e-ಸುದ್ದಿ, ಮಸ್ಕಿ
ಉಪ ಚುನಾವಣೆಯಲ್ಲಿ ಹಣ ಬಲದಿಂದ ಗೆಲ್ಲಲು ಹೊರಟಿದ್ದ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸುವ ಮೂಲಕ ಸರಿಯಾದ ಉತ್ತರ ನೀಡಿದ್ದಾರೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ಮಸ್ಕಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಭಾನುವಾರ ದೂರವಾಣಿ ಮೂಲಕ ವಿಜಯವಾಣಿಗೆ ಪ್ರತಿಕ್ರಿಯೆ ನೀಡಿದ ಅವರು ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದ ಪ್ರತಾಪಗೌಡ ಪಾಟೀಲರನ್ನು ಉಪ ಚುನಾವಣೆಯಲ್ಲಿ ಗೆಲ್ಲಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅವರುÀ ಮಗ ವಿಜಯೇಂದ್ರನ ಮೂಲಕ ಕ್ಷೇತ್ರದಲ್ಲಿ ಹಣದ ಹೊಳೆ ಹರಿಸಿದರು. ಮಸ್ಕಿ ಕ್ಷೆತ್ರದ ಮತದಾರರು ಹಣಕ್ಕೆ ಮಹತ್ವ ನೀಡದೆ ಹಣದ ಮದಕ್ಕೆ ಮತದಾರರು ಮಾರಟಕ್ಕಿಲ್ಲ ಎಂದು ಸಾಭೀತು ಮಾಡಿದ್ದಾರೆ ಎಂದರು.
ಕಳೆದ ಎಲ್ಲಾ ಉಪ ಚುನಾವಣೆಯಲ್ಲೂ ಹಣದಿಂದ ಬಿಜೆಪಿ ಗೆದ್ದಿದೆ ಹೊರತು ಎಲ್ಲಿಯೂ ಬಿಜೆಪಿಯ ಪ್ರಭಾವ ಇಲ್ಲಾ ಎಂದರು. ಮಸ್ಕಿ ಮತದಾರರು ಪ್ರಜ್ಞಾವಂತರಿದ್ದು ಹಣಬಲಕ್ಕೆ ಮಣೆ ಹಾಕದೆ ಜನ ಬೆಂಬಲಕ್ಕೆ ಮತ ನೀಡಿದ್ದಾರೆ ಎಂದರು.
ಆರ್. ಬಸನಗೌಡ ತುರ್ವಿಹಾಳ ಮಸ್ಕಿ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡಲಿದ್ದಾರೆ. ನಾನು ಸೇರಿದಂತೆ ಜಿಲ್ಲೆಯ ಎಲ್ಲಾ ಮುಖಂಡರು ಸಹ ಅವರಿಗೆ ಎಲ್ಲಾ ರೀತಿ ಸಹಕಾರ ನೀಡುವುದಾಗಿ ಹೇಳಿದರು. ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಸಹಕರಿಸಿದ ಮುಖಂಡರಿಗೆ, ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು.