ಬಳಗಾನೂರಿನಲ್ಲಿ ಅಧಿಕಾರಿಗಳಿಲ್ಲದೇ ಬೀಕೋ ಎನ್ನುತ್ತಿರುವ ಸರ್ಕಾರಿ ಕಚೇರಿಗಳು


e-ಸುದ್ದಿ, ಮಸ್ಕಿ
ತಾಲೂಕಿನ ಬಳಗಾನೂರು ಪಟ್ಟಣದಲ್ಲಿ ಇರುವ ಮೂರು ನಾಲ್ಕು ಸರ್ಕಾರಿ ಕಚೇರಿಗಳು ಸದಾ ಬಂದ್ ಆಗುತ್ತಿದ್ದು ಅಧಿಕಾರಿಗಳು ಬಂದಾಗ ಮಾತ್ರ ತೆರದುಕೊಳ್ಳುವತ್ತಿವೆ. ಇದರಿಂದಾಗಿ ಸರ್ಕಾರಿ ಕಚೇರಿಗಳು ಬಂದ್ ಇದ್ದು ಬೀಕೋ ಎನ್ನುತ್ತಿವೆ.
ಬಳಗಾನೂರು ಪಟ್ಟಣದಲ್ಲಿ 14 ಸಾವಿರ ಜನ ಸಂಖ್ಯೆ ಇರುವ ದೊಡ್ಡ ಪಟ್ಟಣ. ಸಾರ್ವಜನಿಕರು ಹತ್ತು ಹಲವು ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಬಂದರೆ ಅಧಿಕಾರಿಗಳು ಇಲ್ಲದೆ ಕಚೇರಿಗಳು ಬಂದ್ ಆಗಿರುತ್ತವೆ. ಸಾರ್ವಜನಿಕರು ಕಚೇರಿಗೆ ಅಲೆದಾಡಿ ಸುಸ್ತ್ ಆಗಿ ಇಡೀ ಶಾಪ ಹಾಕುತ್ತಿದ್ದಾರೆ.
ಪಶು ಆಸ್ಪತ್ರೆ ಇದೆ. ಆದರೆ ವೈದ್ಯರೇ ಬರುವುದಿಲ್ಲ. ಕಳೆದ 15 ದಿನಗಳಿಂದ ಆಸ್ಪತ್ರೆಗೆ ಬೀಗ ಹಾಕಲಾಗಿದೆ. ಪಟ್ಟಣ ಪಂಚಾಯತಿಗೆ ಮುಖ್ಯಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿರದೆ ಸಿಂಧನೂರಿನಿಂದ ಬರುತ್ತಿದ್ದಾರೆ. ಮುಖ್ಯಾಧಿಕಾರಿ ಬಂದಾಗ ಸಾರ್ವಜನಿಕರು ಕೆಲಸ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ರೈತ ಸಂಪರ್ಕ ಕೇಂದ್ರ ಬಳಗಾಣೂರು ಪಟ್ಟಣದಿಂದ 4 ಕೀಮೀ. ದೂರದ ಹೊರ ವಲಯದಲ್ಲಿದೆ. ಅಲ್ಲಿಗೆ ಕೃಷಿ ಅಧಿಕಾರಿಗಳು ಬರುವುದು ಕಷ್ಟ ಕಷ್ಟ. ಅಂಚೆ ಕಚೇರಿ ಇದ್ದು ಇಲ್ಲದಂತಿದೆ. ಪೊಸ್ಟ್ ಮಾಸ್ಟರ್ ಮತ್ತು ಪೊಸ್ಟ್‍ಮನ್‍ಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ. ವೃದ್ಧ ಫಲಾನುಭವಿಗಳು, ಅಂಗವಿಕಲರು, ವಿಧವೆಯರು ಮಾಸಿಕ ವೇತನಕ್ಕಾಗಿ ಅಂಚೆ ಕಚೇರಿಗೆ ಅನೇಕ ತಿಂಗಳಿನಿಂದ ಅಲೇದಾಡುತ್ತಿದ್ದಾರೆ.
ಬಳಗಾನೂರಿನಲ್ಲಿರುವ ನೆಮ್ಮದಿ ಕೇಂದ್ರ ಜನರ ನೆಮ್ಮದಿಯನ್ನೆ ಕಸಿದುಕೊಂಡಂತಿದೆ. ಯಾವಗಲು ಬಂದ್ ಇರುತ್ತದೆ. ಪುರಸಭೆಯವರು ಶುದ್ಧ ಕುಡಿಯುವ ನೀರು ಕೊಡದೆ ಹಳ್ಳದ ನೀರನ್ನೆ ಕುಡಿಸುತ್ತಿದ್ದಾರೆ. ಜಲ ಶುದ್ಧಿಕರಣ ಘಟಕ ಇಲ್ಲ. ಶುದ್ಧ ಕುಡಿಯುವ ನೀರು ಮರಿಚಿಕೆಯಾಗಿದೆ.
ಬಳಗಾನೂರಿನಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಗ್ರಹಣ ಹಿಡಿದಂತಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಮೂಲ ಸೌಕರ್ಯಗಳನ್ನು ಸರಿಯಾಗಿ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
——————————

ಕಳೆದ ಒಂದು ವಾರದಿಂದ ಬಳಗಾನೂರು ಪಶು ಆಸ್ಪತ್ರೆ ಬಂದ್ ಆಗಿದೆ. ದನ ಕರುಗಳಿಗೆ ತೊರಿಸಲು ಬಂದರೆ ಬಂದ್ ಆಗಿದ್ದರಿಂದ ವಾಪಸ್ಸು ಹೋಗಿದ್ದೇವು. ಪೊತ್ನಾಳದಲ್ಲಿ ಖಾಸಗಿ ನಾಟಿ ವೈದ್ಯರಿಂದ ದನಕ್ಕೆ ಔಷಧಿ ಕೊಡಿಸಿದ್ದೇವೆ.
-ಹನುಮಂತಪ್ಪ ಬೆಳಿಗ್ಗನೂರು ಗ್ರಾಮಸ್ಥ
—————————-

ಬಳಗಾನೂರು ಪಟ್ಟಣದಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದಲ್ಲಿ 4 ಶುದ್ಧಕುಡಿಯುವ ನೀರಿನ ಘಟಕಗಳಿವೆ. ಎರಡು ವಾರ್ಡಗಳಿಗೆ ಕೆರೆಯಿಂದ ನೀರನ್ನು ಶುದ್ಧ ಮಾಡಿ ಕೊಡಲಾಗುತ್ತದೆ.
-ಶರಣಬಸಯ್ಯ ಮುಖ್ಯಾಧಿಕಾರಿ ಪಟ್ಟಣ ಪಂಚಾಯತಿ ಬಳಗಾನೂರು.

Don`t copy text!