗಿದ್ದರು ಪಟ್ಟಣದ ಸರಕಾರಿ ಪಿಯು ಕಾಲೇಜು ಮೈದಾನದಲಿ ತರಕಾರಿ ಮತ್ತು ಹಣ್ಣುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದರು ಬೇರೆಡೆ ಅವಕಾಶ ಮಾಡಲಾಗಿದೆ ಎಂಬ ವದಂತಿಯಿಂದ ವ್ಯಾಪಾರಿಗಳು ಮರಳಿಹೋಗಿದ್ದು ಇರುವ ಕೆಲವೆ ಜನ ವ್ಯಾಪಾರಿಗಳಿಗೆ ಜನತೆ ಕೊರೊನಾ ಮರೆತು ಮುಗಿಬಿದ್ದು ಖರೀದಿ ಮಾಡಿದ ಘಟನೆ ಜರುಗಿತು

ಕೊರೊನಾ ನಿಯಮದಂತೆ ಶನಿವಾರದ ಸಂತೆ ರದ್ದಾಗಿದ್ದು ತರಕಾರಿ ಮತ್ತು ಹಣ್ಣು ಖರೀದಿಗಾಗಿ ಪಟ್ಟಣದ ಸರಕಾರಿ ಪಿಯು ಕಾಲೇಜು ಮೈದಾನದಲ್ಲಿ ಬೆ ೬ರಿಂದ ೧೦ರವರೆಗೂ ವ್ಯವಸ್ಥೆ ಮಾಡಲಾಗಿದ್ದು ಎಂದಿನಂತೆ ಮೈದಾನಕ್ಕೆ ಬರುವ ತರಕಾರಿ ವ್ಯಾಪಾರಸ್ಥರಿಗೆ ಶನಿವಾರ ಇವತ್ತು ಬೇರೆಕಡೆ ಮಾರಾಟವೆಂದು ದಿಕ್ಕು ತಪ್ಪಿಸಿದರಂತೆ ಅದರಂತೆ ಬಂದಿರುವ ವ್ಯಾಪಾರಸ್ಥರು ಮರಳಿಹೋಗಿದ್ದಾರೆಂದು ಹೇಳಲಾಗುತ್ತಿದೆ.   ಸ್ಥಳಿಯ ಎರಡು ಮೂರು ಜನ ವ್ಯಾಪಾರಸ್ಥರಷ್ಟೆ ಇರುವ ಕಾರಣ ವಾರದ ಸಂತೆಗೆ ಬಂದ ನೂರಾರು ಜನತೆ ಕೆಲವೆ ಜನ ವ್ಯಾಪಾರಿಗಳಿಗೆ ಮುಗಿಬಿದ್ದು ಖರೀದಿ ನಡೆಸಿದರು.

ಇದೆ ಸಂದರ್ಭವನ್ನು ಅರಿತ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ತರಕಾರಿ ಮತ್ತು ಹಣ್ಣುಗಳನ್ನು ಮಾರುವುದು ಒಂದುಕಡೆಯಾದರೆ ಕೊರೊನಾ ಭಯ ಮರೆತು ಜನತೆ ಗುಂಪು ಗುಂಪಾಗಿ ಖರೀದಿಯಲ್ಲಿ ತೊಡಗಿರುವುದು ಕಂಡುಬಂತು

ದಿನ ಬೆಳಗಾದರೆ ಕೇವಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವಲ್ಲಿ ಬಿಜಿಯಾಗಿರುವ ಅಧಿಕಾರಿಗಳು ಕೇವಲ ದಂಡಹಾಕುವುದೆ ಮಹಾಕೆಲಸವೆಂಬಂತೆ ತೋರುತ್ತಿದೆ ಗುಂಪಾಗಿ ಸೇರುವುದನ್ನು ತಡೆಯಲು ಇರುವ ಮಾರ್ಗಗಳು ಯಾವವು ಜನತೆ ಗುಂಪು ಸೇರಿರಬಾರದು ಮತ್ತು ಅಗತ್ಯವಸ್ತುಗಳ ಖರೀದಿಯು ಆಗಿರಬೇಕು ಅಂತಹ ಮುನ್ನೆಚ್ಚರಿಕೆಯ ದಿಟ್ಟನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರಿಗಳ ಮುಂದಾಲೋಚನೆಯಲ್ಲಿರುತ್ತದೆ ಆದರೆ ಜನತೆಗೆ ವ್ಯವಸ್ಥೆ ಮಾಡಿಕೊಡಬೇಕು ಎನ್ನುವ ಮುಂದಾಲೋಚನೆಯೊಡನೆ ಅಂಗಡಿಗಳ ಮುಚ್ಚಿಸುವ ಕೆಲಸವನ್ನು ಮಾಡಲಿ ಕೇವಲ ದಂಡಹಾಕುವುದೆ ಒಂದೆ ಅಧಿಕಾರಿಗಳ ಕೆಲಸವಲ್ಲ ಜನಜೀವನದ ಸವಲತ್ತುಗಳು ಮತ್ತು ಕೊರೊನಾ ನಿಯಂತ್ರಣ ಎರಡನ್ನು ಬ್ಯಾಲೆನ್ಸ್ ಮಾಡುವ ಗುರುತರ ಜವಾಬ್ದಾರಿಯು ಅವರ ಮೇಲಿದೆ

ಸ್ಯಾನೈಟಜರ್ ಮಾಡಿಸದ ಅಧಿಕಾರಿಗಳು:ಪಟ್ಟನದಲ್ಲಿ ದಿನದಿಂದ ದಿಕ್ಕೆ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೆ ಇದೆ ಆದರು ಇದುವರೆಗೂ ಪುರಸಭೆಯವತಿಯಿಂದ ಸ್ಯಾನಿಟೈಜರ್ ಮಾಡಿಸುವ ಕನಿಷ್ಟ ಕಾಳಜಿಯು ಕಂಡು ಬಂದಿಲ್ಲವೆನ್ನುವುದೆ ವಿಷಾದದ ಸಂಗತಿಯಾಗಿದೆ

ದುಪ್ಪಟ್ಟು ಬೆಲೆ ಹೆಚ್ಚಿಸಿ ಮಾರಾಟ ಮಾಡುವವರಿಗೆ ಕ್ರಮವಿಲ್ಲ:ಪಟ್ಟಣದ ಗುಟ್ಕಾ ಸಿಗರೇಟ್ ಮೊದಲಾದ ವಸ್ತುಗಳ ವ್ಯಾಪಾರಿಗಳು ಲಾಕ್ ಡೌನ್ ಆಗುತ್ತದೆ ಎನ್ನುವ ಸುಳಿವು ಅರಿಯುತ್ತಲೆ ಕೃತಕ ಅಭಾವ ಸೃಷ್ಟಿಸಿದರು ಈಗ ಎಲ್ಲೆಡೆ ಮರ‍್ನಾಲ್ಕುಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಆದರು ಅವರ ಮೇಲೆ ಇಂದಿಗೂ ಕ್ರಮವಿಲ್ಲ ಒಳೆದ ಸಲ ಹೀಗೆಮಾಡಿ ಕೋಟಿಕೋಟಿ ಗಳಿಕೆ ಮಾಡಿಕೊಂಡ ಇವರು ಅದೆ ಮಾದರಿಯಲ್ಲಿ ನಡೆದಿದ್ದು ಕ್ರಮ ಜರುಗಿಸಬೇಕಾದ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ ಮಾಸ್ಕ ಇಲ್ಲದವರಿಗೆ ನೂರುರೂಪಾಯಿ ದಂಡಹಾಕಿ ಕೈತೊಳೆದು ಕೊಳ್ಳುತ್ತಿದ್ದಾಾರೆ.

Don`t copy text!