ಬಸವಾದಿ ಶರಣರು ಕಂಡ ಕೊಂಡ ಧರ್ಮ

ಬಸವಾದಿ ಶರಣರು ಕಂಡ ಕೊಂಡ ಧರ್ಮ

“ಧರ್ಮ” ಎನ್ನುವ ಪದವು ಸಂಸ್ಕೃತ ಪದದಿಂದ ಬಂದದ್ದು “ಧಾರಣಾತ್ ಧರ್ಮಃ “-ಅಂದರೆ ಯಾವುದನ್ನು ಧರಿಸಲು ಆಧರಿಸಲು ಸಮರ್ಥವಾಗುತ್ತದೆಯೋ ಅದು ಧರ್ಮವೆಂದಾಗುತ್ತದೆ. ಧರ್ಮ ಅಂದರೆ ಧಾರಣ .
ಜಿಡ್ಡುಗಟ್ಟಿದ ಮೃತಪ್ರಾಯವಾಗ ಬಹುದಾದ ಸಾಮಾಜಿಕ ಧಾರ್ಮಿಕ ರಾಜಕೀಯ ಆರ್ಥಿಕ ವ್ಯವಸ್ಥೆಗೆ ಒಂದು ಬೃಹತ್ ಪರ್ಯಾಯ ವ್ಯವಸ್ಥೆಯನ್ನು 12ನೆ ಶತಮಾನದಲ್ಲಿ ಶರಣರು ಕಲ್ಪಿಸಿದರು.
ಧರ್ಮವು ಶೊಷಣೆಯಾದಾಗ ಮೋಸ ಕಪಟ ಕಳ್ಳತನ ಕಂದಾಚಾರ ಮೂಡನಂಬಿಕೆ ತಾಂಡವವಾಡುವಾಗ ಬಸವಣ್ಣನವರು ” ದಯವಿಲ್ಲದ ಧರ್ಮ ಅದೆವುದಯ್ಯಾ ” ಎಂದು ಧರ್ಮಕ್ಕೆ ದಯೆ ಪ್ರೀತಿಯನ್ನು ಅಡಿಪಾಯ ಹಾಕಿದರು.
Religion is a way of life -ಅದು ಬರಿ ಸಿದ್ಧಾಂತವಲ್ಲ ಬದುಕಿನ ಕ್ರಮ ಅಥವಾ ಸಾಧನೆಯ ಹಾದಿ(Religion is a way of life but not view of Life ). ಬದುಕನ್ನ ಕೇವಲ ಅವಲೋಕಿಸಿ ವ್ಯಾಖ್ಯಾನ ಮಾಡುವುದು ಧರ್ಮವಲ್ಲ.
ಬಸವಣ್ಣ ನಿರ್ಮಲವಾದ ಮನಸ್ಸಿಗೆ ಮನುಷ್ಯ ತನ್ನನ್ನೇ ಆತ್ಮಾವಲೋಕನ ಮಾಡಿಕೊಳ್ಳಬೇಕು ” ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯಾ ” ಮಾವಿನ ಕಾಯೋಳು ಎಕ್ಕೆ ಕಾಯಿ ನಾನಯ್ಯಾ ” “ಮನವೆಂಬ ಮರ್ಕಟ ” “ವಿಷಯ ವೆಂಬ ಹಸುರೆನ್ನ ಮುಂದೆ ಪಸರಿಸಿದಿರಿ” ಹೀಗೆ ತನು ವಿರೋಧ ಆತ್ಮಾವಲೋಕನ ಜೊತೆಗೆ ಭ್ರತ್ಯಾಚಾರದ ಕಿಂಕರ ಭಾವನೆಯಿಂದಾ ಬಸವಣ್ಣನವರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಕ್ತಿ ಚಳುವಳಿ ಮತ್ತು ಸಮತೆಯ ಸಂಘರ್ಷವನ್ನು ಸಾರಿದರು.
ಪರಿಣಾಮವಾಗಿ ಕಕ್ಕಯ್ಯ ಚೆನ್ನಯ್ಯ ಹರಳಯ್ಯಾ ಮಾಚಯ್ಯ ಚೆಂದಯ್ಯ,ಸತ್ಯಕ್ಕಾ ಕಾಳವ್ವೆ,,ನಿ೦ಬೆಕ್ಕಾ,,ಅಂಬಿಗರ ಚೌಡಯ್ಯಾ ಹೀಗೆ ಕೆಳಸ್ತರದ ಜನರ ಸಂಘಟನೆಯಿಂದಾ ಲಿಂಗಾಯತ ಎಂಬ ಒಂದು ಹೊಸ ಧರ್ಮವನ್ನು ಬಸವಣ್ಣ ಮತ್ತು ಎಲ್ಲಾ ಶರಣರು ಸ್ಥಾಪಿಸಿದರು ಧರ್ಮ ಗುರು ಸ್ಥಾಪಕ ಬಸವಣ್ಣ.
ವಚನಗಳು ಸಮತೆ ಶಾಂತಿ ಪ್ರೀತಿ ವಿಶ್ವ ಬಂಧುತ್ವ ಸಾರುವ ನಿರ್ವಿವಾದ ಸತ್ಯಗಳು . ಆದರೆ ಯಾವುದೇ ಲಾಂಛನ ಕಾವಿ ಮಠವಿರದ ಈ ಧರ್ಮದಲ್ಲಿ ಮತ್ತೆ ಮೌಡ್ಯ
ತುಂಬಿಕೊಂಡಿವೆ . ಶರಣರ ಮೂಲ ಆಶಯ ಗುರುತಿಸದೆ ಅದನ್ನು ತಮ್ಮ ಗ್ರಹಿಕೆಗೆ ತಕ್ಕಂತೆ ವ್ಯಾಖ್ಯಾನ ಮಾಡುತ್ತಾ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ.

ಶರಣರು ಅನುಭಾವಿಗಳು (MYSTICS PAR EXCELLENCE ).
ಕಾಯಕ ದಾಸೋಹ ತತ್ವವನ್ನು ಮೊಟ್ಟ ಮೊದಲ ಬಾರಿಗೆ ತೋರಿ ಬದುಕಿದ ಧೀರರು .ಶರಣರ ಆಧ್ಯಾತ್ಮ ದೃಷ್ಟಿ ಸಂಪದ್ದ್ಭರಿತ ಹಾಗು ಗಟ್ಟಿ ಧ್ವನಿ ಹೊಂದಿದ ಬದುಕಿನ
ಪಥ ಸೋಪಾನ.
“ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ” ಎಂದೆನ್ನುವ ಶರಣರು ಲಿಂಗ ಯೋಗ (ಪೂಜೆಯಲ್ಲ ) ಮೂಲಕ ಅನುಸಂಧಾನ ಮಾಡಿ ಮನುಷ್ಯ ಹೇಗೆ ತಾನೇ ದೇವನಾಗಬಲ್ಲನು ಎಂದು ಸಾಧಿಸಿ ತೋರಿದ್ದಾರೆ.ಅಲ್ಲಿಯವೆರೆಗಿದ್ದ ಸೋಹಂ ಎಂಬ ಭಾವವು ದಾಸೋಹಂ ಎಂಬ ಮಹಾನ್ ತತ್ವದಲ್ಲಿ ಪರಿವರ್ತನೆ ಗೊಂಡಿತು . ಇಂತಹ ಕ್ರಾಂತಿ ಜಗತ್ತಿನಲ್ಲಿಯೇ ಅಪರೂಪವಾಗಿದೆ. ವರ್ಗ ವರ್ಣ ಆಶ್ರಮ ಲಿಂಗ ಬೇಧ ದಿಕ್ಕರಿಸಿದ ಶರಣರು ಸರ್ವಕಾಲಿಕ ಸಮಕಾಲೀನ ಸಮಾನತೆಯ ಸಮಾಜದ ರೂವಾರಿಗಳು.



ಡಾ.ಶಶಿಕಾಂತ ಪಟ್ಟಣ , ಕಾರ್ಯಾಧ್ಯಕ್ಷರು ಬಸವ ಇಂಟರ್ ನ್ಯಾಷನಲ್ ಅಂಡರ್ ಸ್ಟಾಂಡಿ೦ಗ ಅಂಡ್ ರಿಸರ್ಚ್ ಸೆಂಟರ್ -ಪುಣೆ

Don`t copy text!