ಮಲ್ಲಿಗೆ ಸುವಾಸನೆ ಬೀರಿದ ಅಲ್ಲಮರು.
ವಚನ ಸಾಹಿತ್ಯವ ಬರೆದಿಹರು.
ಮನದ ಕತ್ತಲೆ ಕಳೆದು ಜ್ಞಾನದೀಪವ ಹಚ್ಚಿ.
ಲೋಕದ ಅಂಕು ಡೊಂಕು ತಿದ್ದಿ ತೀಡಿದವರು.
ಅವರೇ ನಮ್ಮ ಅಲ್ಲಮಪ್ರಭು ದೇವರು.
ಸುಂದರ ಸುವರ್ಣ ಕರ್ನಾಟಕದ.
ಶಿವಮೊಗ್ಗ ಜಿಲ್ಲೆಯ ಕರೂರಿನವರು.
ವಲ್ಲಿಪೂರದ ನಾಗವಾಸಾಧಿಯಪ್ಪನವರ
ದಂಪತಿ ಉದರದಿ ಜನ್ಮ ತಾಳಿದರು.
ಅವರೇ ನಮ್ಮ ಅಲ್ಲಮಪ್ರಭು ದೇವರು.
ಬಂಧು ಬಳಗ ಕೂಡಿ ಚಂದನೇ ಮಾತನಾಡಿ.
ಸಂತೋಷದಿ ಜೋಗುಳ ಹಾಡಿ ತೊಟ್ಟಿಲು ತೂಗಿದರು.
ಶರಣರ ನಗುಮುಖದ ಬಾಲ ಕಂದಯ್ಯನ ಕಂಡು.
ಎಲ್ಲರೂ ಜೋ ಜೋ ಎಂದು ಲಾಲಿಯ ಹಾಡಿದರು.
ಅವರೇ ನಮ್ಮ ಅಲ್ಲಮಪ್ರಭು ದೇವರು.
ಬಾಲಲೀಲರಂತೆ ಬೆಳೆದಿಹರು ಅಕ್ಷರಾಭ್ಯಾಸ ಪಠಿಸಿದರು.
ಅನಿಮೀಷ ಗುರುಗಳ ದರುಶನ ಪಡೆದವರು.
ಶರಣ ತತ್ವದ ಉಪದೇಶ ಜಗಕೆ ಸಾರಿದರು.
ಶಿವತತ್ವ ಶಿರೋಮಣಿ ಲಿಂಗನಿಷ್ಠರರು.
ಅವರೇ ನಮ್ಮ ಅಲ್ಲಮಪ್ರಭು ದೇವರು.
ಸಿದ್ಧರಾಮರು ಕರೆದರು ಅಲ್ಲಯ್ಯನೆಂದು.
ಅಕ್ಕಮಹಾದೇವಿ ಕರೆದರು ಅಲ್ಲಮಯ್ಯನೆಂದು.
ಆಯ್ದಕ್ಕಿ ಲಕ್ಕಮ್ಮ ಕರೆದರು ಪ್ರಭುದೇವರೆಂದು.
ಅಣ್ಣ ಬಸವಣ್ಣ ಕರೆದರು ಜ್ಞಾನ ಪ್ರಭುವೆಂದು.
ಎಲ್ಲರೂ ಕರೆದರು ಅಲ್ಲಮಪ್ರಭು ಎಂದು.
ಅರಿವಿನ ಅರಮನೆ ಕದ ತೆಗೆದವರು.
ಅರಿವು ಗುರುವೆಂದು ಅರಿತು ನಡೆದರು.
ಅರಿವಿನಿಂದಲೇ ಶಿವ ಶರಣರ ಕಂಡವರು.
ಅರಿವಿನ ವಚನ ಬುತ್ತಿ ಜಗಕೆ ಕೊಟ್ಟವರು.
ಅವರೇ ನಮ್ಮ ಅಲ್ಲಮಪ್ರಭು ದೇವರು.
ಶರಣ ಅಲ್ಲಮರು ಕಲ್ಲು ಸಕ್ಕರೆಯಂತೆ.
ವಚನ ಬರೆದಿಟ್ಟ ಹಾಲು ಸಿಹಿ ಜೇನಿನಂತೆ.
ಶರಣರ ನುಡಿಯೆಮಗೆ ಫಲಪುಷ್ಪ ಸಿರಿಯಂತೆ.
ಶರಣರ ದರ್ಶನವೇ ಸುಳಿವು ತಂಗಾಳಿಯಂತೆ.
ಅವರೇ ನಮ್ಮ ಅಲ್ಲಮಪ್ರಭು ದೇವರು.
ಶರಣರ ದರ್ಶನದಿಂದ ಪಾವನವೀ ಜನ್ಮ.
ಶರಣು ಶರಣಾರ್ಥಿ ಶರಣು ಜಂಗಮರಿಗೆ.
ಶರಣೆಂದು ಶಿರಬಾಗುವ ಪಂಪಯ್ಯನಾ ಮತಿಗೆ.
ಶರಣ ಲೋಕದ ಅರುಣ ಕಿರಣ ಕಾಣಯ್ಯ.
ಶರಣ ಅಲ್ಲಮ ಪ್ರಭು ದೇವ ಕಾಣಯ್ಯ.
–ಪಂಪಯ್ಯಸ್ವಾಮಿ ಸಾಲಿಮಠ ಅಂತರಗಂಗಿ ಸಿಂಧನೂರು
ಶರಣ ಅಲ್ಲಮ ಪ್ರಭುಗಳಿಗೆ ಶಿರ ಬಾಗಿ ನಮಿಸುವೆ.
ಕವನ ತುಂಬಾ ಸೊಗಸಾಗಿ ಮೂಡಿ ಬಂದಿದೆ. ಶರಣ ಪಂಪಯ್ಯಸ್ವಾಮಿಯರಿಗೆ ಶರಣು ಶರಣಾರ್ಥಿ.
ಆರ್.ಪ್ರಕಾಶ್.