ಲಾಕ್ ಡೌನ್ ದೃಶ್ಯಗಳು

ಲಾಕ್ ಡೌನ್ ದೃಶ್ಯಗಳು

ದೃಶ್ಯ- 1

ಅಮ್ಮ ಆಸ್ಪತ್ರೆಯಲ್ಲಿ
ಅನ್ನ ನೀರು ಸಿಗುವುದಾದರೆ
ನಮಗೂ ಕೊರೊನಾ ಬರಲಿ-
-ಯೆಂದು ಬೇಡಿಕೊಳ್ಳುತ್ತೇನೆ!

ದೃಶ್ಯ – 2

ಆ ತಾಯಿ ಮಗುವನ್ನು
ಹೊತ್ತುಕೊಂಡು ತಿರುಗುತ್ತಿದ್ದಾಳೆ.
ಒಂದೇ ಒಂದು ಬ್ರೆಡ್ ಕೊಡಿ.
ನಾನು ಮಗು ಊಟ ಮಾಡದೆ
ಮೂರು ದಿನವಾಯಿತೆಂದು.

ದೃಶ್ಯ – 3

ಆ ಶಹರದಲ್ಲಿ ಹಸಿದ
ಮಗುವೊಂದು ಕೈ ಚಾಚಿ
ರೊಟ್ಟಿ ಕೇಳಿತು. ಆದರೆ
ಪೊಲೀಸರ ಲಾಠಿ
ಕೈ ಮೂಳೆ ಮುರಿಯಿತು.

ದೃಶ್ಯ – 4

ಯಾರದೋ ಮನೆಯಲ್ಲಿ
ರೊಟ್ಟಿ ಕದ್ದ ನಾಯಿ ಹಿಂದೆ,
ಹಸಿದ ಬೀದಿ ಮಕ್ಕಳ
ದಂಡೇ ಓಡುತ್ತಿದೆ ಈಗ.

ದೃಶ್ಯ – 5

ಆ ಗಲ್ಲಿಯ ಕಸದ ತೊಟ್ಟಿ
ಖಾಲಿಯಾಗಿದೆ. ಆಗಾಗ
ಹಸಿದ ನಾಯಿಗಳ ಜೊತೆ
ಅನಾಥ ಮಕ್ಕಳೂ ಕಾವಲು
ಕಾಯುತ್ತವೆ.

-ಅಲ್ಲಾಗಿರಿರಾಜ್ ಕನಕಗಿರಿ

Don`t copy text!