ಮಸ್ಕಿಯಲ್ಲಿ ವಾಹನ ಸವಾರರಿಂದ ಕೊವೀಡ್ ನಿಯಮ ಉಲ್ಲಂಘನೆ, ಪಿಎಸ್‍ಐ ಸಿದ್ದರಾಮ ನೇತೃತ್ದಲ್ಲಿ ವಾಹನಗಳು ಜಪ್ತಿ

ಮಸ್ಕಿಯಲ್ಲಿ ವಾಹನ ಸವಾರರಿಂದ ಕೊವೀಡ್ ನಿಯಮ ಉಲ್ಲಂಘನೆ, ಪಿಎಸ್‍ಐ ಸಿದ್ದರಾಮ ನೇತೃತ್ದಲ್ಲಿ ವಾಹನಗಳು ಜಪ್ತಿ
e- ಸುದ್ದಿ, ಮಸ್ಕಿ
ಪ್ರತಿದಿನವೂ ಕರೋನಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದರೂ ಸಹ ಜನರು ಅನಗತ್ಯವಾಗಿ ಕರೊನಾ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ರಸ್ತೆ ಮೇಲೆ ತಿರುಗಾಡುತ್ತಿದ್ದ ಬೈಕ್, ಗೂಡ್ಸ್ ಗಾರಿ ಸೇರಿದಂತೆ ಇತರೆ ವಾಹನಗಳನ್ನು ಪಿಎಸ್‍ಐ ಸಿದ್ದರಾಮ ನೇತೃತ್ವದ ಪೆÇಲೀಸರು ಗುರುವಾರ ಜಪ್ತಿ ಮಾಡಿದರು.
ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಕರೊನಾ ಪಾಸಿಟಿವ್ ಸೊಂಕಿತರ ಸಂಖೆ ಹೆಚ್ಚಾಗುತ್ತಿರುವ ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನಿ ಸೂಚನೆ ನೀಡಿದ್ದರೂ ಸಹ ಜನರು ಯಾವುದಕ್ಕೂ ಹೆದರದೆ ಬೇಕಾಬಿಟ್ಟಿಯಾಗಿ ಓಡಾಟ ನಡೆಸುತ್ತಿದ್ದಾರೆ. ಇದರಿಂದ ಪೊಲೀಸ್ ಅಧಿಕಾರಿಗಳಿಗೆ ತಲೇನೋವಾಗಿ ಪರಿಣಮಿಸಿದ್ದು, ಆದ್ದರಿಂದ ಇದಕ್ಕೆ ಕಡಿವಾಣ ಹಾಕಲು ತಾಲ್ಲೂಕು ಆಡಳಿತ, ಪುರಸಭೆ ಹಾಗೂ ಪೆÇಲೀಸ್ ಇಲಾಖೆ ಮುಂದಾಗಿದೆ. ಅನವಶ್ಯವಾಗಿ ಮನೆಯಿಂದ ಹೊರ ಬಂದಂತವರ ವಾಹನ ವಶಕ್ಕೆ ತೆಗೆದುಕೊಂಡು ದಂಡ ವಿಧಿಸಿ ಎಚ್ಚರಿಕೆ ನೀಡಿದರು.
ವಾಹನಗಳು ವಶ: ಪಟ್ಟದಲ್ಲಿ ಅನಗತ್ಯವಾಗಿ ಕೊವೀಡ್ ನಿಯಮ ಉಲ್ಲಂಘಿಸಿ ಬೇಕಾ ಬಿಟ್ಟಿಯಾಗಿ ಸಂಚರಿಸುತ್ತಿದ್ದ ಹತ್ತಕ್ಕೂ ಅಧಿಕ ಟಾಟಾ ಏಸ್ ಸೇರಿದಂತೆ ಸುಮಾರು 40ಕ್ಕೂ ಅಧಿಕ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಸಿಕೊಂಡು ದಂಡ ವಿಧಿಸಿ ಎಚ್ಚರಿಕೆ ನೀಡಿ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದರು.
ಎಪ್‍ಐಆರ್ ಧಾಖಲು: ಕೊವೀಡ್ ನಿಯಮ ಮೀರಿ ವ್ಯಾಪಾರ ನಡೆಸುತ್ತಿದ್ದ ಕಿರಾಣಿ ಅಂಗಡಿ ಮಾಲೀಕರೊಬ್ಬರ ಮೇಲೆ ಗುರುವಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂದೆ ಯಾವುದೇ ವ್ಯಾಪಾರಿಗಳು ಸಹ ನಿಯಮ ಮೀರಿ ಅಂಗಡಿಗಳು ತೆರೆದದ್ದು ಕಂಡು ಬಂದರೆ ಅಂತವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು ಎಂದು ಪಿಎಸ್‍ಐ ಸಿದ್ದರಾಮ ತಿಳಿಸಿದ್ದಾರೆ.
7-ಎಂಎಸ್‍ಕೆ-1
ಮಸ್ಕಿಯಲ್ಲಿ ಕೊವೀಡ್ ನಿಯ ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನಗಳನ್ನು ಪಿಎಸ್‍ಐ ಸಿದ್ದರಾಮ ನೇತೃತ್ವದಲ್ಲಿ ವಶಕ್ಕೆ

Don`t copy text!