ನಾಚಿದೆ
ಕರ್ಮವ ತೊರೆದು
ಕಾಯಕವ ಕಲಿಸಿದ
ಬಸವಣ್ಣ
ಜ್ಞಾನವ ಬಿಟ್ಟು
ಅನುಭಾವಕೆ ಸೆಳೆದ
ಬಸವಣ್ಣ
ಜಡವ ಧಿಕ್ಕರಿಸಿ
ಜಂಗಮ ಪೋಷಿಸಿದ
ಬಸವಣ್ಣ
ಸನ್ಯಾಸ ವಿರೋಧಿಸಿ
ದಾಂಪತ್ಯ ಕೂಡಿಸಿದ
ಬಸವಣ್ಣ
ದಾನವ ಬಿಟ್ಟು
ದಾಸೋಹಕ್ಕೆ ಕೈಗೂಡಿದ
ಬಸವಣ್ಣ
ಸಂಸ್ಕೃತ ತೊರೆದು
ಕನ್ನಡ ವಚನಿಸಿದ
ಬಸವಣ್ಣ
ಮಠಗಳ ತೊರೆದು
ತಪವ ಬೇಡೆಂದು
ಅನುಸಂಧಾನಗೊಳಿಸಿದ
ಬಸವಣ್ಣ
ಸ್ಥಾವರವ ಬಿಟ್ಟು
ಚೈತನ್ಯಕ್ಕೆ ಹಾತೊರೆದ
ಬಸವಣ್ಣ
ಮಹಾಮನೆ ಕಟ್ಟಿದ
ದಿಟ್ಟ ಬಸವಣ್ಣ
ಬಸವಣ್ಣನ ಬಿಟ್ಟು
ಮಠ ಲಾಂಛನಗಳ
ಬೆನ್ನು ಹತ್ತುವ
ನೀಚ ಮೂಳರ ಕಂಡು
ನಾಚಿದೆ ನೋಡಾ
ಬಸವ ಪ್ರಿಯ ಶಶಿಕಾಂತ
–ಡಾ.ಶಶಿಕಾಂತ.ಪಟ್ಟಣ ಪುಣೆ