ಭಾವೈಕ್ಯತೆಯ ಬಸವ
ಬಸವ ನಿನ್ನ ಹೆಸರು ಹೇಳೋ ಆಸೆಯಾಗಿದೆ.
ಶರಣ ದಾರ್ಶನಿಕರ ನೆನೆದು ಧನ್ಯನಾಗುವೆ!!ಪ!!
ಸತ್ಯ ಶುದ್ಧ ಕಾಯಕದ ತಿರುಳು ತಿಳಿಸಿದೆ
ನಿತ್ಯ ಅಮರಗಣಂಗಳ ದಾಸೋಹ ನಡೆಸಿದೆ
ಹೆಣ್ಣು ಗಂಡು ತಾರತಮ್ಯ ಭ್ರಾಂತಿ ಬಿಡಿಸಿದೆ
ಸರ್ವರಲ್ಲಿ ಸಾಮರಸ್ಯ ನಿಜ ಬೀಜ ಬಿತ್ತಿದೆ !!೧!!
ಮೌಡ್ಯತೆಯನು ವಿರೋಧಿಸಿದ ಧೀಮಂತನು
ಸರ್ವರಿಗೂ ಸರಳತೆಯ ತಂದೆ ಸಿರಿವಂತನು
ಅಧಿಕಾರ ಧಿಕ್ಕರಿಸಿದ ದೊಡ್ಡ ಗುಣವಂತನು
ಹಿರಿಯರಲ್ಲಿ ಕಿರಿಯನಾಗಿ ನಡೆದಂತವನು !!೨!!
ಒಡೆದು ಹೋದ ಮನಸ್ಸುಗಳನ್ನು ಒಂದು ಮಾಡಿದೆ
ಮನುಜ ಕುಲಕೆ ಬೇಕಾದ ನಿಜ ಮಹತ್ವ ತಿಳಿಸಿದೆ
ಮೇಲು ಕೀಳು ಎಂಬ ಕಸವ ಕೀತ್ತು ಎಸೆದೆ ನೀನು
ಜ್ಞಾನವೆಂಬ ಜ್ಯೋತಿ ಹಚ್ಚಿ ಬೆಳಕು ತೋರಿದೆ !!೩!!
ಹೆಣ್ಣಿಗಿಲ್ಲದ ಜನಿವಾರವ ಬೇಡವೆಂದೆ ನೀನು
ಸರ್ವರಿಗೂ ಇಷ್ಟಲಿಂಗ ಶ್ರೇಷ್ಠವೆಂದೆ ನೀನು
ಅರುವಿನ ಕುರುಹು ತಿಳಿಯಲು ಲಿಂಗವ ಕೊಟ್ಟೆ
ವಿಭೂತಿ ಲಿಂಗ ಪ್ರೀಯಾ ನಮಗೆ ಶರಣನಾದೆ!!೪!!
12ನೇಯ ಶತಮಾನದ ಸತ್ಯ ಬೀಜ ಬಿತ್ತಿದೆ
ಆ ಧರ್ಮದ ಗಿಡವು ಈಗ ಹೆಮ್ಮರವಾಗಿದೆ
ಜಗದಗಲ ಮುಗಿಲಗಲ ನಿನ್ನ ನಾಮ ತುಂಬಿದೆ
ಬಸವಣ್ಣನ ನಾ ನಿನ್ನ ನೆನೆದು ಧನ್ಯನಾಗುವೆ !!೫!!
-ಪಂಪಯ್ಯಸ್ವಾಮಿ ಸಾಲಿಮಠ ಅಂತರಗಂಗಿ ಸಿಂಧನೂರ
12ನೆ ಶತಮಾನದಲ್ಲಿ ಸಮಾಜದಲ್ಲಿ ಎಲ್ಲರಲ್ಲೂ ಸಮಾನತೆಯನ್ನು, ಭಾವೈಕ್ಯತೆ ಯನ್ನು ಸಾರಿದ ಮಹಾನ್ ಶರಣ ಶ್ರೀ ಬಸವಣ್ಣನವರಿಗೆ ನಮಿಸುತ್ತಾ,
ಶರಣ ಪಂಪಯ್ಯಸ್ವಾಮಿಯರಿಗೆ ಶರಣು ಶರಣಾರ್ಥಿ.
ಕವನ ತುಂಬಾ ಚೆನ್ನಾಗಿದೆ. ಸ್ವಾಮಿ.
ಆರ್.ಪ್ರಕಾಶ್.