ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ ಮಸ್ಕಿ: ಮಕ್ಕಳ ಗಲಾಟೆ ಬಗ್ಗೆ ವಿಷಾಧ : ಪ್ರತಾಪಗೌಡ ಪಾಟೀಲ್


ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ
ಮಸ್ಕಿ: ಮಕ್ಕಳ ಗಲಾಟೆ ಬಗ್ಗೆ ವಿಷಾಧ : ಪ್ರತಾಪಗೌಡ ಪಾಟೀಲ್

e-ಮಸ್ಕಿ

ಕೆಲವು ಕಿಡಿಗೇಡಿಗಳು  ಸಾಮಾಜಿಕ ಜಲಾತಾಣಗಳಲ್ಲಿ ನನ್ನ ಮತ್ತು ನನ್ನ ಪಕ್ಷದ ಮುಖಂಡರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದರಿಂದ ನಮ್ಮ ಹುಡುಗರು ಹಾಗೂ ಕಾರ್ಯಕರ್ತರು  ಕೋಪಗೊಂಡು ಕೆಲವರ ಮೇಲೆ ಗಲಾಟೆ ಮಾಡಿದ್ದಾರೆ ಇದನ್ನು  ನಾನು ಖಂಡಿಸಿ ವಿಷಾಧ ವ್ಯಕ್ತಪಡಿಸುತ್ತೇನೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದ್ದಾರೆ.

ಮಂಗಳವಾರ  ಪಟ್ಟಣದಲ್ಲಿ ಮಾದ್ಯಮ ಪ್ರಕಟಣೆ ನೀಡಿರುವ ಅವರು ನಾವುಗಳು ರಾಜಕೀಯ  ಮುಖಂಡರು ಯಾವುದೆ ಪಕ್ಷಗಳಲ್ಲಿ ಇರಲಿ ಕ್ಷೇತ್ರದಲ್ಲಿ ಶಾಂತಿಗೆ ಭಂಗ ಬರದಂತೆ ಒಟ್ಟಾಗಿ ನೋಡಿಕೊಳ್ಳೊಣ ಎಂದು ಮನವಿ ಮಾಡಿದ್ದಾರೆ.
ಚುನಾವಣೆ ಫಲಿತಾಂಶ ಬಂದ ನಂತರ ಅಲ್ಲಲ್ಲಿ ಸುಳ್ಳು ವದಂತಿಗಳಿಂದ  ಗಲಾಟೆಗಳು ನಡೆಯುತ್ತಿದ್ದು ಕ್ಷೇತ್ರದ ಜನರು ಇದಕ್ಕೆ ಕಿವಿಕೊಡದೇ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಕ್ಷೇತ್ರದ ಮತದಾರರು ನೀಡಿದ ತೀರ್ಪನ್ನು ನಾನು ಹಾಗೂ ನನ್ನ ಪಕ್ಷ ಬಿಜೆಪಿ ಒಪ್ಪಿಕೊಂಡಿದೆ.ಮತದಾರರು ಬದಲಾವಣೆ ಬಯಸಿದ್ದಾರೆ.   ಆದರೆ ಚುನಾವಣೆ ನಂತರ  ಕೆಲವೊಂದು ಗ್ರಾಮಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಗಳಾಗಿ ಪೋಲಿಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವುದು
ನನಗೆ ಬೇಸರ ತಂದಿದೆ ಎಂದು ಪ್ರತಾಪಗೌಡ ಪಾಟೀಲ ಅಸಮದಾನ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿ  ಎಲ್ಲರೂ ಶಾಂತಿ ಮತ್ತು ಕಾನೂನನ್ನು ಪಾಲನೆ
ಮಾಡಬೇಕಾಗಿದ್ದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದಿರುವ ಪ್ರತಾಪಗೌಡ ಪಾಟೀಲ.ಯಾರೂ ವದಂತಿಗಳಿಗೆ ಕಿವಿಗೊಡದೆ ಶಾಂತ ರೀತಿಯಿಂದ ಇರುವಂತೆ ಪ್ರಕಟಣೆಯಲ್ಲಿ
ಮನವಿ ಮಾಡಿದ್ದಾರೆ.

Don`t copy text!