ಪ್ರಜ್ವಲಿಸುವ ದೀಪಗಳು

ಪ್ರಜ್ವಲಿಸುವ ದೀಪಗಳು

ಶತಮಾನ ಬೇರೇ ಬೇರೇ
ಹೃದಯದ ಬಡಿತ ಮಾತ್ರ ಒಂದೇ
ಈ ಲೋಕದ ಒಳಿತು
ಬಯಸುವ ದೀಪಾ ನೀವೆಲ್ಲರೂ…
ಶಾಂತಿ ನೀತಿ ಕ್ರಾಂತಿಯ ತತ್ವಗಳ
ಹೊಂದಿದ ಮಹಾನ ಚೇತನರು
ಭಾರತದ ಮಹಾ ದೀಪಗಳು.

ಬಸವ ಶಾಂತಿಯ ಧಾಮ
ಬುದ್ಧ ಅಹಿಂಸೆ ಧಾಮ
ಭೀಮ ತತ್ವಗಳನ್ನು ಅರಿತ
ಅರಿವಿನ ಧಾಮ
ದೇವನೊಬ್ಬನೇ ತಂದೇ
ಮನುಜ ಮತ ಒಂದೇ
ಎಂದ ಜ್ಯೋತಿಗಳು.

ನೈಜ ಘಟನೆಗಳು ನಡೆದವು
ಸಹಜವಾಗಿ ಜೀವಿಸಿ ನಮ್ಮಂತಹ
ಎಳೆಯರಿಗೆ ಮಾದರಿ ನೀವಾದ್ರಿ.
ಸರಳ ಜೀವನ ಶೈಲಿ ನಿಮ್ಮ ದು,
ನಿಮ್ಮ ಒಳಗಿನ ಅರಿವಿನ
ಜ್ಯೋತಿ ಬೆಳಗಿಸಿ,ಜಗವೆಲ್ಲಾ ಬೆಳಕು
ನೀಡಿದ ಜ್ಯೋತಿಗಳು

ಕವಿತಾ. ಮಳಗಿ, ಕಲಬುರ್ಗಿ

Don`t copy text!