ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನೆ ಮಾಡಿದ ಸಂಭ್ರಮ-ಬಿಜೆಪಿಯಲ್ಲಿ ನಿರವಮೌನ


e-ಸುದ್ದಿ, ಮಸ್ಕಿ
ಏ.17 ರಂದು ನಡೆದಿದ್ದ ಮಸ್ಕಿ ಉಪ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಆರ್. ಬಸನಗೌಡ ತುರ್ವಿಹಾಳ ಬಿಜೆಪಿಯ ಪ್ರತಾಪಗೌಡ ಪಾಟೀಲರ ವಿರುದ್ಧ 30,666 ಮತಗಳ ಅಂತದಿಂದ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.
ಕರೊನಾ ಹಿನ್ನೆಲೆಯಲ್ಲಿ ಜನತಾ ಕಪ್ರ್ಯೂ ಇದ್ದ ಕಾರಣ ಯಾವುದೇ ಸಂಭ್ರಮಾಚರಣೆ ಮಾಡದೆಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಆದೇಶಿಸಿದ್ದರಿಂದ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ತಮ್ಮ ವಾರ್ಡ್ ಗಳಲ್ಲಿ ಸರಳವಾಗಿ ಸಂಭ್ರಮಾಚರಣೆ ಮಾಡಿರುವ ಬಗ್ಗೆ ವರದಿಗಳು ಬಂದಿವೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಪ್ರಮುಖರಾಗಿದ್ದ ಪ್ರತಾಪಗೌಡ ಪಾಟೀಲರಿಗೆ ಭಾರಿ ಹಿನ್ನೆಡೆಯಾಗಿದೆ. ಬಿಜೆಪಿ ಸೋಲಿನಿಂದ ಆ ಪಕ್ಷದ ಕಾರ್ಯಕರ್ತರಲ್ಲಿ ನಿರವಮೌನ ಆವರಿಸಿದೆ. ಮತದಾರರು ನೀಡಿದ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದು ಪರಾಜಿತ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಹೇಳಿದ್ದಾರೆ.
ಪಟ್ಟಣದಲ್ಲಿ ಕರೊನಾ ಕಪ್ರ್ಯೂ ಇದ್ದ ಕಾರಣ ಸಂಭ್ರಮಾಚರಣೆ ನಡೆಯದಂತೆ ನೋಡಿಕೊಳ್ಳಲು ಪ್ರಮುಖ ವೃತ್ತಗಳಾದ ದೈವದಕಟ್ಟೆ, ಕನಕವೃತ್ತ, ವಾಲ್ಮೀಕಿವೃತ್ತ, ಖಲೀಲವೃತ್ತ, ಅಶೋಕವೃತ್ತ ಹಾಗೂ ಪ್ರಮುಖ ರಸ್ತೆಗಳಲ್ಲಿ ಬೀಗಿ ಪೆÇಲೀಸ್ ಬಂದೋಬಸ್ತ್ ಮಾಡಿರುವುದು ಕಂಡು ಬಂತು.
ಡಿವೈಎಸ್‍ಪಿ ಹುಲ್ಲೂರು, ಸಿಪಿಐ ದೀಪಕ್ ಬೂಸರಡ್ಡಿ, ಪಿಎಸ್‍ಐ ಸಿದ್ರಾಮಪ್ಪ ಪಟ್ಟಣದಲ್ಲಿ ಗಸ್ತು ತಿರುಗುವ ಮೂಲಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡರು.

Don`t copy text!