e- ಸುದ್ದಿ, ಮಸ್ಕಿ
ರಾಜ್ಯದಲ್ಲಿ ದಿನೇ ದಿನೇ ಕೊವೀಡ್ ಪ್ರಕರಣಗಳು ಹೆಚ್ಚಾಗಿ ಆಕ್ಸಿಜನ್ ಇಲ್ಲದೇ ರೋಗಿಗಳು ಸಾವನ್ನಪ್ಪುತ್ತಿರುವ ಸುದ್ದಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮಸ್ಕಿಯ ವೆಲ್ಡಿಂಗ್ ಅಂಗಡಿ ಮಾಲಿಕರೊಬ್ಬರು ತಮ್ಮ ಅಂಗಡಿ ಬಳಕೆಗಾಗಿ ತಂದಿಟ್ಟಿದ್ದ ಆಕ್ಸಿಜನ್ ಸಿಲಿಂಡರ್‍ಗಳನ್ನು ಕರೊನಾ ರೋಗಿಗಳಿಗಾಗಿ ಸಿಂಧನೂರಿನ ಬಸನಗೌಡ ಬಾದರ್ಲಿ ಫೌಂಡೇಶನ್‍ಗೆ ಕಳಿಸಿದ್ದಾರೆ.
ಮಸ್ಕಿ ಪಟ್ಟಣದ ಸಿಂಧನೂರು ರಸ್ತೆಯಲ್ಲಿರುವ ಭಾರತ ವೆಲ್ಡಿಂಗ್ ಶಾಪ್ ಮಾಲೀಕ ಜಾಫರ್ ಎನ್ನುವವರು ತಮ್ಮ ಅಂಗಡಿಯಲ್ಲಿ ವೆಲ್ಡಿಂಗ್ ಕೆಲಸಕ್ಕಾಗಿ ತಂದಿಟ್ಟಿದ್ದ 5 ಆಕ್ಸಿಜನ್ ಸಿಲಿಂಡರ್‍ಗಳನ್ನು ಸಿಂಧನೂರಿನ ಬಸನಗೌಡ ಬಾದರ್ಲಿ ಫೌಂಡೇಷನ್‍ಗೆ ಟಾಟಾ ಏಸ್ ವಾಹನದ ಮೂಲಕ ಕಳಿಸಿದ್ದಾರೆ.
ಶಬ್ಬೀರ್ ಚೌದ್ರಿ, ರೀಯಾಜ್ ಶೇಡ್ಮಿಯವರ ಸಹಾಯದಿಂದ ಆಕ್ಸಿಜನ್ ಸಿಲಿಂಡರ್‍ಗಳನ್ನು ಸಾಗಿಸಿದರು. ಇದರಿಂದ ಇಂತಹ ಸಂಕಷ್ಟದ ಸಮಯದಲ್ಲಿ ತಮ್ಮ ಅಂಗಡಿಯಲ್ಲಿ ಕೆಲಸವನ್ನು ಸ್ಥಗಿತ ಮಾಡಿ ಜನರ ಜೀವ ಉಳಿಸುವುದಕ್ಕಾಗಿ ಇಂತಹ ಪುಣ್ಯದ ಕೆಲಸಕ್ಕೆ ಮುಂದಾಗಿರುವ ಜಾಫರ್ ಅವರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.