ಪರಿಮಳ ಅರಸಿ ಬಂದಾನ ಪತಿರಾಯ
ಮೊಗ್ಗು ಮಲ್ಲಿಗೆ ಮಾಲೆ ಹಿಗ್ಗಿಲೆ ಮುಡದಿನಿ
ಪರಿಮಳ ಅರಸಿ ಬಂದಾನ / ಪತಿರಾಯ
ಸಗ್ಗದ ಸವಿಯ ಸವಿದೇನ ||
ಮಲ್ಲಿಗೆ ತಂದು ಮೆಲ್ಲಗೆ ಕರದಾನ
ಮಲ್ಲಿಗೆ ಮುಡಿಸಿ ನಗತಾನ/ಪತಿರಾಯ
ಮೆಲ್ಲಗೆ ಪಿಸುಮಾತ ಉಲಿದಾನ ||
ಮಲ್ಲಿಗೆ ಮನದವನು ಮನತುಂಬಿ ನಗುವವನು
ಮುದ್ದು ಮಾತಿಲೆ ಕರೆಯುವನು/ಪತಿರಾಯ
ಮೆಲ್ಲಗೆ ಮಲ್ಲಿಗೆ ಮುಡಿಸ್ಯಾನ ||
ಮಲ್ಲಿಗೆ ಮೊಗ್ಗರಳಿ ಚೆಲ್ಯಾವ ಪರಿಮಳ
ಹೆಜ್ಜೆ ಹೆಜ್ಜೆಗೆ ಘಮ್ಮೆಂದು / ಹರಡ್ಯಾವ
ಮತ್ಯಾವ ಪರಿಮಳ ಅರಸಲಿ.
–ಸವಿತಾ ಮಾಟೂರು ಇಲಕಲ್ಲ
ಸಂಭ್ರಮದ ಕವಿತೆ ಸೊಗಸಾದ ಕಂಪು ಸೂಸಿದೆ