e-ಸುದ್ದಿ, ಮಸ್ಕಿ
ಪಟ್ಟಣ ಸೇರಿದಂತೆ ವಿವಿಧಡೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ಇದುವರೆಗೆ 1083 ಜನ ಸೊಂಕಿತರನ್ನು ಗುರುತಿಸಿದ್ದು ಅವರಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ.
ಮಸ್ಕಿ ಪುರಸಭೆ ವ್ಯಾಪ್ತಿಯಲ್ಲಿ 295 ಜನ ಬಳಗಾನೂರು ಪ.ಪಂ.ವ್ಯಾಪ್ತಿಯಲ್ಲಿ 32 ಜನರನ್ನು ಕ್ವಾರಂಟೈನ್‍ಗೆ ಒಳ ಪಡಿಸಲಾಗಿದೆ. ಕರೊನ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರು ಕರೊನಾ ನಿಯಮದಂತೆ 15 ದಿನ ಕ್ವಾರಂಟೈನ್‍ಲ್ಲಿ ಇರಬೇಕು. ಆದರೆ ಒಂದೇರಡು ದಿನ ಮನೆಯಲ್ಲಿದ್ದು ನಂತರ ಹೊರಗಡೆ ತಿರುಗಾಡುತ್ತಿರುವದು ಸ್ಥಳಿಯ ಆಡಳಿತಕ್ಕೆ ತಲೆನೊವಾಗಿ ಪರಿಣಮಿಸಿದೆ.
ಪುರಸಭೆ ಮತ್ತು ಆರೋಗ್ಯ ಇಲಾಖೆಯವರು ಕ್ವಾರಂಟೈನ್ ಇದ್ದವರ ಮನೆಗಳಿಗೆ ತೆರಳಿ ಜಿಪಿಎಸ್ ಪೋಟೋ ಅಪಲೋಡ್ ಮಾಡಿದ ನಂತರ ಸಂಪರ್ಕಿತರು ನಿಯಮ ಗಾಳಿಗೆ ತೂರಿ ಎಲ್ಲೆಂದರೆ ಅಲ್ಲೆ ತಿರುಗಾಡುತ್ತಿದ್ದಾರೆ.
ಪೊಲೀಸರು, ಪುರಸಭೆ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಕಟ್ಟು ನಿಟ್ಟಿನ ಬೀಗಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸ್ಯಾನಿಟೈಸರ್ ಸಿಂಪರಣೆ ಃ ಪುರಸಭೆ ವತಿಯಿಂದ ಪಟ್ಟಣದ ಮುಖ್ಯ ಬೀದಿಯಲ್ಲಿ, ವೃತ್ತಗಳಳ್ಲಿ ಮತ್ತು ಅಂಗಡಿಗಳಿಗೆ ಅಗ್ನಿ ಶಾಮಕ ದಳದ ವಾಹನದಿಂದ ಸ್ಯಾನಿಟೈಸರ್ ಸಿಂಪರಣೆ ಮಾಡಲಾಯಿತು.
ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಮುಖ್ಯಾಧಿಕಾರಿ ಹನುಮಂತಮ್ಮ , ಮ್ಯಾನೇಜರ ಸತ್ಯನಾರಯಣ, ಆರೋಗ್ಯಾಧಿಕಾರಿ ನಾಗರಾಜ, ಅಗ್ನಿ ಶಾಮಕ ದಳದ ಅಧಿಕಾರಿಗಳು ಹಾಗೂ ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಇದ್ದರು.