ನಗು
ಭಾವನಾ ರಹಿತ ನಗೆ
ಅಣಕಿಸುವ ನಗೆ
ಅಟ್ಟಹಾಸದ ನಗೆ
ಹುಚ್ಚು ನಗೆ,ಚುಚ್ಚು ನಗೆ
ನಗೆಯಿಂದ ಹಗೆ (೧)
ನಲ್ಮೆಯ ಹೂ ನಗೆ
ಬುದ್ಧನ ಮುಗಳ್ನಗೆ
ಕೃಷ್ಣನ ಸರಸ ನಗೆ
ಪಂಪನ ರಸ ನಗೆ
ನಗೆಯಿಂದ ಬುಗ್ಗೆ (೨)
ನಗುವಿನ ನಲಿವು
ಸಂತಸದ ಅರಿವು
ಹೃದಯದ ಹಗುರವು
ಆಯುಷ್ಯ ವೃದ್ಧಿಯು
ಅನುಭಾವಿಗಳ ಅಭಿಮತವು (೩)
ಮೀನಾಕುಮಾರಿಯ
ಮಿಂಚು ನಗೆ
ರಾಜಕಪೂರನ ಒಳ ನಗೆ
ಸುಹಾಸಿನಿಯ ವಿಶಿಷ್ಟ ನಗೆ
ಸರಿತಾಳ ವಿಷಾಧ ರಹಿತ ನಗೆ
ಇವು ಸಿನಿಮಾ ಲೋಕ ನಗೆ(೪)
ಗಬ್ಬರ ಸಿಂಗನ ಗಹಗಹಿಸಿದ ನಗೆ
ವಜ್ರಮುನಿಯ ಕರುಳಿನ ನಗೆ
ಅಂಬರೀಶಪುರಿಯ ಅಟ್ಟಹಾಸದ ನಗೆ
ಪ್ರೇಮಿಗಳ ವಾಲೆಂಟೈನ್ ಡೇ ನಗೆ
ಇವು ವಿಷಯಾಧಾರಿತ ನಗೆ( ೫ )
ನಗುವಿನಿಂದ ಗೆಳೆಯರ ಆಕರ್ಷಣೆ
ನಗುವಿನಿಂದ ಕ್ರೂರಿಗಳ ಕರಗುವಿಕೆ
ನಗುವಿನಿಂದ ವ್ಯವಹಾರ ವೃದ್ಧಿಸುವಿಕೆ
ನಗುವಿನಿಂದ ಸ್ವರ್ಗ ನಿರ್ಮಾಣಗೊಳ್ಳುವಿಕೆ
ನಗುವಿನಿಂದ ಜೀವನ
ಪಾವನ ಗೊಳ್ಳುವಿಕೆ(೬)
ನಗುವಿನ ಪರಿಪಾಠ ಬೇಕು
ನಕ್ಕು ನಗಿಸುವ ಜನರಿರಬೇಕು
ರಸಿಕರೊಡನೆ ಸದಾ ಬೆರೆಯಬೇಕು
ನಗುವ ಪರಿಸರ ನಿರ್ಮಾಣಗೊಳ್ಳಬೇಕು
ಕರೊನಾ ಸಂಕಷ್ಟದಲ್ಲಿ
ನಗೆ ಮಾರಿ ತಂದೆ ನೆನೆಸುತ್ತಿರಬೇಕು(೮)
–ಶಿವಶಂಕರ ಟೋಕರೆ