ಮಸ್ಕಿ ಉಪ ಚುನಾವಣೆ ಮತ ಎಣಿಕೆಯಲ್ಲಿ ಪಾಲ್ಗೊಂಡಿದ್ದ 15 ಸಿಬ್ಬಂದಿಗೆ ಕೊರೊನಾ ಪಾಸಿಟಿವ್!

 


e-ಸುದ್ದಿ, ಮಸ್ಕಿ
ರಾಯಚೂರಿನಲ್ಲಿ ಮೇ 2ರಂದು ನಡೆದ ಮಸ್ಕಿ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಪಟ್ಟಣದ 15ಕ್ಕೂ ಹೆಚ್ಚು ಕಂದಾಯ ಇಲಾಖೆ, ಪುರಸಭೆ ಹಾಗೂ ಶಿಕ್ಷಕರಿಗೆ ಕರೊನಾ ಪಾಸಿಟಿವ್ ಬುಧವಾರ ದೃಡವಾಗಿದೆ.
ಮಸ್ಕಿ ಕ್ಷೇತ್ರದ ಉಪಚುನಾವಣೆಯ ಮತ ಏಣೆಕೆ ಕಾರ್ಯದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ಚುನಾವಣೆ ಆಯೋಗ 24 ಗಂಟೆಗಳ ಮುಂಚೆ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ಕಡ್ಡಾಯವಾಗಿ ಕರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಅವರಿಗೆ ಮುಂಚಿತವಾಗಿ ಕರೊನಾ ಬಂದಿರುವ ಮಾಹಿತಿ ಇಲ್ಲದೆ ಮತ ಎಣಿಕೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬುಧವಾರ ವರದಿ ಬಂದಿದ್ದು 15ಕ್ಕೂ ಹೆಚ್ಚು ಸಿಬ್ಬಂದಿಗೆ ಕೊರೊನಾ ಸೋಂಕು ಇರುವುದು ದೃಡಪಟ್ಟಿದೆ. ಮತ ಏಣಿಕೆ ವೇಳೆ ರಾಪೀಡ್ ಟೆಸ್ಟ್‍ನಲ್ಲಿ ನೆಗಟಿವ್ ಬಂದಿದ್ದ ವರದಿ ಆರ್‍ಟಿಪಿಸಿಆರ್ ಟೆಸ್ಟ್‍ನಲ್ಲಿ ಪಾಸಿಟಿವ್ ವರದಿ ಬಂದಿದ್ದು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಕ್ಕೆ ಹೊಸ ಆತಂಕ ಸೃಷ್ಠಿಸಿದೆ.
ವಿಷಯ ತಿಳಿದು ಬುಧವಾರ ಬೆಳಿಗ್ಗೆ ಪುರಸಭೆ ಕಚೇರಿ ಹಾಗೂ ತಹಶೀಲ್ದಾರ್ ಕಚೇರಿಗೆ ಸಾನಿಟೈಸರ್ ಸಿಂಪಡಿಸಲಾಯಿತು.
26 ಜನಕ್ಕೆ ಕೊರೊನಾ ದೃಢ: 26 ಜನರಿಗೆ ಕರೊನಾ ಪಾಸಿಟಿವ್ ಬಂದಿದೆ ಎಂದು ವೈದ್ಯಾಧಿಕಾರಿ ಡಾ. ಮೌನೇಶ ತಿಳಿಸಿದ್ದಾರೆ. ಕರೊನಾ ಸೋಂಕಿತರ ಸಂರ್ಪಕಿತರನ್ನು ಪತ್ತೆ ಹಚ್ಚುವ ಕೆಲಸ ನಡೆಸಲಾಗುತ್ತಿದೆ. ಸೋಂಕಿತರ ಕಚೇರಿ, ಮನೆಗಳಿಗೆ ಪುರಸಭೆಯಿಂದ ಸಾನಿಟೈಸರ್ ಮಾಡಲಾಗಿದೆ. ಸೋಂಕಿತರಿಗೆ ಹೋಂ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜನತಾ ಕಪ್ರ್ಯೂಗೆ ಅಂಜದ ಜನ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೃರಸ್ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಜನತಾ ಕಪ್ರ್ಯೂ ಜಾರಿಗೆ ಮಾಡಿ ಅಗತ್ಯ ವ್ಯಪಾರ ವಹಿವಾಟುಗಳಿಗೆ ಸಮಯವನ್ನು ನಿಗದಿ ಮಾಡಿದೆ ಆದರೆ ಜನರು ಮಾತ್ರ ಅನಾಗತ್ಯವಾಗಿ ಓಡಾಟ ನಡೆಸುತ್ತಿದ್ದಾರೆ ಏನಾದರೂ ಕೇಳಿದರೆ ಬ್ಯಾಂಕ್‍ಗೆ ಹೋಗಿದ್ದೇ ಎಂದು ಹಾರಿಕೆ ಉತ್ತರ ನೀಡಿ ಹೋಗುತ್ತಿದ್ದಾರೆ ಇದರಿಂದ ಅಧಿಕಾರಿಗಳು ಅಸಾಹಯಕರು ಆದಂತೆ ಆಗಿದೆ. ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಾಲ್ಗೋಂಡಿದ್ದ ಬಹುತೇಕ ಜನರಿಗೆ ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕೊರೋನಾ ವೈರಸ್ ತಗುಲಿ ಈಗಾಗಲೆ ಹಲವರು ಚೇತರಿಸಿಕೊಂಡಿದ್ದಾರೆ. ಅಲ್ಲದೇ ಕೊವೀಡ್‍ನಿಂದ ಸುಮಾರು ಐದಾರು ಜನರು ಸಾವನ್ನಪ್ಪಿದ್ದಾರೆ.
ಪಟ್ಟಣದಲ್ಲಿ ಪ್ರತಿದಿನ ಕರೊನಾ ಪ್ರಕರಣಗಳು ಹೆಚ್ಚುತ್ತಿವೆ ಆದ್ದರಿಂದ ಸಾರ್ವಜನಿಕರು ಈಗಲಾದರೂ ಎಚ್ಛೆತ್ತು ಅನಾವಶ್ಯಕವಾಗಿ ಓಡಾಡುವುದನ್ನು ನಿಲ್ಲಿಸಬೇಕು ಎಂದು ಪಿಎಸ್‍ಐ ಸಿದ್ರಾಮಪ್ಪ ಮನವಿ ಮಾಡಿದ್ದಾರೆ

 

 

Don`t copy text!